Tuesday, December 24, 2024

ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಹೊತ್ತಿ ಉರಿದ ಅಡುಗೆ ಮನೆ

ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಹೊತ್ತಿ ಉರಿದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾ. ಪಂ. ವ್ಯಾಪ್ತಿಯ ಶಾಂತಿಪುರದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಗ್ಯಾಸ್ ಸೋರಿಕೆಯಿಂದ ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಹಲವಾರು ವಸ್ತುಗಳು ಸುಟ್ಟು ಕರಗಲಾಗಿದ್ದು, ಸ್ಥಳಕ್ಕೆ ಆಗಮಿಸಿ, ಆಗ್ನಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿದಾಗ ಮರಳು, ಹಸಿ ಗೋಣಿ ಚೀಲ ಹಾಕಿದ ಮನೆಯವರು ಹಾಗೂ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಕ್ರಮವಹಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

RELATED ARTICLES

Related Articles

TRENDING ARTICLES