ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಪಡಿತರ ಅಕ್ಕಿಯಲ್ಲಿ ಯೂರಿಯಾ ಪತ್ತೆಯಾಗಿದೆ. ಗ್ರಾಮದ ಕೆಲವರು ಅಕ್ಕಿಯನ್ನು ವಾಪಸ್ ಕೊಟ್ಟಿದ್ದು, ಇನ್ನೂ ಕೆಲವರು ಹಾಗೆಯೇ ಅನ್ನ ಮಾಡಿ ಸೇವಿಸಿದ್ದರು.ಇದೀಗ ಕೆಲವರಿಗೆ ವಾಂತಿ, ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರೆಳಿ ಹಲವು ಕಡೆ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ.
ಒಟ್ಟಿನಲ್ಲಿ ಗ್ರಾಮದಲ್ಲಿ ಹಲವರು ಅನಾರೋಗ್ಯಕ್ಕೀಡಾಗುತ್ತಿರೋದು ಯೂರಿಯಾ ಮಿಶ್ರಿತ ಪಡಿತರ ಅಕ್ಕಿಯೇ ಕಾರಣ ಅಂತ ಕೆಲವರು ಹೇಳ್ತಿದ್ರೆ, ಅದೆಲ್ಲಾ ಏನೂ ಅಲ್ಲ ಅಂತಾ ಕೆಲವರು ಅಂತಿದ್ದಾರೆ. ಸದ್ಯ ಆರೋಗ್ಯ ಅಧಿಕಾರಿಗಳು ಜನರ ಆರೋಗ್ಯ ಪರೀಕ್ಷೆಗೆ ಮುಂದಾಗಿದ್ದು, ಆಸಲಿ ಸತ್ಯ ಗೊತ್ತಾಗಬೇಕಿದೆ.