Monday, December 23, 2024

ಮದುವೆ ಮಂಟಪದಿಂದ ಪ್ರಿಯಕರನ ಜೊತೆ ವಧು ಎಸ್ಕೇಪ್

ಚಿಕ್ಕಬಳ್ಳಾಪುರ: ರಾತ್ರಿ ಅರತಕ್ಷತೆಯಲ್ಲಿ ಭಾಗಿಯಾಗಿದ್ದ ವಧು ರಾತ್ರೋ ರಾತ್ರಿ ಎಸ್ಕೇಪ್ ಆದ ಘಟನೆ ವಿಧುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟದಪಲ್ಲಿ ನಡೆದಿದೆ.

ವಧು ವೆನ್ನಲ ಹಾಗೂ ವರ ಸುರೇಶ್ ಮದುವೆ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ನಡೆದಿದ್ದ ಅರಕ್ಷತೆಯಲ್ಲಿ ವಧು ಭಾಗಿಯಾಗಿದ್ದಳು. ನಾಗಿರೆಡ್ಡಿ ಲೇಔಟ್​ನಲ ವೆನ್ನಲ ಕರೇಕಲ್ಲಹಳ್ಳಿಯ ಸುರೇಶ್​ ನಿವಾಸಿಗಳಾಗಿದ್ದಾರೆ. ವಧು ವೆನ್ನಲ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ಈ ಪ್ರಕರಣ ಗೌರಿಬಿದನೂರು ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಧುವಿನ ಸಂಬಂಧಿಗಳು ವಧುವಿನ ಸಂಬಂಧಿಗಳು ನಾಪತ್ತೆ ಪ್ರಕರಣ ದಾಖಲಿಸಲು ಸಿದ್ದರಾಗಿದ್ದಾರೆ.

RELATED ARTICLES

Related Articles

TRENDING ARTICLES