Wednesday, January 22, 2025

ಬೆಂಗಳೂರಿನಲ್ಲಿ ಮರುಕಳಿಸಿದ ಕಳಪೆ ಕಾಮಗಾರಿ ದುರಂತ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕಳಪೆ ಕಾಮಗಾರಿ ದುರಂತ ಮರುಕಳಿಸಿದೆ. ರಾಜಕಾಲುವೆ ತಡೆಗೋಡೆ ನಿರ್ಮಾಣ ಮತ್ತು ಮೋಲ್ಡಿಂಗ್‌ ಹಾಕಲಾಗಿದ್ದ, ಸೆಂಟ್ರಿಂಗ್ ಕುಸಿದು ಎಂಟು ಜನ ಗಾಯಗೊಂಡಿರುವ ಘಟನೆ ಶ್ರೀನಗರ ಸಮೀಪದ ಕಾಳಿದಾಸ ಲೇಔಟ್‌ನಲ್ಲಿ ನಡೆದಿದೆ. ಸೆಂಟ್ರಿಂಗ್ ಹಾಕಿ ಕಬ್ಬಿಣ ಕಟ್ಟಿ ಸಿಮೆಂಟ್ ಹಾಕುವ ವೇಳೆ ಪೂರ್ತಿಯಾಗಿ ಕುಸಿದ ಪರಿಣಾಮ, ಎಂಟು ಜನ ಕಾರ್ಮಿಕರಿಗೆ ಗಾಯವಾಗಿದ್ದು. ಈ ಪೈಕಿ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.. ಇನ್ನು ಇದೇ ವೇಳೆ ಕಬ್ಬಿಣದ ಸರಳುಗಳ ನಡುವೆ ಸಿಲಕಿದ ಒರ್ವನ ಸ್ಥಿತಿ ಗಂಭೀರವಾಗಿದೆ, ಆತನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇನ್ನು ಗಾಯಾಳುಗಳು ಕೊಲ್ಕತ್ತಾ ಮೂಲದವರಾಗಿದ್ದು, ಆಸಿಬುಲ್ ಮತ್ತು ಶಿವಪ್ರಸಾದ್‌ ಎಂಬುವವರಿಗೆ ಸಣ್ಣಪುಟ್ಟಗಾಯಗಳಾದ್ರೆ, ಖಾಸಿಂಗೆ ಗಂಭೀರ ಗಾಯಗಳಾಗಿವೆ.

ಕಾಳಿದಾಸ ಬಸ್ ನಿಲ್ದಾಣ ಸಮೀಪದಲ್ಲಿನ ರಾಜಕಾಲುವೆ ತಡೆಗೋಡೆ ಮತ್ತು ಮೋಲ್ಡಿಂಗ್ ಕಾಮಗಾರಿ ಪ್ರಗತಿಯಲ್ಲಿತ್ತು.. ಅಸಲಿಗ ಮಳೆಗಾಲದಲ್ಲಿ ಸಾಕಷ್ಟು ನೀರು ಹರಿಯುವ ಹಿನ್ನೆಲೆ ಅಕ್ಕಪಕ್ಕದ ಮನೆಗಳಿಗೆ ನೀರು ಬರೋ ಆತಂಕವಿತ್ತು. ಹೀಗಾಗಿಯೇ ರಾಜಕಾಲುವೆ ಮಾರ್ಗವನ್ನು ಮೋಲ್ಡಿಂಗ್ ಮಾಡಿ ಮುಚ್ಚುವ ಕೆಲಸ ಭರದಿಂದ ಸಾಗಿತ್ತು. ಬಿಬಿಎಂಪಿಯಿಂದ ನಡೆಯುತಿದ್ದ ಈ ಕಾಮಗಾರಿ ನಡುವೆ ನಡೆದ ಘಟನೆ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಮೊಲ್ಡಿಂಗ್ ಗೆಂದು ಕಬ್ಬಿಣ ಮತ್ತು ಸಿಮೆಂಟ್ ಬಳಸಿ ನಡೆಸುತಿದ್ದ ಕೆಲಸ ಕೈಕೊಟ್ಟು ಇಡೀ ಮೊಲ್ಡಿಂಗ್‌ ನೆಲಕ್ಕೆ ಬಿದಿತ್ತು. ಇನ್ನೂ ಕಾಮಗಾರಿಯಲ್ಲೂ ಕೂಡಾ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದೆ. ಗುಣ ಮಟ್ಟ ಇಲ್ಲ ಸರಿಪಡಿಸಿ ಅಂತ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ರೂ ಎಚ್ಚೆತ್ತುಕೊಂಡಿರಲಿಲ್ಲ.

ಇನ್ನು ಇಲ್ಲಿ ಹಲವು ತಿಂಗಳಿಂದ ಕಾಮಗಾರಿ ನಡೆಯುತಿದ್ದು, ಆರ್‌ಎಂಐ ಇನ್ಫ್ರಾಸ್ಟಕ್ಚರ್‌ನ ಮಹೇಶ್ ರೆಡ್ಡಿ ಕಾಂಟ್ರಾಕ್ಟ್ ಪಡೆದಿದ್ರಂತೆ..ಕೆಲಸದ ವೇಳೆ ಮುಂಜಾಗ್ರತಾ ಕ್ರಮ ವಹಿಸದೇ ಇರೋದು ಘಟನೆಗೆ ಕಾರಣವಾಗಿದೆ. ಇನ್ನು ಇದಕ್ಕೆ ಕಾಂಟ್ರಾಕ್ಟರ್ ನೇರ ಹೊಣೆ ಎಂದಿರುವ ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ಸದ್ಯ ಕಾಮಗಾರಿಯ ಗುಣಮಟ್ಟ ಪರಿಶೀಲಿಸಲು TVCCಗೆ ಆದೇಶ ನೀಡಿದ್ದು,ಈ ವೇಳೆ ಬರುವ ಮಾಹಿತಿ ಆಧರಿಸಿ ಕಾಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

ಇನ್ನು ಘಟನೆ ತಿಳಿದು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಅಧಿಕಾರಿಗಳಿಗಿಂತಲೂ ಮುಂಚಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೇ ವೇಳೆ ಅಲ್ಲಿನ ಸ್ಥಳೀಯರು ಅಧಿಕಾರಿಗಳು ಹಾಗೂ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ್ರು..ಇದಾದ ಬಳಿಕ ಸ್ಥಳ ಪರಿಶೀಲಿಸಿದ ಶಾಸಕ ರವಿಸುಬ್ರಹ್ಮಣ್ಯ ಘಟನೆಯಿಂದ ಗಾಯಗೊಂಡವರ ಚಿಕಿತ್ಸೆ ಬಿಬಿಎಂಪಿ ನೋಡಿಕೊಳ್ಳಲಿದೆ ಎಂದರು.

ಒಟ್ನಲ್ಲಿ ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿರೋದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು. ಬಿಬಿಎಂಪಿ ಅಂದ್ರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಲ್ಲ. ಬ್ರಹ್ಮಾಂಡ ಭ್ರಷ್ಟಾಚಾರ ಇಲಾಖೆ ಅನ್ನೋದು ಮತ್ತೊಮ್ಮೆ ಸಾಬೀತು ಪಡಿಸುವಂತಾಗಿದೆ.

RELATED ARTICLES

Related Articles

TRENDING ARTICLES