Monday, December 23, 2024

ಕೋಬ್ರಾ ವಿಕ್ರಮ್ ತೆಕ್ಕೆಯಲ್ಲಿ ನಮ್ಮ ಕೆಜಿಎಫ್ ನಿಧಿ..!

ಪ್ರತಿಯೊಬ್ಬ ನಟೀಮಣಿಗೂ ವರ್ಷಕ್ಕೆ ಕನಿಷ್ಟ ಐದಾರು ಸಿನಿಮಾ ಮಾಡೋ ಕನಸಿರುತ್ತೆ. ಆದ್ರೆ ಸಿನಿಮಾ ಸಂಖ್ಯೆಗಿಂತ ಒಮ್ಮೊಮ್ಮೆ ಧಮ್ ಇರೋ ಪ್ರಾಜೆಕ್ಟ್​​ಗಳೇ ಮುಖ್ಯ ಆಗಿಬಿಡುತ್ತೆ. ಆ ನಿಟ್ಟಿನಲ್ಲಿ ಕೆಜಿಎಫ್​ ನಿಧಿ ಅಂತ್ಲೇ ಫೇಮಸ್ ಆಗಿರೋ ಶ್ರೀನಿಧಿ ಶೆಟ್ಟಿಯ ನಿರ್ಧಾರಗಳು ನಿಜಕ್ಕೂ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್. ಸದ್ಯ ಕೋಬ್ರಾ ಕ್ವೀನ್ ಆಗಿ ಸದ್ದು ಮಾಡೋಕೆ ಸಜ್ಜಾಗಿದ್ದಾರೆ ಈ ಗ್ಲಾಮರ್ ಡಾಲ್.

  • ಕೆಜಿಎಫ್​ಗಿಂತ ಜೋರಿರಲಿದೆ ಶ್ರೀನಿಧಿ ಎರಡನೇ ಹೆಜ್ಜೆ

ಕೆಜಿಎಫ್​ನಲ್ಲಿ ರಾಕಿಭಾಯ್ ಖದರ್, ಅಧೀರ- ರಮಿಕಾ ಸೇನ್ ಪವರ್ ಜೊತೆ ಮತ್ತೊಂದು ಪವರ್​ಫುಲ್ ಕ್ಯಾರೆಕ್ಟರ್ ಅನಿಸಿಕೊಂಡಿದ್ದು ಮಾತ್ರ ರೀನಾ ದೇಸಾಯಿ. ಯಶ್ ಜೊತೆ ರೀನಾ ದೇಸಾಯಿ ಪಾತ್ರದಾರಿ ಶ್ರೀನಿಧಿ ಶೆಟ್ಟಿಯ ಗತ್ತು, ನಿಜಕ್ಕೂ ಕೆಜಿಎಫ್ ಸಿನಿಮಾಗೆ ಬೇರೆಯದ್ದೇ ಮೈಲೇಜ್ ನೀಡಿತು ಅಂದ್ರೆ ತಪ್ಪಾಗಲ್ಲ.

ಪಕ್ಕಾ ಕನ್ನಡತಿ, ಸ್ವಚ್ಚ ಮನಸ್ಸಿನ ಅಚ್ಚ ಕನ್ನಡಿಗರ ಮನೆತನದ ಹುಡ್ಗಿ ಶ್ರೀನಿಧಿ, ಮಾಡೆಲಿಂಗ್ ಜಗತ್ತಿನಿಂದ ಕೆಜಿಎಫ್ ಚಿತ್ರದಲ್ಲಿ ಅವಕಾಶ ಪಡೆದಿದ್ರು. ಚೊಚ್ಚಲ ಚಿತ್ರದಲ್ಲೇ ಇಡೀ ಕರಿಯರ್​ಗೆ ಆಗೋ ಅಷ್ಟು ಅನುಭವಗಳನ್ನು ಪಡೆದ್ರು. ನಟನೆ ಜೊತೆ ದೊಡ್ಡ ದೊಡ್ಡ ಕಲಾವಿದರು, ಪರಭಾಷಾ ಸ್ಟಾರ್ಸ್​ ಜೊತೆಗೂ ಮೆರೆದರು. ಈಗ ಈ ಕೆಜಿಎಫ್ ನಿಧಿಗೂ ಒಂದು ವಿಶೇಷ ಅಭಿಮಾನಿ ಬಳಗವಿದೆ.

ಶ್ರೀನಿಧಿಯ ಆ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ಎಷ್ಟು ದೊಡ್ಡದು ಅಂದ್ರೆ ಏಳೆಂಟು ವರ್ಷದ ತಪಸ್ಸು. ಅವೆರಡೂ ಸಿನಿಮಾಗಳು ರಿಲೀಸ್ ಆಗೋವರೆಗೂ ಬೇರಾವ ಚಿತ್ರಕ್ಕೂ ಕಮಿಟ್ ಆಗಲಿಲ್ಲ. ಆದ್ರೆ ಕೆಜಿಎಫ್ ಚಾಪ್ಟರ್ ಒಂದರ ಬಳಿಕ ಯಶ್, ಮತ್ತೆ ಕಿರಾತಕ ಚಿತ್ರದಲ್ಲಿ ತೊಡಗಿಸಿಕೊಂಡಾಗ, ತಾನೂ ಸಹ ಪಕ್ಕದ ಕಾಲಿವುಡ್​ನಲ್ಲಿ ಚಿಯಾನ್ ವಿಕ್ರಮ್ ಜೊತೆ ಬಣ್ಣ ಹಚ್ಚಿದ್ರು. ಅದೇ ಕೋಬ್ರಾ.

ಇದೀಗ ಕೋಬ್ರಾ ಕೂಡ ರಿಲೀಸ್ ಹಂತ ತಲುಪಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳೆಲ್ಲಾ ಮುಗಿಸಿ, ಏಕ್ಧಮ್ ರಿಲೀಸ್ ಡೇಟ್​ನೇ ಅನೌನ್ಸ್ ಮಾಡಿದೆ. ಆಗಸ್ಟ್ 11ಕ್ಕೆ ಕೋಬ್ರಾ ತೆರೆಗಪ್ಪಳಿಸಲಿದ್ದು, ಸೂಪರ್ ಸ್ಟಾರ್ ವಿಕ್ರಮ್ ಜೊತೆ ಕೋಬ್ರಾ ಕ್ವೀನ್ ಆಗಿ ಖದರ್ ತೋರಲಿದ್ದಾರೆ. ವಿಶೇಷ ಅಂದ್ರೆ ಕೋಬ್ರಾ ಕೂಡ ಔಟ್ ಅಂಡ್ ಔಟ್ ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್​ಟೈನರ್. ರೀಸೆಂಟ್ ಆಗಿ ರಿಲೀಸ್ ಡೇಟ್ ಟೀಸರ್ ಲಾಂಚ್ ಆಗಿದ್ದು, ನಮ್ಮ ಕನ್ನಡತಿಯ ಖದರ್ ಕೂಡ ಜೋರಿದೆ. ಎರಡನೇ ಸಿನಿಮಾದಲ್ಲೇ ಚಿಯಾನ್ ವಿಕ್ರಮ್​ರಂತಹ ಮೋಸ್ಟ್ ವರ್ಸಟೈಲ್ ಌಕ್ಟರ್ ಜೊತೆ ಅವಕಾಶ ಸಿಕ್ಕಿದ್ದು, ನಿಜಕ್ಕೂ ಗ್ರೇಟ್. ಇದು ಆಕೆಯ ನಟನಾ ಸಾಮರ್ಥ್ಯಕ್ಕೆ ಸಿಕ್ಕ ಪುರಸ್ಕಾರವೇ ಸರಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES