Thursday, January 23, 2025

ಮಂಗಳೂರು ತಾಂಬೂಲ ಪ್ರಶ್ನೆಗೆ ಡಿಕೆಶಿ ಕಿಡಿ

ಬೆಂಗಳೂರು: ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು ಎಂದು ಮಂಗಳೂರು ತಾಂಬೂಲ ಪ್ರಶ್ನೆಗೆ ಡಿಕೆಶಿ ಕಿಡಿಕಾಡಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಭಾವನಾತ್ಮಕ ವಿಚಾರ ಅದನ್ನ ಅವರು ಮನೆಯಲ್ಲಿ ಇಟ್ಟುಕೊಳ್ಳಲಿ. ಸರ್ಕಾರ ಮಧ್ಯಪ್ರವೇಶ ಮಾಡ್ಬೇಕು, ಕೂಡಲೇ ಬಂಧಿಸಬೇಕು. ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು. ಜಿಲ್ಲಾಧಿಕಾರಿ, ಎಸ್ ಪಿ‌ ಮಧ್ಯಪ್ರವೇಶ ಮಾಡ್ಬೇಕು ಎಂದರು.

ಅದಲ್ಲದೇ ಇವರು ರಾಜ್ಯವನ್ನ ಸಾಯಿಸ್ತಿದ್ದಾರೆ. ಅವರಿಗೆ ಏನೇನ್ ನಂಬಿಕೆ ಇದೆಯೋ..? ಏನೇನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಮಧ್ಯಪ್ರವೇಶ ಮಾಡಲ್ಲ. ಅವರು ಈ ರಾಜ್ಯ ಸಾಯಿಸ್ತಿದ್ದಾರೆ. ಅವರ ಸ್ವಂತಕ್ಕೆ, ಮನೆಗೆ ಏನ್ ಬೇಕಾದ್ರೂ ಮಾಡಲಿ. ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ ಮುಜರಾಯಿ ಇಲಾಖೆಯೂ ಇದೆ, ಕ್ಯಾಬಿನೆಟ್ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ. ಆದರೆ ಖಾಸಗಿಯಾಗಿ ಹೀಗೆ ಮಾಡಬಾರದು, ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಹೇಳಿದರು.

ಇನ್ನು, ನನಗೂ ಕಾಲ್ ಬಂದಿತ್ತು. ನಮ್ಮ ಕಾರ್ಯಕರ್ತರು ಕಾಲ್ ಮಾಡಿ ನುಗ್ಗುತ್ತೇವೆ ಅಂದಿದ್ರು. ನಮ್ ಪಾರ್ಟಿಗೂ ಅದಕ್ಕೂ ಸಂಬಂಧ ಇಲ್ಲ. ಮರ್ಯಾದೆಯಾಗಿ ಸುಮ್ಮನೆ ಇರಿ ಅಂದೆ. ಭವಿಷ್ಯ ಕೇಳೋರು, ಶಕುನ ಕೇಳೋರಿಗೆ ನಾವು ಅಡ್ಡಿ ಮಾಡಲ್ಲ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸರ್ಕಾರ‌ ಮಧ್ಯಪ್ರವೇಶ ಮಾಡಬೇಕು. ಆ ಭವಿಷ್ಯದ ಹೇಳಿಕೆ ಹೊರಗೆ ಬರಬಾರದು. ಆ ಭವಿಷ್ಯ ಹೇಳೋರನ್ನ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES