Sunday, January 19, 2025

ರಂಗೇರಿದ ಮೇಲ್ಮನೆ ಫೈಟ್ ಬಿಜೆಪಿಯಿಂದ ನಾಲ್ಕು ಮಂದಿ ಕಣಕ್ಕೆ..!

ಬೆಂಗಳೂರು: ಸುಮಾರು ೧೦ ದಿನದ ಹಿಂದೆ ಪರಿಷತ್ ನ ನಾಲ್ಕು ಸ್ಥಾನಗಳಿಗೆ ೨೦ ನಾಮಿನಿ ಹೆಸರುಗಳನ್ನ ಹೈಕಮಾಂಡ್ ನಾಯಕರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ನಾಯಕರು ಶಿಪಾರಸ್ತು ಮಾಡಿದ್ರು. ಪಾರ್ಟಿ ಹೈಕಮಾಂಡ್ ಮತ್ತೆ ಅದೇ ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿ ಇದೀಗ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕೆಲವೇ ಗಂಟೆಗಳು ನಾಮಪತ್ರ ಸಲ್ಲಿಕೆಗೆ ಬಾಕಿ ಎನ್ನುವಾಗ ಅಚ್ಚರಿ ನಾಲ್ಕು ಹೆಸರುಗಳು ಬಂದಿರೋದು ವಿಶೇಷ.

ಹೌದು.‌ಲಕ್ಷ್ಮಣ್ ಸವದಿ. ಕೇಶವ ಪ್ರಸಾದ್. ಹೇಮಲತಾ ನಾಯಕ್ ಹಾಗೂ ಚಲವಾದಿ ನಾರಾಯಣಸ್ವಾಮಿಯವರನ್ನ ಈ ಬಾರೀ ಮೇಲ್ಮನೆಗೆ ಕಳಿಸಲು ಬಿಜೆಪಿ ಹೈಕಮಾಂಡ್ ಡಿಸೆಡ್ ಮಾಡಿದೆ. ಅದರಂತೆ ೨೦ ಮಂದಿ ನಾಮನಿರ್ದೇಶನ ದಲ್ಲಿ ನಾಲ್ಕು ಮಂದಿಯನ್ನ ಅಳೆದು ತೂಗಿ ಈ ನಾಲ್ಕು ಮಂದಿಗೆ ಮಣೆ ಹಾಕಿದ್ದಾರೆ ವರಿಷ್ಠರು. ಹೀಗಾಗಿ ಬಹಳ ಖುಷಿಯಿಂದಲೇ ಸಂತಸ ಹಂಚಿಕೊಂಡ ಪಕ್ಷದ ರಾಜ್ಯಾಧ್ಯಕ್ಷ ಕಟೀಲು ನನ್ನ ತಂಡದ ನಾಲ್ವರು ಸದಸ್ಯರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ಸಿಕ್ಕಿದೆ.‌ ಇದು ಬಹಳ ಸಂತೋಷವಾಗಿದ್ದು ಸಿಕ್ಕಿದ್ದು ಹಳೆ ಬೇರು ಹೊಸ ಚಿಗುರು ಎಂಬುವಂತೆ ವರಿಷ್ಠರು ಮಣೆ ಹಾಕಿದ್ದಾರೆ ಎಂದು ಹೇಳಿದ್ರು. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ್ ಹೊರಟ್ಟಿ ಅವರ ಹೆಸರನ್ನು ಪ್ರಕಟಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟೀಲು ಹೇಳಿದ್ರು.

ಇನ್ನು ಈ ಬಾರೀ ಪರಿಷತ್ ಗೆ ಬಿಎಸ್ ವೈ ಪುತ್ರ ವಿಜೇಯಂದ್ರ ಎಂಟ್ರಿಯಾಗ್ತಾರೆ ಎಂದು ಬಾರೀ ಸದ್ದು ಮಾಡಿತ್ತು. ಅದರಂತೆ ರಾಜ್ಯ ಕೋರ್ ಕಮಿಟಿ‌ ಸದಸ್ಯರು ಸಹ ಅವರ ಹೆಸರು ಶಿಫಾರಸು ಮಾಡಿ ಕಳಿಸಿದ್ರು. ಆದ್ರೆ ವರಿಷ್ಠರ ಮನ ಗೆಲ್ಲುವಲ್ಲಿ ವಿಜಯೇಂದ್ರ ಯಶಸ್ವಿಯಾಗಿಲ್ಲ. ಹೀಗಾಗಿ ವಿಜಯೇಂದ್ರಗೆ ಟಿಕೆಟ್ ಕೊಡದ ವರಿಷ್ಠರು ಪಕ್ಷ ನಿಷ್ಠೆ ತೋರಿದ ನಾಲ್ವರಿಗೆ ಮಣೆ ಹಾಕಿದೆ. ಆದ್ರೆ ಇದರಲ್ಲಿ ಬಿ ಎಸ್ ವೈನ ಯಾವುದೇ ಬೆಂಬಲಿಗರಿಗೆ ಟಿಕೆಟ್ ನೀಡದ ಬಿಜೆಪಿ ಹೈಕಮಾಂಡ್ ಬಿಎಲ್ ಸಂತೋಷ್ ಬಣದ ಅವದಿಗೆ ಮತ್ತೆ ಮಣೆ ಹಾಕಿದ್ದು ಯಡಿಯೂರಪ್ಪನವರ ಹಿನ್ನಡೆ ಎಂದು ಚರ್ಚೆಯಾಗ್ತಿದೆ. ಇತ್ತ ಟಿಕೆಟ್ ಪಡೆದವರು ಸಹ ಬಹಳ ಹರ್ಷ ವ್ಯಕ್ತಪಡಿಸಿದ್ರು.

ಬಿಜೆಪಿ ಹೈಕಮಾಂಡ್ ನ‌ ಈ ಅಚ್ಚರಿ ಅಯ್ಕೆಯ ಹಿಂದೆ ಪ್ರಮುಖ ಕಾರಣ ಸಹ ಕೊಪ್ಪಳದ ನಿವಾಸಿಯಾಗಿರೋ ಹೇಮಲತಾ ಸರ್ಕಾರಿ ಉಪನ್ಯಾಸಕನ್ನ ಮದುವೆಯಾಗಿ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದಾರೆ. ಅದರಲ್ಲೂ ಮಾಜಿ ಸಿಎಂ ಸಿದ್ದಾರಾಮಯ್ಯ ರವರಿಗೆ ಕುಂಕುಮ ಮತ್ತು‌ ಬಲೆಯನ್ನ ಕಳಿಸಿಕೊಡುವ ಮೂಲಕ ಅದರ ಮಹತ್ವದ ಬಗ್ಗೆ ಪಾಠ ಮಾಡಿ ಎಲ್ಲಾರ ಗಮನ ಸೆಳೆದಿದ್ರು. ಜೊತೆಗೆ ಪಕ್ಷಕೊಸ್ಕರ ಕೊಪ್ಪಳದಲ್ಲಿ ಹಗಲಿರುಳು ದುಡಿಯುತ್ತಿದ್ರು.. ಹೀಗಾಗಿ ಅಚರಿಗೆ ಪಕ್ಷ ಮಣೆ ಹಾಕಿದೆ ಎನ್ನಲಾಗಿದೆ. ಇನ್‌ ಸರ್ಕಾರಿ ನೌಕರಿ ಬಿಟ್ಟು ಪಕ್ಷದ ಅಭಿವೃದ್ಧಿಗೆ ದುಡಿದ ಕೇಶವ್ ಗೆ ಪಕ್ಷ ನ್ಯಾಯ ಸಮ್ಮತವಾಗಿ ಅಯ್ಕೆ ಮಾಡಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಕೊನೆ ಕ್ಷಣದವರೆಗೂ  ಮತ್ತೆ ಸಾಕಷ್ಟು ಕುತೂಹಲ ಕೆರಳಿಸಿ ಮತ್ತೆ ತನ್ನ ಪಕ್ಷದ ನಿಷ್ಠೆ ತೋರಿದವರಿಗೆ ಬಿಜೆಪಿ ಮಣೆ ಹಾಕಿರೋದು ವಿಶೇಷ.

RELATED ARTICLES

Related Articles

TRENDING ARTICLES