Wednesday, January 22, 2025

Vikrant Rona: ರಾ ರಾ ರಕ್ಕಮ್ಮ.. ಬಿಟೌನ್ ಬ್ಯೂಟಿಕ್ವೀನ್​ಗೆ ಕಿಚ್ಚ ವೆಲ್ಕಮ್

ಸಿಪಾಯಿಯಲ್ಲಿ ಕ್ರೇಜಿಸ್ಟಾರ್ ರವಿಮಾಮನ ರುಕ್ಕಮ್ಮ ಎಲ್ರಿಗೂ ನೆನಪಿಸಿದ್ದಾರೆ. ಆದರೆ, ಇವೊತ್ತಿನಿಂದ ಸ್ಯಾಂಡಲ್​ವುಡ್​ ಸಿನಿಬಜಾರ್​ಗೆ ಗಡಾಂಗ್ ರಕ್ಕಮ್ಮ ಎಂಟ್ರಿ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚನೊಟ್ಟಿಗೆ ಸೊಂಟ ಬಳುಕಿಸೋ ಈಕೆಯ ವೈಯ್ಯಾರಕ್ಕೆ ಸಿನಿರಸಿಕರ ರಸಿಕತೆ ಮತ್ತಷ್ಟು ಹೆಚ್ಚಾಗಲಿದೆ.

ಹೈಲೆಟ್ಸ್​​​ ಪಾಯಿಂಟ್ಸ್​​: 

‘‘ಫಸ್ಟ್ ಸಾಂಗ್ ಔಟ್.. ಎಲ್ಲೆಲ್ಲೂ ರೋಣ ಗಾನಬಜಾನ..!
ರಾ ರಾ ರಕ್ಕಮ್ಮ.. ಬಿಟೌನ್ ಬ್ಯೂಟಿಕ್ವೀನ್​ಗೆ ಕಿಚ್ಚ ವೆಲ್ಕಮ್
ಬುಲಕ್ ಕಾರ್ಟ್​ನಲ್ಲಿ ಗಡಾಂಗ್ ರಕ್ಕಮ್ಮನ ಗ್ಲಾಮರ್
ನಾಳೆ ಬೆಳಗೇ ಗಂಟ.. ನೀ ನನ್ನ ನೆಂಟ ಎಂದ ರೋಣ’’

ದಿ ವೆಯ್ಟ್ ಈಸ್ ಓವರ್. ಮೋಸ್ಟ್ ಎಕ್ಸ್​ಪೆಕ್ಟೆಡ್ ವಿಕ್ರಾಂತ್ ರೋಣ ಆಲ್ಬಮ್​ನ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ರಾ ರಾ ರಕ್ಕಮ್ಮ ಅಂತ ಬಾಲಿವುಡ್​ ಬ್ಯೂಟಿಕ್ವೀನ್ ಜಾಕ್ವೆಲಿನ್​ಗೆ ಭರ್ಜರಿ ವೆಲ್ಕಮ್ ಕೋರಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಗಡಾಂಗ್ ರಕ್ಕಮ್ಮನಾಗಿ ಜಾಕ್ವೆಲಿನ್ ವೈಯ್ಯಾರಕ್ಕೆ ಎಲ್ರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.ಪಕ್ಕಾ ಡ್ಯಾನ್ಸಿಂಗ್ ನಂಬರ್ ಆಗಿರೋ ಗಡಾಂಗ್ ರಕ್ಕಮ್ಮ ಇಲ್ಲಿಯವರೆಗೂ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರೋ ಎಲ್ಲಾ ಐಟಂ ಹಾಡುಗಳಿಗಿಂತ ಸಖತ್ ಡಿಫರೆಂಟ್ ಆಗಿದೆ. ಕಾರಣ ಟ್ಯೂನು, ಲೈನು ಮತ್ತು ರೋಣ-ರಕ್ಕಮ್ಮನ ಡ್ಯಾನ್ಸಿಂಗ್ ಖದರ್. ಇದು ಕಿಚ್ಚ ಕರಿಯರ್​ನ ದಿ ಬೆಸ್ಟ್ ಸಾಂಗ್ ಆಗಲಿದ್ದು, ಟ್ರೆಂಡಿಂಗ್ ಸಾಂಗ್ ಆಗಿ ಧೂಳೆಬ್ಬಿಸ್ತಿದೆ.

ಎಕ್ಕ ಸಕ್ಕ ಅಂತ ಪಡ್ಡೆ ಹುಡ್ಗರ ನಿದ್ದೆಗೆಡಿಸೋ ಗಡಾಂಗ್ ರಕ್ಕಮ್ಮನಾಗಿ ಜಾಕ್ವೆಲಿನ್ ಬುಲಕ್ ಕಾರ್ಟ್​ ಹತ್ತಿ ಬಂದಿದ್ದಾರೆ. ಅವರಿಗೆ ವಿಕ್ರಾಂತ್ ರೋಣ ಕಿಚ್ಚ ರೆಡ್ ಕಾರ್ಪೆಟ್ ಹಾಕಿರೋದಲ್ಲದೆ, ನಾಳೆ ಬೆಳಗ್ಗೆ ತನಕ ನೀ ನನ್ನ ನೆಂಟ ಅಂತ ನೈಸ್ ಹೊಡೆಯುತ್ತಿದ್ದಾರೆ. ಈ ಒಂದು ಹಾಡಿನಿಂದ ವಿಕ್ರಾಂತ್ ರೋಣ ಚಿತ್ರದ ಮೇಲಿನ ಕ್ರೇಜ್ ದುಪ್ಪಟ್ಟಾಗಿದೆ. ಆಲ್ಬಮ್​ನ ಮೊದಲ ಹಾಡೇ ಚಿತ್ರದ ಟ್ರಂಪ್ ಕಾರ್ಡ್​ ಸಾಂಗ್ ಆಗುವ ಮನ್ಸೂಚನೆ ನೀಡಿದೆ.

ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ಹಾಡಿಗೆ ಸಾಹಿತ್ಯ ಪೋಣಿಸಿದ್ದು, ಕೇಳೋಕೆ ಒಂದೊಂದು ಪದ ಕೂಡ ಸಖತ್ ಮಜಭೂತಾಗಿದೆ. ಇನ್ನು ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅವ್ರ ಮ್ಯೂಸಿಕಲ್ ಜರ್ನಿಯ ಫ್ರೆಶ್ ಸಾಂಗ್ ಅನಿಸಿಕೊಂಡಿದೆ. ಸಾಹಿತ್ಯ, ಟ್ಯೂನ್​ಗೆ ಪೂರಕವಾಗಿ ನಕಾಶ್ ಹಾಗೂ ಸುನಿಧಿ ಚೌಹಾಣ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ.

ಕನ್ನಡದ ಜೊತೆ ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ತಯಾರಾಗುತ್ತಿದ್ದು, ಸದ್ಯ ಈ ಹಾಡು ಕನ್ನಡ ಅವತರಣಿಕೆಯಲ್ಲಷ್ಟೇ ಹಲ್​ಚಲ್ ಎಬ್ಬಿಸ್ತಿದೆ. ನಾಳಿಯಿಂದ ಪ್ರತೀ ದಿನ ಒಂದೊಂದು ಭಾಷೆಯಲ್ಲಿ ರಿಲೀಸ್ ಆಗಲಿದ್ದು, ಪರಭಾಷಿಗರಿಗೂ ರುಚಿಸಲಿದೆ. ಕಾರಣ ಜಾಕ್ವೆಲಿನ್-ಕಿಚ್ಚ ಇಬ್ಬರಿಗೂ ಬಹುತೇಕ ಎಲ್ಲಾ ಭಾಷೆಯಲ್ಲಿ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.

ಜಾಕ್ ಮಂಜು ನಿರ್ಮಾಣದ ಈ ಸಿನಿಮಾ ಜುಲೈ ತಿಂಗಳಾಂತ್ಯಕ್ಕೆ ತೆರೆಗೆ ಬರ್ತಿದ್ದು, ಇಂಡಿಯಾದ ಬಿಗ್ಗೆಸ್ಟ್ ಫ್ಯಾಂಟಸಿ ಅಡ್ವೆಂಚರ್ ಮೂವಿ ಆಗಲಿದೆ. ಸದ್ಯ ರಿಲೀಸ್ ಆಗಿರೋ ಟೀಸರ್​ಗಳು, ಮೇಕಿಂಗ್, ಗುಮ್ಮನ ಕಥೆಯನ್ನ ಬೇರೆಯದ್ದೇ ರೀತಿಯಲ್ಲಿ ಹೇಳೋ ಲಕ್ಷಣ ತೋರಿವೆ. ವಿಲಿಯಂ ಡೇವಿಡ್ ಕ್ಯಾಮೆರಾದಲ್ಲಿ ಸೆರೆಯಾಗಿರೋ ಈ ಸಿನಿಮಾ ಹೊಸ ಟಿಂಟ್​ನೊಂದಿಗೆ ನೋಡುಗರಿಗೆ ಫ್ಯಾಂಟಮ್ ವರ್ಲ್ಡ್​ನ ಪರಿಚಯಿಸಲಿದೆ.

ಒಟ್ಟಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ, ಈ ಸಿನಿಮಾದಿಂದ ವರ್ಲ್ಡ್​ ಕಟೌಟ್ ಪಟ್ಟಕ್ಕೇರಲಿದ್ದು, 2ಡಿ ಜೊತೆ ತ್ರೀಡಿಯಲ್ಲೂ ಮಸ್ತ್ ಮನರಂಜನೆ ನೀಡಲಿದ್ದಾರೆ. ಸಿಪಾಯಿ ಚಿತ್ರದ ರುಕ್ಕಮ್ಮನನ್ನ ಎಂದೂ ಮರೆಯಲಾಗಲ್ಲ ಅನ್ನೋದನ್ನ ರವಿಮಾಮ ಹೇಳಿದ್ರು. ಇದೀಗ ಈ ಗಡಾಂಗ್ ರಕ್ಕಮ್ಮನ ಗ್ಲಾಮರ್​ನ ಸಹ ನೀವೆಂದೂ ಮರೆಯಲು ಸಾಧ್ಯವಿಲ್ಲ ಅನ್ನೋದನ್ನ ಟೀಂ ವಿಕ್ರಾಂತ್ ರೋಣ ಹೇಳ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES