Thursday, January 23, 2025

ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ನಾಳೆ ತಾಂಬೂಲ ಪ್ರಶ್ನೆ

ಮಂಗಳೂರು : ನಾಳೆ ಬೆಳಿಗ್ಗೆ ಕೇರಳ ಮೂಲದ ಪೊದುವಾಲ್​​ರಿಂದ ಮಳಲಿ‌ ದರ್ಗಾದಲ್ಲಿ‌ ನಾಳೆ ಬೆಳಗ್ಗೆ ತಾಂಬೂಲ ಪ್ರಶ್ನೆ ನಡೆಯಲಿದೆ.

ನಗರದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ಅನತಿ ದೂರದಲ್ಲೇ ತಾಂಬೂಲ ಪ್ರಶ್ನೆ ನಡೆಯಲಿದೆ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಮಾಡಲಾಗುತ್ತಿದ್ದು, ಮಸೀದಿಯ 250 ಮೀ. ದೂರದಲ್ಲಿ ದೈವೀ ಶಕ್ತಿ ಪತ್ತೆ ಕಾರ್ಯ ನಡೆಯಲಿದೆ.

ಅದಲ್ಲದೇ, ನಾಳೆ ಬೆಳಿಗ್ಗೆ ಕೇರಳ ಮೂಲದ ಪೊದುವಾಲ್​ರಿಂದ ನಡೆಯಲಿದೆ ತಾಂಬೂಲ ಪ್ರಶ್ನೆ ನಡೆಯಲಿದ್ದು, ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ತಾಂಬೂಲ ಪ್ರಶ್ನೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮಸೀದಿ ಸುತ್ತಮುತ್ತ ದೈವಿ ಶಕ್ತಿ ಇದ್ಯಾ ಎಂಬ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದ್ದು, ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಮಾಡಲಾಗುತ್ತದೆ.

RELATED ARTICLES

Related Articles

TRENDING ARTICLES