Tuesday, December 24, 2024

ಮಾರ್ಟಿನ್ ಆ್ಯಕ್ಷನ್​ ಗತ್ತು.. ರವಿವರ್ಮಾ ಗಮ್ಮತ್ತು..!

ತೆರೆ ಮೇಲೆ  ಇವ್ರ ಖದರ್​​ ಸೂಪರ್​​. ಪೊಗರಿನ ಟಗರು ನಮ್​ ಆ್ಯಕ್ಷನ್​​ ಫ್ರಿನ್ಸ್​​ ಧ್ರುವ ಸರ್ಜಾ. ನ್ಯಾಷನಲ್​​ ಬಾಡಿ ಬಿಲ್ಡರ್​​ಗಳು ಇವ್ರ  ಹುರಿಗಟ್ಟಿದ ದೇಹ ನೋಡಿ ಒಂದು ಕ್ಷಣ ಗಾಬರಿಯಾಗಿ ಬಿಡ್ತಾರೆ. ನೂರು ಜನ ಎದುರು ನಿಂತ್ರು ಒಬ್ಬನೇ ಹೋರಾಡೋ ಬಲಭೀಮ. ಯೆಸ್​​​.. ಫ್ಯಾನ್ಸ್​ ಹೃದಯ ಗೆದ್ದಿರೋ ಮಾರ್ಟಿನ್​​ ಮಾನ್​ಸ್ಟಾರ್​​ ನಮ್ ಆ್ಯಕ್ಷನ್​​ ಹೇಗಿರಲಿದೆ  ಅನ್ನೋದನ್ನ ಫೈಟ್ ಮಾಸ್ಟರ್ ಬಾಯಿಂದಲೇ ಒಮ್ಮೆ ಕೇಳಿಬಿಡಿ.

  • ರಣರೋಚಕ ಆ್ಯಕ್ಷನ್​​ ಸೀಕ್ವೆನ್ಸ್​​ಗೆ ಮಾರ್ಟಿನ್​​ ಸಾಹಸ

ಎಷ್ಟು ಬೇಕಾದ್ರೂ ಸಿನಿಮಾ ಆಫರ್ಸ್ ಬರಲಿ, ನಿರ್ಮಾಪಕರು ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿ, ಸ್ಯಾಂಡಲ್​​ವುಡ್​​ ಪ್ರಿನ್ಸ್​ ಮಾತ್ರ ಮಾರ್ಟಿನ್​​ ಚಿತ್ರದ ಗುಂಗಿನಿಂದ ಹೊರಗೆ ಬರೋದಿಲ್ಲ. ಅವರ ಜಿಮ್​ ಕಸರತ್ತು ಏನಿದ್ರೂ ಮಾರ್ಟಿನ್​ ಚಿತ್ರಕ್ಕಾಗಿ. ಕಂಡು ಕೇಳರಿಯದ, ಎಂದೂ ನೋಡಿರದ  ಆ್ಯಕ್ಷನ್​ ಸೀನ್ಸ್​​​​ ಮಾರ್ಟಿನ್​ ಚಿತ್ರದಲ್ಲಿ ನೀವೆಲ್ಲಾ ನೋಡಬಹುದು. ಅದಕ್ಕಾಗಿ ಆ್ಯಕ್ಷನ್​​ ಪ್ರಿನ್ಸ್​​ ಧ್ರುವ ಡೈಲಿ ಜಿಮ್​ನಲ್ಲಿ ಬೆವರಿಳಿಸ್ತಾ ಇದ್ದಾರೆ. ಅವರ ಸಿನಿಕರಿಯರ್​​ನಲ್ಲಿ ಮಾರ್ಟಿನ್​​ ಒಂದು ಹೊಸ ಮೈಲಿಗಲ್ಲಾಗಲಿದೆ.

ಪೊಗರು ಸಿನಿಮಾದಲ್ಲಿ ಧ್ರುವನ ಅಬ್ಬರ, ಆರ್ಭಟವನ್ನ ನಾವೆಲ್ಲಾ  ಮರೆಯೋಕೆ ಸಾಧ್ಯವೇ ಇಲ್ಲ. ಡೈಲಾಗ್ಸ್​​, ಆ್ಯಕ್ಷನ್ಸ್​​​ ಎಲ್ಲವೂ ಮೈಕೊಡವಿ ಎದ್ದು ಬರೋ ಸಿಂಹಾನೆ. ಇದೀಗ ಅವರ ಖದರ್​​,ಗತ್ತು, ಗಮ್ಮತ್ತು ಎಲ್ಲವೂ ದುಪ್ಪಟ್ಟಾಗಿದೆ. ಎದುರಾಳಿ ವಿಲನ್​​ಗಳ ಎದೆಸೀಳೋಕೆ  ಬಾಡಿ ಸಜ್ಜಾಗಿದೆ. ಇನ್ನೇನಿದ್ರೂ ಮಾರ್ಟಿನ್​​ ಕೋಪಕ್ಕೆ ಬಲಿಯಾಗೋ ರೌಡಿಗಳೆಷ್ಟು ಅಂತಾ ಲೆಕ್ಕಾ ಹಾಕ್ತಾ ಕೂರೋದಷ್ಟೆ  ನಮ್ ಕೆಲಸ. ಹೌದು. ಇದೆಲ್ಲಾ ಕಥೆ ಅನ್ಕೋಬೇಡಿ, ನಾವ್​​ ಹೇಳ್ತಾ ಇರೋದು ನಮ್​ ಆ್ಯಕ್ಷನ್​​ ಪ್ರಿನ್ಸ್​ ಅಭಿನಯದ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಮೂವಿ ಮಾರ್ಟಿನ್​​ ಚಿತ್ರದ ಜಸ್ಟ್​​ ಹೈಲೈಟ್ಸ್​​​.

ಧ್ರುವ ಸರ್ಜಾ ಖಾತೆಯಲ್ಲಿ ಮೂಡಿ ಬರ್ತಿರೋ ಐದನೇ ಸಿನಿಮಾ ಮಾರ್ಟಿನ್​​. ಎಪಿ ಅರ್ಜುನ್​ ಆಕ್ಷನ್​ ಕಟ್​​ ಹೇಳ್ತಿರೋ ಭಾರತದ ಅದ್ಧೂರಿ ಸಿನಿಮಾ ಇದು. ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್​​ ಇಂಡಿಯಾ ಲೆವೆಲ್​​ನಲ್ಲಿ ಘರ್ಜಿಸೋಕೆ ಮಾರ್ಟಿನ್​ ಬರ್ತಿದ್ದಾನೆ. ಹಾಗಂತ ಇದು ಬರೀ ಮಾಸ್​​ ಕಥೆಯಲ್ಲ. ನಿಮ್ಮ ಮನಸ್ಸಿಗೆ ಟಚ್​ ಆಗೋ ಲವ್​ಸ್ಟೋರಿಯೂ ಹೌದು. ಜೊತೆಗೆ ಬೆಚ್ಚಿ ಬೀಳಿಸೋ ರಣರೋಚಕ ಸಾಹಸ ದೃಶ್ಯಗಳಿಂದ ಕೂಡಿರಲಿದೆ.  ಒಟ್ನಲ್ಲಿ ಸಿಲ್ವರ್​ ಸ್ಕ್ರೀನ್​​ ಮೇಲೆ ಮಾರ್ಟಿನ್​​ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳೋದೇ ಆನಂದ. ಇದು ರವಿವರ್ಮಾ ಕೊಟ್ಟಿರೋ ಕಾನ್ಫಿಡೆನ್ಸ್​​​.

ನಾಲ್ಕೈದು ಸಿನಿಮಾ ಮಾಡಿದ್ರೂ ಧ್ರುವಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಸೆಪ್ಟೆಂಬರ್​ 30ಕ್ಕೆ ಮಾರ್ಟಿನ್​​ ದರ್ಬಾರ್​​ ಶುರುವಾಗಲಿದೆ. ಅಲ್ಲಿವರೆಗೂ ಅಭಿಮಾನಿಗಳು  ಮಾರ್ಟಿನ್​ ಜಪ ಮಾಡ್ತಾ ಭಜನೆಯಲ್ಲಿ ಮುಳುಗಿ ಹೋಗಬೇಕಿದೆ.  ಮಾರ್ಟಿನ್​ಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಗ್ಲಾಮರಸ್​​ ಗೊಂಬೆಯಾಗಿ ಮಿಂಚಲಿದ್ದಾರೆ. ಉದಯ್​​ ಕೆ ಮೆಹ್ತಾ ಕೋಟಿ ಕೋಟಿ ಬಂಡವಾಳ ಹೂಡಿ ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.  ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಈ ಸಿನಿಮಾದಲ್ಲಿ ಕಣ್ಣು ಕುಕ್ಕಲಿದೆ. ಮಣಿ ಶರ್ಮಾ ಮ್ಯೂಸಿಕ್​​ ಮತ್ತೆ ಮತ್ತೆ ಸಂಗೀತದ ಅಲೆಯಲ್ಲಿ ನಿಮ್ಮನ್ನು ತೇಲಿಸೋದು ಪಕ್ಕಾ ಆಗಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES