Sunday, December 22, 2024

ಬಿಜೆಪಿ ಮುಖಂಡರು ಬಿಎಸ್​ವೈರನ್ನ ಕಡೆಗಣಿಸಿದ್ರಾ..?

ಮೈಸೂರು: ಪ್ರಚಾರ ಸಭೆಯ ಫೆಕ್ಸ್​ನಲ್ಲಿ ಯಡಿಯೂರಪ್ಪ ಫೋಟೋನೇ ಇಲ್ಲ ಹೀಗಾಗಿ ಬಿಜೆಪಿ ಮುಖಂಡರು ಬಿಎಸ್​ವೈರನ್ನ ಕಡೆಗಣಿಸಿದ್ರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ನಗರದ ಶಾರದಾ ಪಬ್ಲಿಕ್ ಸ್ಕೂಲ್​ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ ವೇದಿಕೆಯ ಹಿಂಬದಿಯ ಫ್ಲೆಕ್ಸ್​ನಲ್ಲಿ ಯಡಿಯೂರಪ್ಪ ಫೋಟೋ ಇರಲಿಲ್ಲ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಫ್ಲೆಕ್ಸ್​ನಲ್ಲಿ ಬಿಎಸ್​ವೈಗಿಲ್ವಾ ಸ್ಥಾನ..? ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ, ಕಟೀಲ್, ಸಿಎಂ ಸೇರಿ ಮೈಸೂರಿನ ಜನ ಪ್ರತಿನಿಧಿಗಳ ಫೋಟೋ ಹಾಕಲಾಗಿದೆ. ಆದ್ರೆ, ಮಾಜಿ ಸಿಎಂ ಯಡಿಯೂರಪ್ಪ ಫೋಟೋ ಮಾತ್ರ ಇರಲಿಲ್ಲ ಹೀಗಾಗಿ ಬಿಜೆಪಿ ಮುಖಂಡರು ಬಿಎಸ್​ವೈರನ್ನ ಕಡೆಗಣಿಸಿದ್ರಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

RELATED ARTICLES

Related Articles

TRENDING ARTICLES