Monday, December 23, 2024

ಬಾಲಯ್ಯನ ಮಗಳಾಗಿ ಕಿಸ್ ಪೋರಿ ಶ್ರೀಲೀಲಾ ಮಿಂಚು

ಎಲ್ಲಿ ಕಳೆದುಕೊಳ್ತೀವೋ ಅಲ್ಲೇ ಸಕ್ಸಸ್​​ನ ಹುಡುಕಿಕೊಳ್ಳೋದರಲ್ಲಿ ಸಿಗೋ ಮಜಾನೇ ಬೇರೆ. ಶ್ರೀಲೀಲಾ ಚೊಚ್ಚಲ ಸಿನಿಮಾ ಫ್ಲಾಪ್ ಆದ್ರೂ, ಟಾಲಿವುಡ್​ನಲ್ಲಿ ತಮ್ಮ ಪ್ರಯತ್ನಗಳು ಮಾತ್ರ ನಿರಂತರವಾಗಿವೆ. ಮಾಸ್ ಮಹಾರಾಜ ರವಿತೇಜಾ ಜೊತೆ ಧಮಾಕ ಮಾಡ್ತಿರೋ ಈ ಕ್ಯೂಟ್ ಕ್ವೀನ್, ಬಾಲಯ್ಯನೊಟ್ಟಿಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ.

ಹೈಲೆಟ್ಸ್​​ ಪಾಯಿಂಟ್ಸ್​: 

ಟಾಲಿವುಡ್​ನಲ್ಲಿ ಕ್ಯೂಟ್ ಕ್ವೀನ್ ಶ್ರೀಲೀಲಾ ಹಂಗಾಮ..!
ಪೆಳ್ಳಿಸಂದಡಿ ಫ್ಲಾಪ್ ಆದ್ರೂ ಡಬಲ್ ಆಯ್ತು ಡಿಮ್ಯಾಂಡ್

ಬಾಲಯ್ಯನ ಮಗಳಾಗಿ ಕಿಸ್ ಪೋರಿ ಶ್ರೀಲೀಲಾ ಮಿಂಚು
F3 ಡೈರೆಕ್ಟರ್ ರವಿಪುಡಿ ಸಾರಥ್ಯದಲ್ಲಿ ತಂದೆ- ಮಗಳ ಕಥೆ

ಸ್ಯಾಂಡಲ್​ವುಡ್​ನ ಕ್ಯೂಟ್ ಕ್ವೀನ್ ಶ್ರೀಲೀಲಾ ಸೌತ್​ ಕ್ವೀನ್ ಆಗಿ ಮಿಂಚ್ತಿದ್ದಾರೆ. ಹೌದು.. ಕಿಸ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆದ ಈ ಚೆಲುವೆ, ಅಮೆರಿಕಾದಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬೆಳೆದ ತೆಲುಗು ಕುಟುಂಬದವರು. ಇನ್ನೂ ಇಪ್ಪತ್ತು ವರ್ಷದ ಈಕೆ, ಕ್ಯೂಟ್​​ಗೆ ಕೇರ್ ಆಫ್ ಅಡ್ರೆಸ್ ಆಗಿ ಎಲ್ಲೆಡೆ ತನ್ನದೇ ಆದ ಚೆಡಗು ಬಿನ್ನಾಣ ತೋರಿಸ್ತಿದ್ದಾರೆ.

ಕಿಸ್, ಭರಾಟೆ, ಬೈಟು ಲವ್ ಹಾಗೂ ಜೇಮ್ಸ್ ಸಿನಿಮಾಗಳಲ್ಲಿ ನಟಿಸೋ ಮೂಲಕ ಕರುನಾಡಿಗೆ ಚಿರಪರಿಚಿತರಾದ ಈ ಗಿಣಿಮರಿ, ಪಕ್ಕದ ಟಾಲಿವುಡ್​ಗೂ ಕಾಲಿಟ್ಟರು. ಮೇಕ ಶ್ರೀಕಾಂತ್​ರ ಪುತ್ರ ರೋಷನ್ ಜೊತೆಗಿನ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ರು.

ಅಂದ, ಚೆಂದದ ಜೊತೆ ನಟನೆಯಲ್ಲೂ ಪಾರಂಗತೆ ಈ ಪೋರಿ. ಹೀಗಿದ್ದರೂ ಪೆಳ್ಳಿ ಸಂದಡಿ ಮೂವಿ ಪ್ರೇಕ್ಷಕರಿಗೆ ರುಚಿಸದೇ ಹೋಯ್ತು. ಆದ್ರೆ ಕಳೆದುಕೊಂಡಲ್ಲೇ ಸಕ್ಸಸ್​ನ ಹುಡುಕಿಕೊಳ್ಳಬೇಕು ಅನ್ನೋ ತತ್ವವನ್ನು ನಂಬಿರೋ ಈ ಚೆಂದುಳ್ಳಿ ಚೆಲುವೆ, ಚೊಚ್ಚಲ ತೆಲುಗು ಸಿನಿಮಾ ಸೋತರೂ, ಮತ್ತೆ ಅಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಮಾಸ್ ಮಹಾರಾಜ ರವಿತೇಜಾ ಜೊತೆ ಧಮಾಕ ಚಿತ್ರದಲ್ಲಿ ನಟಿಸ್ತಿದ್ದಾರೆ.

ತೆಲುಗಿನ ಮತ್ತೊಂದು ಮೆಗಾ ಪ್ರಾಜೆಕ್ಟ್​ಗೆ ಗ್ರೀನ್ ಸಿಗ್ನಲ್ ನೀಡಿದ್ದು, ಲಿವಿಂಗ್ ಲೆಜೆಂಡ್ ನಂದಮೂರಿ ಬಾಲಕೃಷ್ಣ ಜೊತೆ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಅರೇ ಬಾಲಯ್ಯ ಜೊತೆ ಶ್ರೀಲೀಲಾನಾ ಅಂತ ಹುಬ್ಬೇರಿಸ್ಬೇಡಿ. ಯಾಕಂದ್ರೆ ನಟಸಿಂಹನ ಜೊತೆ ನಮ್ಮ ಕ್ಯೂಟ್ ಕ್ವೀನ್ ಹೀರೋಯಿನ್ ಆಗಿ ನಟಿಸ್ತಿಲ್ಲ. ನೀವೆಲ್ರೂ ತಂದೆ- ಮಗಳ ತರಹ ಇರ್ತಾರೆ ಅಂದುಕೊಂಡಂತೆ, ಸಿನಿಮಾದಲ್ಲಿ ಇವ್ರ ಕಾಂಬೋ ತಂದೆ- ಮಗಳು.

ಎಫ್​3 ಸಿನಿಮಾದ ಡೈರೆಕ್ಟರ್ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಬಾಲಯ್ಯನ 108ನೇ ಚಿತ್ರ ಸೆಟ್ಟೇರಲಿದ್ದು, ಇಲ್ಲಿ ಬಾಲಯ್ಯ 50 ವರ್ಷದ ತಂದೆಯ ಪಾತ್ರದಲ್ಲಿ ಕಾಣಸಿಗಲಿದ್ದಾರಂತೆ. ಇದು ತಂದೆ- ಮಗಳ ಬಾಂಧವ್ಯಕ್ಕೆ ಹೊಸ ಆಯಾಮ ಕೊಡಲಿದ್ದು, ಇಲ್ಲಿಯವರೆಗೆ ಯಾರೂ ಟ್ರೈ ಮಾಡದೇ ಇರೋ ಅಂತಹ ಕಥೆಯನ್ನ ಟಚ್ ಮಾಡಲಿದ್ದಾರಂತೆ. ವಿಶೇಷ ಅಂದ್ರೆ ಬಾಲಯ್ಯಗೆ ಸರಿಹೊಂದುವಂಹ ವಯಸ್ಸಾದ ನಟೀಮಣಿಯ ಹುಡುಕಾಟದಲ್ಲಿದೆ ಚಿತ್ರತಂಡ.

ಸದ್ಯ ಬಾಲಯ್ಯ ತಮ್ಮ 107ನೇ ಚಿತ್ರವನ್ನ ಗೋಪಿಚಂದ್ ಮಾಲಿನೇನಿ ಡೈರೆಕ್ಷನ್​ನಲ್ಲಿ ಮಾಡ್ತಿದ್ದು, ನಮ್ಮ ಸ್ಯಾಂಡಲ್​ವುಡ್ ಸಲಗ ಅದ್ರಲ್ಲಿ ಖಡಕ್ ಖಳನಾಯಕನಾಗಿ ಕಮಾಲ್ ಮಾಡ್ತಿದ್ದಾರೆ. ಇನ್ನು ಬಾಲಯ್ಯ- ಶ್ರೀಲೀಲಾ ಕಾಂಬೋ ನಮ್ಮ ಕನ್ನಡದಲ್ಲಿ ಅಪ್ಪ ಐ ಲವ್ ಯೂ ಸಾಂಗ್​​ನ ಮಾನ್ವಿತಾ ಹಾಗೂ ಕಾಶಿನಾಥ್ ಜೋಡಿಯನ್ನ ನೆನಪಿಸಿದ್ರೂ ಅಚ್ಚರಿಯಿಲ್ಲ.

ಒಟ್ಟಾರೆ ಶ್ರೀಲೀಲಾ ಅನ್ನೋ ಈ ಮುದ್ದು ಬಂಗಾರಿ, ರಾಕಿಭಾಯ್ ಯಶ್ ಹೇಳಿದಂತೆ ಇಂಡಿಯಾ ಒಂದು ರೌಂಡ್ ಬರಲಿದ್ದಾರೆ. ಸದ್ಯ ಈಕೆಯಲ್ಲಿ ಅಂತಹ ಚಾರ್ಮ್​ ಎದ್ದು ಕಾಣ್ತಿದ್ದು, ಬಹುಬೇಗ ಬಿಗ್ ಸ್ಟಾರ್ಸ್​ ಜೊತೆ ಚಾನ್ಸ್​​ ಗಿಟ್ಟಿಸಿಕೊಳ್ತಿದ್ದಾರೆ. ಅದು ಆಕೆಯ ಅಂದ & ಅದೃಷ್ಟವೂ ಹೌದು. ಜೊತೆಗೆ ಸಾಮರ್ಥ್ಯವೂ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES