Monday, December 23, 2024

ಬದುಕೀಗ ಖಾಲಿ ಮನೆ ಅಂದರೇಕೆ ರಘು-ರವಿ-ನಾಣಿ..?

ವಯಸ್ಸಾದ ಬಳಿಕ ತನ್ನವರೆಲ್ಲಾ ದೂರ ಆದಾಗ ಬದುಕು ಖಾಲಿ ಅನಿಸುತ್ತೆ. ಮಾನವೀಯ ಮೌಲ್ಯಗಳು ಕಾಣೆಯಾಗಿರೋದು ಎದ್ದು ಕಾಣುತ್ತೆ. ಸದ್ಯ ಮೂವರು ಓಲ್ಡ್​ಮ್ಯಾನ್​​ಗಳು 60ರ ದಶಕದಿಂದ 2022ರವರೆಗೆ ಅವ್ರ ಬ್ಲಾಕ್ ಅಂಡ್ ವೈಟ್ ಟು ಕಲರ್​ಫುಲ್ ಲೈಫ್​ನ ಹೇಳೋಕೆ ಬರ್ತಿದ್ದಾರೆ. ಅದೆಷ್ಟು ಎಮೋಷನಲ್ ಅನ್ನೋದನ್ನ ನೀವೇ ಕಣ್ತುಂಬಿಕೊಳ್ಳಿ.

  • ನಿಜಕ್ಕೂ ಕಾಣೆಯಾಗಿರೋದು ಮಾನವೀಯ ಮೌಲ್ಯಗಳು

ರಂಗಾಯಣ ರಘು, ಆರ್ಮುಗಂ ರವಿಶಂಕರ್ ಹಾಗೂ ತಬಲಾ ನಾಣಿ.. ಇವ್ರ ಕಾಂಬೋನಲ್ಲಿ ಸಿನಿಮಾ ಬರ್ತಿದೆ ಅಂದ್ರೆ ಪಕ್ಕಾ ಕಾಮಿಡಿ ಎಂಟರ್​ಟೈನರ್ ಅಂತ ಎಲ್ರೂ ಭಾವಿಸ್ತಾರೆ. ಆದ್ರೆ ಈ ಮೋಸ್ಟ್ ಟ್ಯಾಲೆಂಟೆಡ್ ಕಲಾವಿದರನ್ನೇ ಇಟ್ಕೊಂಡು ಒಂದೊಳ್ಳೆ ಎಮೋಷನಲ್ ಕಥೆಯನ್ನ ಹೆಣೆದಿದ್ದಾರೆ ದಿಲ್​ವಾಲಾ, ಱಂಬೊ 2, ಕೃಷ್ಣ-ರುಕ್ಕು ಸಿನಿಮಾಗಳ ಖ್ಯಾತಿಯ ಡೈರೆಕ್ಟರ್ ಅನಿಲ್.

ತಂದೆ- ಮಕ್ಕಳ ನಡುವಿನ ಸಂಬಂಧಗಳು ಕಳಚಿಕೊಳ್ತಿರೋ ಇತ್ತೀಚಿನ ದಿನಗಳಲ್ಲಿ, ಅವುಗಳ ಮಹತ್ವವನ್ನು ಸಮಾಜಕ್ಕೆ ಗೊತ್ತು ಮಾಡೋ ಸಲುವಾಗಿ ಕಾಣೆಯಾದವರ ಬಗ್ಗೆ ಪ್ರಕಟಣೆ ರೂಪದಲ್ಲಿ ಇದೇ ಶುಕ್ರವಾರ ತೆರೆಗಪ್ಪಳಿಸುತ್ತಿದೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಸಾಮಾಜಿಕ ಸಂದೇಶವುಳ್ಳ ಸಿನಿಮಾ. ಮನರಂಜನೆಯ ಜೊತೆಗೆ ನೋಡುಗರ ಮನಸ್ಸಿಗೆ ನಾಟುವಂತಹ ವಿಷಯಗಳನ್ನ ಕೊಡೋ ಚಿತ್ರವಾಗಲಿದೆ.

60ರ ದಶಕದಲ್ಲಿ ಶುರುವಾಗೋ ಇವ್ರ ಜರ್ನಿ, ಶಾಲಾ ದಿನಗಳಲ್ಲಿ ಬ್ಲ್ಯಾಕ್ ಅಂಡ್ ವೈಟ್ ಇದ್ರೂ, ಯೌವ್ವನದ ವೇಳೆಗೆ ಅದು ಸಖತ್ ಕಲರ್​ಫುಲ್ ಆಗಲಿದೆ. ಆದ್ರೆ ವಯಸ್ಸಾದ ಬಳಿಕ ಮಕ್ಕಳು, ಮೊಮ್ಮಕ್ಕಳು ಅವ್ರನ್ನ ನೋಡೋ ಪರಿಯೇ ಬದಲಾಗುತ್ತೆ. ನಿರ್ದೇಶಕ ಅನಿಲ್ ಕೂಡ ಒಂದು ಪಾತ್ರ ಪೋಷಿಸಿದ್ದು, ಚಿಕ್ಕಣ್ಣ,  ಕೆಜಿಎಫ್​​ ಖ್ಯಾತಿಯ ವಿನಯ್ ಬಿದ್ದಪ್ಪ, ತಿಲಕ್, ಆಶಿಕಾ ರಂಗನಾಥ್, ಸಂಪದಾ ಹೀಗೆ ದೊಡ್ಡ ತಾರಾಬಳಗವಿದೆ.

ಟೀಸರ್, ಟ್ರೈಲರ್ ಹಾಗೂ ಹಾಡುಗಳು ನೋಡುಗರನ್ನ ಮನಸೂರೆಗೊಂಡಿದ್ದು, ರೀಸೆಂಟ್ ಆಗಿ ರಿಲೀಸ್ ಆಗಿರೋ ಬದುಕೀಗ ಖಾಲಿ ಮನೆ ಸಾಂಗ್ ನಿಜಕ್ಕೂ ನೋಡುಗರ ಕರುಳು ಹಿಂಡುವಂತಿದೆ. ಆ ವಯಸ್ಸಾದವ್ರ ಮಾನಸಿಕ ತುಮಲಾಟ, ನೋವು, ಅವಮಾನ, ಅಪಮಾನಗಳ ತೀವ್ರತೆಯ ಕೈಗನ್ನಡಿಯಾಗಿದೆ. ಒಟ್ಟಾರೆ ಇದ್ರ ಅಸಲಿಯತ್ತು ಇದೇ ಮೇ 27ಕ್ಕೆ ತೆರೆಮೇಲೆ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES