Monday, December 23, 2024

ಬಿಜೆಪಿ ನನ್ನ ಕನಸ್ಸು ನನಸು ಮಾಡಿದ್ದಾರೆ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸೇವಾ ಮನೋಭಾವಕ್ಕೆ ನನಗೆ ಟಿಕೆಟ್ ಸಿಕ್ಕಿದೆ. ಇದರಿಂದ ಪಕ್ಷವು ನನ್ನ ಕನಸ್ಸು ನನಸ್ಸು ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ, ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದಲಿತರ ಕೋಟದಲ್ಲಿ ಎಸ್​​ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ದೊರೆತ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇವಾ ಮನೋಭಾವಕ್ಕೆ ಟಿಕೆಟ್ ಸಿಕ್ಕಿದೆ. ನನ್ನ ಕನಸ್ಸನ್ನು ಪಕ್ಷವು ಈಡೇರಿಸುವುದರ ಮೂಲಕ ನನಸ್ಸು ಮಾಡಿದ್ದಾರೆ. ಆದ್ದರಿಂದ ಪಕ್ಷಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದರು.

ಇನ್ನು ಇದು ದಲಿತ ಸಮುದಾಯಕ್ಕೆ ಕೊಟ್ಟಿರುವ ದೊಡ್ಡ ಕೊಡುಗೆಯಾಗಿದೆ. ಕಾಂಗ್ರೆಸ್​​ನವರು ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತ ಇದ್ದಾರೆ. ಆದರೆ ನಾನು ನನ್ನ ಸಮುದಾಯವನ್ನು ಪಕ್ಷದ ಪರವಾಗಿ ನಿಲ್ಲಲು ಪ್ರಯತ್ನ ಮಾಡುತ್ತೇನೆ ಎಂದು ಕಾಂಗ್ರೆಸ್​​​​​ಗೆ  ವಿರುದ್ಧ ಗುಡುಗಿದರು.

ಅಷ್ಟೇ ಅಲ್ಲದೇ ನನಗೆ ಈ ಟಿಕೆಟ್​​ ಕೊಡುವುದರ ಮೂಲಕ ನನ್ನ ಮೇಲೆ ಹೆಚ್ಚಿನ ಜವಬ್ದಾರಿ ಸಿಕ್ಕಿದೆ. ಜವಬ್ದಾರಿ ನಿರ್ವಹಿಸಲು ಪ್ರೇರಿಪಿತನಾಗುತ್ತೇನೆ. ರಾಜ್ಯಾದ್ಯಂತ ನಾನು ಸುತ್ತಿ ಸಮುದಾಯದ ಮುಖಂಡರ ಜೋಡಿಸುವ ಕೆಲಸ ಮಾಡುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES