Wednesday, January 22, 2025

ಮೈಸೂರನ್ನ ಪ್ಯಾರಿಸ್ ಮಾಡುತ್ತೇವೆಂದು ಮೋದಿ ಹೇಳಿಲ್ಲ : ಪ್ರತಾಪ್​​ ಸಿಂಹ

ಮೈಸೂರು : ಮೈಸೂರಿಗೆ ಪ್ಯಾರಿಸ್‌ನಷ್ಟು ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ ಎಂದು ಮೋದಿ ಪರ ಸಂಸದ ಪ್ರತಾಪ್​​ ಸಿಂಹ ಬ್ಯಾಟಿಂಗ್​​ ಮಾಡಿದ್ದಾರೆ.

ಮೈಸೂರನ್ನ ಪ್ಯಾರಿಸ್ ಮಾಡುತ್ತೇವೆಂಬ ಮೋದಿ ಹೇಳಿದ್ದಾರೆ ಎಂದು ಹೇಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಮಾಡಿರುವ ಮೋದಿ‌ಭಾಷಣ ನೋಡಿದ್ದೇನೆ. ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಅವರು ಎಲ್ಲಿ ಹೇಳಿದ್ದಾರೆ. ಮೈಸೂರಿಗೆ ಪ್ಯಾರಿಸ್‌ನಷ್ಟು ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ ಎಂದಷ್ಟೆ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಪ್ಯಾರಿಸ್‌ಗೆ 400 ವರ್ಷದ ಇತಿಹಾಸವಿದೆ. ಐಫೆಲ್ ಟವರ್​ನ್ನು ಮ್ಯೂಸಿಯಂ ಅರಮನೆ ಮಾಡಲು 400 ವರ್ಷ ಹಿಡಿದಿದೆ. ಪ್ಯಾರಿಸ್ 2014ರಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿತ್ತು. ಆದ್ದರಿಂದ ಮೈಸೂರಿಗೂ ಆ ಶಕ್ತಿ ಇದೆ. ಆದ್ದರಿಂದ ಅದಕ್ಕೆ ಪೂರಕವಾದ ಕನಕ್ಟಿವಿಟಿಯನ್ನು ನೀಡಿದ್ದಾರೆ. ಆದರೆ ಯಾರೋ ರಾಜಕಾರಣಿಗಳು ಆ ರೀತಿ ಸುಳ್ಳು ಹೇಳಿಕೆಯನ್ನು ಕೊಡುತ್ತಿದ್ದಾರೆ ಎಂದು ಪ್ರತಾಪ್​​ ಸಿಂಹ ಹೇಳಿದರು.

RELATED ARTICLES

Related Articles

TRENDING ARTICLES