ದೇವನಹಳ್ಳಿ : ಸಿಲಿಕಾನ್ ಸಿಟಿ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಕಳೆದ 2 ವರ್ಷಗಳಿಂದ ಕೊರೋನಾ ಕಾರಣ ಸಾಮೂಹಿಕ ವಿವಾಹಗಳು ಸ್ಥಗಿತಗೊಂಡಿದ್ದವು. ಆದ್ರೆ, ಈ ಬಾರಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ನವಜೋಡಿಗಳಿಗೆ ದೇವಾಲಯದ ವತಿಯಿಂದ ವರನಿಗೆ 5 ಸಾವಿರ, ವಧುವಿಗೆ 10,000 ಸಾವಿರ ನಗದು ಚಿನ್ನದ ತಾಳಿ, 2 ಚಿನ್ನದ ಗುಂಡು, ಹೀಗೆ ಒಟ್ಟು 55 ಸಾವಿರ ರೂಪಾಯಿ ಭರಿಸಲಾಯಿತು. ನವ ಜೋಡಿಗಳಿಗೆ ಸುಬ್ರಹ್ಮಣ್ಯ ದೇವಸ್ಥಾನದ ಪುರೋಹಿತರು ಸೇರಿ ಜಿಲ್ಲಾಧಿಕಾರಿ ಹಾಗೂ ಅನೇಕ ಹಿರಿಯರು ಆಶೀರ್ವದಿಸಿದರು. ಜೊತೆಗೆ ನವಜೋಡಿಗಳ ಜೊತೆ ಬಂದಂತಹ ಕುಟುಂಬಸ್ಥರಿಗೂ ದೇವಾಲಯದ ವತಿಯಿಂದ ವಿಶೇಷ ಭೋಜನದ ವ್ಯವಸ್ಥೆ ಸಹ ಮಾಡಲಾಗಿತ್ತು.
ಒಟ್ಟಿನಲ್ಲಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆದ ಸಾಮೂಹಿಕ ವಿವಾಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.