Wednesday, October 23, 2024

ಕ್ವಾಡ್‌ ಶೃಂಗದಲ್ಲಿ ಜಾಗತಿಕ ಸಮಸ್ಯೆಗಳ ಕುರಿತು ಚರ್ಚೆ

ಟೋಕಿಯೋದಲ್ಲಿ ನಡೆಯುತ್ತಿರುವ ನಾಲ್ಕನೇ ಕ್ವಾಡ್ ಶೃಂಗಸಭೆಯಲ್ಲಿ ಇಂಡೋ-ಫೆಸಿಫಿಕ್ ಆರ್ಥಿಕ ಚೌಕಟ್ಟು ಚಾಲನೆ ಜೊತೆಗೆ ಜಾಗತಿಕ ಸಮಸ್ಯೆಗಳ ಕುರಿತು ಚರ್ಚೆಗೆ ವೇದಿಕೆ ಆಯಿತು. ಶಾಂತಿ-ಸುವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದರು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅಲ್ಬನೀಸ್ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಕ್ವಾಡ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇಂಡೋ-ಪೆಸಿಫಿಕ್ ವಲಯದಲ್ಲಿ ಸ್ಥಿತಿಸ್ಥಾಪಕತ್ವ, ಸುಸ್ಥಿರತೆ, ಒಳಗೊಳ್ಳುವಿಕೆ, ಆರ್ಥಿಕ ಬೆಳವಣಿಗೆ, ನ್ಯಾಯಸಮ್ಮತತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆರ್ಥಿಕ ಪಾಲುದಾರಿಕೆ ಕುರಿತು ಸದಸ್ಯ ರಾಷ್ಟ್ರಗಳ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ರು. ಆಸ್ಟ್ರೇಲಿಯಾ ಪ್ರಧಾನಮಂತ್ರಿಗೆ ನರೇಂದ್ರ ಮೋದಿ ಅಭಿನಂದನೆ “ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನಾನು ಅಭಿನಂದಿಸುತ್ತೇನೆ. ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳ ನಂತರ ನಮ್ಮ ನಡುವೆ ನಿಮ್ಮ ಉಪಸ್ಥಿತಿಯು ಕ್ವಾಡ್ ಸ್ನೇಹದ ಶಕ್ತಿ ಮತ್ತು ಅದರ ಕಡೆಗೆ ನಿಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕ್ವಾಡ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ಜೋ ಬೈಡೆನ್ ಇಂಡೋ-ಫೆಸಿಫಿಕ್ ಪ್ರದೇಶವನ್ನು ಶಾಂತಿಯುತ ಮತ್ತು ಸ್ಥಿರವಾಗಿಡಲು ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಮುಂದಿನ ಹವಾಮಾನ ಬಿಕ್ಕಟ್ಟುಗಳನ್ನು ಎದುರಿಸಲು ನಮಗೆ ಸಾಕಷ್ಟು ಕೆಲಸಗಳಿವೆ ಎಂದ್ರು . ಕ್ವಾಡ್ ನಮ್ಮ ಮುಂದೆ ಬಹಳಷ್ಟು ಕಾರ್ಯಗಳನ್ನು ಹೊಂದಿದ್ದೇವೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇಂಡೋ-ಪೆಸಿಫಿಕ್ನಲ್ಲಿ ಯುಎಸ್ ಬಲವಾದ, ಸ್ಥಿರ ಮತ್ತು ನಿರಂತರ ಪಾಲುದಾರರಾಗಲಿದೆ ಎಂದು ಹೇಳಿದ್ರು.

ಜಗತ್ತಿನ ಎದುರು ಹೆಸರು ಮಾಡಿದ ಕ್ವಾಡ್ ವಿಶ್ವದ ಎದುರಿನಲ್ಲಿ ಕ್ವಾಡ್ ತನ್ನದೇ ಆಗಿರುವ ವಿಶೇಷ ಸ್ಥಾನಮಾನದ ಜೊತೆಗೆ ಮಹತ್ವವನ್ನು ಸಾರಿ ಹೇಳುತ್ತಿದೆ. ಕ್ವಾಡ್ನ ವ್ಯಾಪ್ತಿ ವಿಸ್ತಾರಗೊಂಡಿದ್ದು, ಅದರ ರೂಪ ಪರಿಣಾಮಕಾರಿಯಾಗಿದೆ. ನಮ್ಮಲ್ಲಿನ ಪರಸ್ಪರ ನಂಬಿಕೆ ಮತ್ತು ನಮ್ಮ ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತಿದೆ. ಕ್ವಾಡ್ ಮಟ್ಟದಲ್ಲಿ ಪರಸ್ಪರ ಸಹಕಾರದೊಂದಿಗೆ ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ನಮ್ಮೆಲ್ಲರ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES