Sunday, December 22, 2024

ರಕ್ಷಿತ್ ಬದಲಾಗಿರೋ ಪರಿ ನೋಡಿದ್ರೆ ಶಾಕ್ ಆಗ್ತೀರಾ..!

ಹಾಲುಗಲ್ಲದ ಮಂಗಳೂರಿನ ಮುದ್ದು ಚೆಲುವ ರಕ್ಷಿತ್​ ಶೆಟ್ಟಿ. ಇವರ​ ಮ್ಯಾನರಿಸಂಗೆ, ಹೇರ್​ಸ್ಟೈಲ್​ಗೆ, ಹುಡುಗೀರೆಲ್ಲಾ ಮನಸಲ್ಲೇ ಮುದ್ದಾದ ಮನೆ ಕಟ್ಟಿದ್ದಾರೆ. ಆದರೆ, ಮಲ್ಲಿಗೆ ಹೂವಿನಂತಿದ್ದ ರಕ್ಷಿತ್​​, ಕೆಂಪುಗುಲಾಬಿಯಂತೆ ಹುಬ್ಬಿ ಹೋಗಿದ್ದಾರೆ. ಅವರ ಫಸ್ಟ್​​ ಲುಕ್​ ಪೋಸ್ಟರ್​​ ನೋಡಿ ಫ್ಯಾನ್ಸ್ ಶಾಕ್​ ಆಗಿದ್ದಾರೆ.

ರಕ್ಷಿತ್ ಬದಲಾಗಿರೋ ಪರಿ ನೋಡಿದ್ರೆ ಶಾಕ್ ಆಗ್ತೀರಾ..!
ಅಬ್ಬಬ್ಬಾ..! ರಕ್ಷಿತ್​​ ಶೆಟ್ಟಿಯ ತೂಕ ಎಷ್ಟು ಕೆಜಿ ಗೊತ್ತಾ..?

ನಮ್ ಕನ್ನಡ ಕಲಾವಿದರೆಲ್ಲಾ ಸೂಪರ್​ ಸ್ಟಾರ್​​ಗಳಾಗಿ ಮಿಂಚ್ತಿದಾರೆ. ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಅಬ್ಬರಿಸ್ತಿದ್ದಾರೆ. ನಮ್​ ಕುಡ್ಲ ಹುಡುಗ ರಕ್ಷಿತ್​​ ಶೆಟ್ಟಿಯ 777 ಚಾರ್ಲಿ ಚಿತ್ರದ ಟ್ರೈಲರ್​ ಯ್ಯೂಟ್ಯೂಬ್​​ನಲ್ಲಿ ಧೂಳೆಬ್ಬಿಸ್ತಿದೆ. ಶೆಟ್ಟಿ , 777ಚಾರ್ಲಿ ಚಿತ್ರಕ್ಕಾಗಿ ಪಟ್ಟಿರೋ ಶ್ರಮ ಟ್ರೈಲರ್​​ನಲ್ಲಿ ಎದ್ದು ಕಾಣಿಸುತ್ತೆ. ಮಲ್ಟಿ ಟ್ಯಾಲೆಂಟೆಡ್​​ ರಕ್ಷಿತ್​ ಅವರ ಕಂಟೆಂಟ್​​ ಚಿತ್ರಕ್ಕಾಗಿ ಹಗಲು ರಾತ್ರಿ ಜಪ ಮಾಡೋ ಕ್ರೇಜಿ ಫ್ಯಾನ್ಸ್​ ಕೂಡ ಇದ್ದಾರೆ. ಅವರ ಎಫರ್ಟ್​​, ಡೆಡಿಕೇಷನ್​​ಗೆ ಇಡೀ ಇಂಡಿಯಾ ​​ಬೆರಗಾಗಿದೆ. ಆದರೆ, ರಕ್ಷಿತ್​​ ಹೊಸ ಚಿತ್ರಕ್ಕಾಗಿ ಈ ಪರಿ ಎಫರ್ಟ್​ ಹಾಕ್ತಾರೆ ಅಂತಾ ಯಾರು ಊಹಿಸಿರಲಿಲ್ಲ ಬಿಡಿ. ಅವರ ನ್ಯೂ ಲುಕ್​ ನೋಡಿದ್ರೆ ನೀವು ಕೂಡ ಅಚ್ಚರಿ ಪಡ್ತೀರ.

777ಚಾರ್ಲಿ ನೋಡೋ ತವಕ ಒಂದ್​​ ಕಡೆಯಾದ್ರೆ, ಸಪ್ತಸಾಗರದಾಚೆ ಎಲ್ಲೋ ಚಿತ್ರದ ಗುಂಗು ಒಂದ್​ ಕಡೆ. ರಕ್ಷಿತ್​ ಫ್ಯಾನ್ಸ್​​ಗೆ ಇದು ಡಬಲ್​ ಧಮಾಕ ಇದ್ದಂತೆ . ಇವ್ರ​​ ಸಿಗ್ನೇಚರ್​​ ಸ್ಟೈಲ್​​ಗೆ ಎಲ್ಲರೂ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಅವನೇ ಶ್ರೀಮನ್​ನಾರಾಯಣ ಚಿತ್ರದ ನಂತ್ರ ರಕ್ಷಿತ್​​ ತುಂಬಾ ದುಬಾರಿಯಾದ್ರು. ಅವರ ಕಾಲ್​​ಶೀಟ್​​ ಅಷ್ಟು ಸುಲಭಕ್ಕೆ ಸಿಕ್ಕಲ್ಲಾ ಬಿಡಿ. ಒಂದ್​ ಸಿನಿಮಾ ಗೆದ್​ ತಕ್ಷಣ ರಿಕ್ಕಿ ಜಾಲಿಮೂಡ್​​ನಲ್ಲಿದಾರೆ ಅನ್ಕೋಬೇಡಿ. ಪ್ರತಿ ಚಿತ್ರಕ್ಕೂ ದೇಹವನ್ನು ದಂಡಿಸ್ತಿದ್ದಾರೆ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಬೇಕು ಅಂತಾ ಹಗಲು ರಾತ್ರಿ ವರ್ಕ್​ಔಟ್​ ಮಾಡ್ತಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ರಕ್ಷಿತ್​, ಬರೋಬ್ಬರಿ 20ಕೆಜಿ ಫ್ಯಾಟ್​​ ಆಗಿದ್ದಾರೆ. ಈ ಚಿತ್ರದ ಫಸ್ಟ್​​ ಲುಕ್​ ರಿವೀಲ್​​ ಆಗಿದ್ದು, ರಕ್ಷಿತ್​​ ಬಾಡಿ ನೋಡಿ, ಅರೆ..! ರಕ್ಷಿತ್​, ಅನ್​ಬಿಲೀವೆಬಲ್​ ಅಂತಾ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಹ್ಯಾಂಡ್ಸಮ್ ಬಾಯ್​ ರಕ್ಷಿತ್​​ಗೆ ಬ್ಲೇಡ್​​ ಹಾಕಿದ್ಯಾರು..?
ನ್ಯೂ ಸ್ಟೈಲ್​​​.. ಹೊಸ ಲುಕ್​.. ಏನು ಅವರ ಅವತಾರ..?

ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್​ ಡಿಫರೆಂಟ್​ ರೋಲ್​ ನಲ್ಲಿ ನಟಿಸ್ತಿದ್ದಾರೆ. ಈ ರೀತಿಯ ಪಾತ್ರದಲ್ಲಿ ರಕ್ಷಿತ್​​ರನ್ನು ನೀವು ನೋಡಿರೋಕೆ ಸಾಧ್ಯವಿಲ್ಲ. ಎರಡು ವಿಭಿನ್ನ ಶೇಡ್​​ಗಳಲ್ಲಿ ರಕ್ಷಿತ್​​ ಆ್ಯಕ್ಟ್​ ಮಾಡ್ತಿದ್ದಾರೆ. ಚಾಲೆಂಜಿಂಗ್​ ರೋಲ್​​ ಆಗಿರೋದ್ರಿಂದ, ಆ ಪಾತ್ರಕ್ಕೆ ತಕ್ಕಂತೆ ಫ್ಯಾಟ್​ ಆಗ್ಬೇಕಿತ್ತು.ಹಾಗಾಗಿ 20ಕೆಜಿ ಯಷ್ಟು ದಪ್ಪ ಆಗಿದ್ದಾರೆ ರಕ್ಷಿತ್​​. ಈ ಸರ್​ಪ್ರೈಸಿಂಗ್​ ನ್ಯೂ ಲುಕ್​ ನೋಡಿ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಈ ಚಿತ್ರದ ಫಸ್ಟ್​ ಶೆಡ್ಯೂಲ್​ ಮುಗಿಸಿ ಫ್ಯಾಟ್​​ ಆಗೋಕೆ 2 ತಿಂಗಳು ಟೈಮ್​ ತೆಗೆದುಕೊಂಡಿದ್ದ ರಕ್ಷಿತ್​ 20 ಕೆಜಿ ದಪ್ಪ ಆಗಿದ್ದಾರೆ.

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​​ನಲ್ಲಿ ರಕ್ಷಿತ್​​ ಮುಖಕ್ಕೆ ಯಾರೋ ಬ್ಲೇಡ್​ ಹಾಕಿದ್ದಾರೆ. ಗಡ್ಡ ಬಿಟ್ಟಿರೋ ರಕ್ಷಿತ್​ ತಲೆ ಮೇಲೆ ಸಣ್ಣ ಕುರುಚಲು ಕೂದಲು ಇದೆ. ಬಾಗಿಲ ಬಳಿ ಸೈಲೆಂಟ್​ ಆಗಿ ನಿಂತಿರೋ ಪೋಸ್​ ನೋಡಿದ್ರೆ, ರಕ್ಷಿತ್​​ ಯಾರ ಜೊತೆ ಕಿರಿಕ್​ ಮಾಡ್ಕೊಂಡ್ರಪ್ಪಾ ಅನಿಸುತ್ತೆ. ಒಟ್ನಲ್ಲಿ, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿರೋ ಈ ಪೋಸ್​ ಮಾತ್ರ, ಹೊಸ ಕಥೆಗೆ ಹೊಸ ಟ್ವಿಸ್ಟ್​​ ಕೊಟ್ಟಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಆ್ಯಕ್ಷನ್​​ ಕಟ್​​ ಹೇಳಿದ್ದ ಹೇಮಂತ್​ ಕುಮಾರ್​​ ಮತ್ತೆ ರಕ್ಷಿತ್​​ ಜೊತೆ ಒಂದಾಗಿದ್ದಾರೆ. ಚಿತ್ರದಲ್ಲಿ ಗ್ಲಾಮರ್​ ಬ್ಯೂಟಿ ರುಕ್ಮಿಣಿ ವಸಂತ್​ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್​​, ಮನು ರೋಲ್​ನಲ್ಲಿ ಕಾಣಿಸಿಕೊಂಡ್ರೆ, ನಟಿ ರುಕ್ಮಿಣಿ, ಪ್ರಿಯಾ ಪಾತ್ರದಲ್ಲಿ ಮಿಂಚಿದ್ದಾರೆ. ಪರಮ್​ ವ್ಹಾ ಬ್ಯಾನರ್​​ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗ್ತಿದ್ದು, ಚರಣ್​​ರಾಜ್​​ ಇಂಪಾದ ಸಂಗೀತವಿರಲಿದೆ. ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕವಿರಲಿದೆ. ರಕ್ಷಿತ್​ ಖಾತೆಯಲ್ಲಿರೋ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಕೂಡ ಒಂದು. ಬಾಕ್ಸ್ ಆಫೀಸ್​ ಬ್ಯಾಂಗ್​ ಬ್ಯಾಂಗ್​ ಮಾಡೋಕೆ ಸದ್ಯದಲ್ಲೇ ತೆರೆಗೆ ಬರಲಿದೆ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES