Monday, December 23, 2024

ಡ್ರಾಪ್ ಕೆಳೋ ನೆಪದಲ್ಲಿ ಅಟ್ಯಾಕ್​

ಬೆಂಗಳೂರು: ಡ್ರಾಪ್ ಕೊಡೋಕೆ ಗಾಡಿ ನಿಲ್ಲಿಸಿದವನ ಮೇಲೆ ಅಟ್ಯಾಕ್ ಮಾಡಿದ ಘಟನೆ ಹೊರಮಾವು ಬಳಿ, ವಿಜಯಾ ಬ್ಯಾಂಕ್ ಕಾಲೊನಿಯಲ್ಲಿ ನಡೆದಿದೆ.

ಅಯ್ಯೋ ಪಾಪ‌ ಡ್ರಾಪ್‌ ಕೊಡೋಣ ಅಂತ ದ್ವಿಚಕ್ರ ವಾಹನ ನಿಲ್ಲಿಸಿದವನಿಗೆ ಕತ್ತಿಯಿಂದ‌ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಮೇ 18 ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದ್ದು, ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಬೈಕ್ ಗೆ ಅಡ್ಡ ಹಾಕಿದ್ದಾನೆ.

ಅದಲ್ಲದೇ, ಬಳಿಕ ಬೈಕ್ ನಿಲ್ಲಿಸುತ್ತಿದ್ದಂತೆ ಕತ್ತಿ ತೆಗೆದು ಹಲ್ಲೆ ಮಾಡಿದ್ದು, ಎರಡ್ಮೂರು ಬಾರಿ ಕತ್ತಿ ಇಂದ ಹಲ್ಲೆ ಮಾಡಿದ್ದಾರೆ. ಹಲ್ಲೆ‌ಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ತರುಣ್ ಅಗರ್ವಾಲ್ ಹಲ್ಲೆಗೊಳಗಾಗಿರುವ ವ್ಯಕ್ತಿ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡ್ತಿರುವ ತರುಣ್ ಆತನ ಬಳಿ‌ ಇದ್ದ ಎರಡು ಮೊಬೈಲ್ ಹಾಗೂ‌ ಹೊಂಡಾ ಆಕ್ಟಿವಾ ಕಸಿದುಕೊಂಡಿದ್ದಾನೆ.
ಇನ್ನು, ಇದೇ ವ್ಯಕ್ತಿ ಮತ್ತೊಂದು ರಸ್ತೆಯಲ್ಲಿ ಬೈಕ್‌ ಕೂಡ ಕದ್ದಿದ್ದಾನೆ. ಆ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿ ಆರೋಪಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES