Monday, December 23, 2024

ವಿಪಕ್ಷ ನಾಯಕ ನಾನೊಬ್ಬನೇ ಬುದ್ದಿವಂತ ಅನ್ನೋದನ್ನ ಬಿಡ್ಬೇಕು : ಬಿ.ಸಿ.ನಾಗೇಶ್

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಾನೊಬ್ಬನೇ ಬುದ್ದಿವಂತ ಅನ್ನೋದನ್ನ ಬಿಡಬೇಕು ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಗೊಂದಲಕ್ಕೆ ಕಾಂಗ್ರೆಸ್ಸೇ ಪ್ರಮುಖ ಕಾರಣ. ರೋಹಿತ್ ಚಕ್ರವರ್ತಿ ವಿರುದ್ದ ಬಿ ರಿಪೋರ್ಟ್ ಹಾಕಿಸಿದ್ದು ಯಾರು.? ಇದೇ ಸಿದ್ದರಾಮಯ್ಯನವರೇ. ಪಠ್ಯ ಪುಸ್ತಕ ಈಗಾಗಲೇ ಪ್ರಿಂಟ್ ಆಗಿದೆ. ಮತ್ತೆ ಪರಿಷ್ಕರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇನ್ನು ನಾವು ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕವನ್ನ ಕೇಸರಿಮಯ ಮಾಡುತ್ತಿಲ್ಲ. ನಾವು ಕನ್ನಡ ಹಾಕಿ ನೋಡುತ್ತಿದ್ದೇವೆ. ನಮಗೆ ಬಣ್ಣ  ಕಾಣುತ್ತಿಲ್ಲ, ಕಾಣುತ್ತಿರೋದು ಮಕ್ಕಳಷ್ಟೇ. ಮಕ್ಕಳ ಹಿತದೃಷ್ಠಿಯಿಂದ ನಾವು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೇವೆ. ಆದರೆ ಹಸಿರು ಬಣ್ಣದವರ ಮತ ನಮಗೆ ಬೀಳಲ್ಲ ಅಂತ ಸಿದ್ದರಾಮಯ್ಯ ವಿರೋಧ ಮಾಡ್ತಿದ್ದಾರೆ ಎಂದು ಗುಡುಗಿದರು.

ಅಷ್ಟೇ ಅಲ್ಲದೇ ಎಲ್ಲ ಮುಗಿಯಿತು ಅಂತ ಈಗ ಕುವೆಂಪು ವಿಚಾರ ತೆಗೆದಿದ್ದಾರೆ. ಮೊದಲು ಪಠ್ಯ ಪುಸ್ತಕವನ್ನ ಅವರೇ ಓದಲಿ. ಎಲ್ಲಾ ವಿಚಾರಗಳಲ್ಲೀ ಮಿಸ್ ಫೈರ್ ಮಾಡುತ್ತಿದ್ದಾರೆ. ಹಾಗೂ ಅವರು ನಾನೊಬ್ಬನೇ ಬುದ್ದಿವಂತ ಅನ್ನೋದನ್ನ ಬಿಡಬೇಕು. ಇದು ಅವರ ದುರಂಕಾರವನ್ನ ತೋರಿಸುತ್ತದೆ ಎಂದು ಸಿದ್ದರಾಮಯ್ಯ ವಿರುದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES