ಬೆಂಗಳೂರು : ಬಿಡಿಎ ಇದರ ಯೋಗ್ಯತೇನೇ ಇಷ್ಟೇ ಅನ್ನಿಸುತ್ತದೆ.ಪ್ರಾಧಿಕಾರದ ಉದ್ದೇಶವನ್ನ ಮರೆತು ಇಲ್ಲಿರೋ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ನಾವು ಮಾಡಿದಂತೆ ಎಲ್ಲಿಯೂ ಲೇಔಟ್ಗಳನ್ನ ಮಾಡಲ್ಲ ಅಂತ ಬಿಲ್ಡಪ್ ಕೊಡ್ತಾರೆ ಆದರೆ ಒಂದೇ ಒಂದು ಸಲ ಅರ್ಕಾವತಿ ಬಡಾವಣೆಗೆ ವಿಸಿಟ್ ಮಾಡಿದ್ರೆ ಬಿಡಿಎ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗ್ತದೆ. ಹೇಳೋಕೆ ಇದು ಪ್ರತಿಷ್ಠಿತ ಲೇಔಟ್.ಆದ್ರೆ ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಅನ್ನೋದೇ ಮರೀಚಿಕೆ. ಇಲ್ಲಿರೋ ಅಧಿಕಾರಿಗಳು ಅರ್ಕಾವತಿ ಬಡಾವಣೆಯ ಬಡ ನಿವೇಶನದಾರ ನೋವಿಗೆ ಸ್ವಂದಿಸೋ ಕಾಳಜಿ ಯಾರಿಗೂ ಇಲ್ಲ. ಲೇಔಟ್ ನಿರ್ಮಿಸಿ ನಿವೇಶನ ಹಂಚಿಕೆಗೆ ಉತ್ಸಾಹ ತೋರಿಸೋ ಬಿಡಿಎ, ಮೂಲಭೂತ ಸೌಕರ್ಯಗಳ ಕಡೆ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಹೀಗಾಗಿ ಬಿಡಿಎ ಅರ್ಕಾವತಿ ಲೇಔಟ್ನಲ್ಲಿ ಮನೆ ನಿರ್ಮಾಣ ಮಾಡಿದರವ ಕಥೆ ನರಕವಾಗ್ಬಿಟ್ಟಿದೆ.
ಯಲಹಂಕ ಬಳಿ ಬಿಡಿಎ ಎರಡು ದಶಕದ ಹಿಂದೆ ಅರ್ಕಾವತಿ ಬಡಾವಣೆ ನಿರ್ಮಾಣ ಮಾಡಿ ಸೈಟ್ ಗಳನ್ನ ಹಂಚಿಕೆ ಮಾಡಿದೆ.ಪ್ರತಿ ಸೈಟ್ ಗೆ 20*30 ಸೈಟ್ಗೆ 10 ಲಕ್ಷ , 30*40 ಗೆ 23 ಲಕ್ಷ, 40*60 ಗೆ 52 ಲಕ್ಷ, 50*80 ಗೆ 96 ಲಕ್ಷ ದಂತೆ ಸೈಟ್ ಹಂಚಿಕೆ ಮಾಡಿದೆ.ಆದ್ರೆ ಲೇಔಟ್ನಲ್ಲಿ ರಸ್ತೆ, ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಕೊಟ್ಟಿಲ್ಲ. ಸೌಕರ್ಯ ಇಲ್ಲದೆ ಇದ್ರೂ ನಾವು ಮನೆ ಕಟ್ಟಿದ ಮೇಲೆ ಆದ್ರೂ ಕರೆಂಟ್ ನೀರು ಒಳಚರಂಡಿ ಸೌಲಭ್ಯ ಕೊಡ್ತಾರೆ ವಿಶ್ವಾಸ ಇಟ್ಟು ಮನೆ ಕಟ್ಟಿದವರು ಸಂಕಟಕ್ಕೆ ಸಿಲುಕಿದ್ದಾರೆ.
ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಅರ್ಕಾವತಿ ಬಡಾವಣೆಯಲ್ಲಿ ಬಹುತೇಕ ಮಂದಿ ಇನ್ನೂ ಮನೆ ಕಟ್ಟಿಲ್ಲ. ಕೆಲವರು ಮನೆ ಅಲ್ಲಲ್ಲಿ ಮನೆ ಕಟ್ಟಿದ್ದಾರೆ.ಆದ್ರೆ ಲೇಔಟ್ ನಲ್ಲಿ ಯಾವದೇ ಸೌಲಭ್ಯ ಇಲ್ಲ. ಲೇಔಟ್ ಅಭಿವೃದ್ದಿಗೆ ಅಂತ ನೂರಾರು ಕೋಟಿ ಖರ್ಚು ಮಾಡಲಾಗಿದೆ.ಆದರೆ ಕಾಮಗಾರಿ ಇನ್ನೂ ಮುಗಿಸಿಲ್ಲ ಡೆಡ್ಲೈನ್ ಮುಗಿದ್ರೂ ಕಾಮಗಾರಿ ನಡೆದಿಲ್ಲ. ಮನೆ ಕಟ್ಟಿದ್ದೇವೆ ನಮಗೆ ಸೌಲಭ್ಯಗಳನ್ನ ನೀಡಿ ಅಂತ ಪರಿಪರಿಯಾಗಿ ಕೇಳಿಕೊಂಡರು ಬಿಡಿಎ ಮಾತ್ರ ತಲೆಕೆಡಿಸಿಕೊಳ್ತಿಲ್ಲ.
ಮಹಾನಗರಿಯಲ್ಲಿ ತಲೆಮೇಲೊಂದು ಸೂರು ಪಡೆದುಕೊಳ್ಳಬೇಕು ಅಂತ ಆಸೆ ಇಟ್ಟಿಕೊಂಡು ಸೈಟ್ ಖರೀದಿಸಿ ಮನೆ ಕಟ್ಟಿದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಲೇಔಟ್ ಅಭಿವೃದ್ಧಿ ಗೆ ಅಂತ ಬಿಡಿಎ ನೂರಾರು ಕೋಟಿ ಹಣ ಸುರಿಯುತ್ತಿದೆ. ಆದ್ರೂ ಲೇಔಟ್ ನಲ್ಲಿ ರಸ್ತೆ,ವಿದ್ಯುತ್, ನೀರು,ಒಳಚರಂಡಿ ಸೌಲಭ್ಯ ಇಲ್ಲ. ಬಿಡಿಎ ಮೂಲಭೂತ ಸೌಕರ್ಯ ಕಲ್ಪಿಸದೆ ಸೈಟ್ ಹಂಚಿಕೆ ಮಾಡಿದ್ದೇ ಯಡವಟ್ಟು. ಇನ್ನಾದ್ರೂ ಇತ್ತ ಬಿಡಿಎ ಗಮನ ಹರಿಸಿ ಅರ್ಕಾವತಿ ಲೇಔಟ್ನಲ್ಲಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.