Saturday, November 23, 2024

ಜ್ಞಾನವಾಪಿ ಮಸೀದಿ : ಅರ್ಜಿ ಸಿಂಧುತ್ವದ ಕುರಿತು ಇಂದು ಮಹತ್ವದ ತೀರ್ಪು

ಜ್ಞಾನವಾಪಿ ಮಸೀದಿ ವಿಚಾರ ಸದ್ಯ ದೇಶಾದ್ಯಂತ ಚರ್ಚೆಯಾಗ್ತಿರುವ ವಿಷಯ.. ಸದ್ಯ ಮಸೀದಿಯಲ್ಲಿ ಶಿವಲಿಂಗ ಪತ್ತೆ ವಿಚಾರವಾಗಿ ವಾರಣಾಸಿ ಕೋರ್ಟ್‌ ವಿಚಾರಣೆ ನಡೆಸಿತು.. ಮುಸ್ಲಿಂ ಪರ ವಕೀಲರ ಪ್ರಬಲ ವಾದ ಮಂಡಿಸಿದ್ರು.. ಆದ್ರೆ, ಸಮೀಕ್ಷಾ ವರದಿಗೆ ಆಕ್ಷೇಪಣೆ ಸಲ್ಲಿಸಲು ಅನುಮತಿ ನೀಡಬೇಕೇ..? ಬೇಡವೇ? ಅನ್ನೋ ವಿಚಾರದಲ್ಲಿ ಕೋರ್ಟ್‌ ಮುಂದೂಡಲಾಗಿದ್ದು, ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಲಿದೆ.

ಜ್ಞಾನವಾಪಿ ಮಸೀದಿಯ ಕಮಿಷನರ್ ಸಮೀಕ್ಷಾ ವರದಿಗೆ ಆಕ್ಷೇಪಣೆ ಸಲ್ಲಿಸಲು ಅನುಮತಿಸಬೇಕೆ..? ಅಥವಾ ಆದೇಶ 7 ನಿಯಮ 11ರ ಅರ್ಜಿಯ ವಿಚಾರಣೆ ಮೊದಲು ನಡೆಸಬೇಕೆ..? ಈ ಕುರಿತು ನಾಳೆ ಆದೇಶ ನೀಡಲಿದೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ..ಹೌದು, ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಲಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಇಂದು ಸುಮಾರು 45 ನಿಮಿಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಅಜಯ್ ಕೃಷ್ಣ ವಿಶ್ವೇಶ ನಾಳೆಗೆ ತೀರ್ಪು ಕಾಯ್ದಿರಿಸಿದ್ರು.

ವಿಚಾರಣೆ ವೇಳೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಪರ ವಕೀಲರು ಅರ್ಜಿ ಸಲ್ಲಿಸಿದ್ರು.. ಈ ಅರ್ಜಿಗೆ ಮಸೀದಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. 1991 ಕಾಯಿದೆ ಅನ್ವಯ ಈ ಅರ್ಜಿ ವಿಚಾರಣೆ ಅರ್ಹವಾಗಿಲ್ಲ, ಇದು ಆರ್ಡರ್ 7 ರೂಲ್ 11 ಉಲ್ಲಂಘನೆಯಾಗಿದೆ ಎಂದು ವಾದಿಸಿದರು. ಈ ನಿಯಮ ಉಲ್ಲಂಘಿಸಿ ನಡೆಸಿದ ಸರ್ವೆ ಕೂಡಾ ಅನೂರ್ಜಿತವಾಗಿದ್ದು, ಮೊದಲು ಈ ಅರ್ಜಿ ವಿಚಾರಣೆಗೆ ಅರ್ಹವೇ? ಅಲ್ಲವೇ? ಎಂದು ತಿರ್ಮಾನವಾಗಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿವಾದ ಸಲ್ಲಿಸಿದ ಹಿಂದೂ ಪರ ವಕೀಲರು ಕಾನೂನು ಬದ್ಧವಾಗಿ ನಿರ್ಮಿಸಿದ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ 1991 ಕಾಯ್ದೆ ಅನ್ವಯವಾಗಲಿದ್ದು, ಅತಿಕ್ರಮಣ ಕಟ್ಟಡಗಳಿಗಲ್ಲ, ರಾಮ ಮಂದಿರ ಪ್ರಕರಣವನ್ನು ಇದೇ ಆಧಾರದ ಮೇಲೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ರು.. ವಾದ ಪ್ರತಿವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ಇಂದು ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಿದೆ ಎಂದು ಹೇಳಿತು. ಅದರ ಅನ್ವಯ ಮುಂದಿನ ಹಂತದಲ್ಲಿ ಪ್ರಕರಣದ ವಿಚಾರಣೆ ನಡೆಸುವುದಾಗಿಯೂ ಕೋರ್ಟ್ ಹೇಳಿತ್ತು.

ಒಟ್ನಲ್ಲಿ, ಈ ವಿಚಾರಣೆ ವೇಳೆ ಹಿಂದೂಪರ ವಕೀಲರಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಮೇ 16 ರಿಂದ 19 ವರೆಗೂ ವಜುಖಾನದಲ್ಲಿ ವಜು ಮಾಡಿದವರ ವಿರುದ್ಧ 156 (3) ಸಿಆರ್ಸಿಪಿ, ಐಪಿಸಿ 153ಎ (2), 505 (3) ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಮನವಿ ಮಾಡಲಾಗಿದೆ.  ತೀರ್ಪು ಮಹತ್ವ ಪಡೆದುಕೊಂಡಿದ್ದು, ಅರ್ಜಿ ವಿಚಾರಣೆ ವೇಳೆ ಕೇವಲ 23 ಮಂದಿಗೆ ಮಾತ್ರ ಕೋರ್ಟ್ ಹಾಲ್ ಪ್ರವೇಶ ಮಾಡಲು ಅನುಮತಿ ನೀಡಲಾಗಿತ್ತು. 19 ಮಂದಿ ವಕೀಲರು ಮತ್ತು ನಾಲ್ಕು ಮಂದಿ ಅರ್ಜಿದಾರರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಸದ್ಯ ಇಂದು ವಾರಣಾಸಿ ಜಿಲ್ಲಾ ಕೋರ್ಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ

RELATED ARTICLES

Related Articles

TRENDING ARTICLES