Monday, December 23, 2024

ಸಂಕಷ್ಟದಲ್ಲಿರುವ ರೈತರಿಗೆ ಶಾಕ್ ನೀಡಿದ ಬ್ಯಾಂಕ್​ಗಳು

ಬಳ್ಳಾರಿ : ಮಳೆ ಗಾಳಿಗೆ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರೋ ರೈತರಿಗೆ ಬೆಳೆ ಸಾಲ ಮರುಪಾವತಿಗೆ ರೈತರಿಗೆ ಬ್ಯಾಂಕ್ ಗಳು ನೋಟಿಸ್ ನೀಡಿದೆ.

ಬೆಳೆ ಸಾಲ ಮರುಪಾವತಿಗೆ ರೈತರಿಗೆ ನೋಟಿಸ್ ನೀಡಿದ ಬ್ಯಾಂಕ್​ಗಳು, ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ಅನ್ನದಾತರಿಗೆ ಆತಂಕ ಉಂಟಾಗಿದೆ. ಜಮೀನು ಹರಾಜು ಹಾಕುವ ಮೌಖಿಕ ನೋಟಿಸ್ ಜಾರಿ ಮಾಡ್ತಿರೋ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿಗಾಗಿ ರೈತರು ಮಾಡಿದ ಸಾಲ‌ ಮರುಪಾವತಿಗಾಗಿ ನೋಟಿಸ್‌ ಜೊತೆಗೆ ಕಿರುಕುಳ ಆರೋಪ ನೀಡಿದ್ದಾರೆ.

ಅದುವಲ್ಲದೇ, ಕೊನೆಯ ಹಂತದ ಕಾನೂನು ಕ್ರಮ ಜರುಗಿಸುವುದಾಗಿ ಬ್ಯಾಂಕ್‌ನಿಂದ ರೈತರಿಗೆ ನೋಟಿಸ್ ನೀಡಿದ್ದು, ಹೊಸಪೇಟೆ , ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕಿನ ನೂರಾರು ರೈತರಿಗೆ ನೋಟಿಸ್ ಜಾರಿ ಮಾಡಿದ್ದು, ಕಾರ್ಪೋರೇಷನ್ ಬ್ಯಾಂಕ್‌ನಿಂದ ಕೆಲವು ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನು, ಸಾಲ ಮರುಪಾವತಿ ಮಾಡಬೇಕು ಇಲ್ಲವಾದ್ರೆ ಆಸ್ತಿ ಜಪ್ತಿ ಮಾಡ್ತೇವೆಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷವೂ ಅಕಾಲಿಕ ಮಳೆಗೆ ಬೆಳೆ ನಾಶವಾಗಿತ್ತು ಹೀಗಾಗಿ ಅಸಲು, ಬಡ್ಡಿ ಮರುಪಾವತಿ ಸಾಧ್ಯ ಆಗ್ತಿಲ್ಲ. ಇದೀಗ ಚಕ್ರ ಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದೆ ಅಂತಾ ಅನ್ನದಾತರು ಕಂಗಾಲಾಗಿದ್ದಾರೆ. ಅನ್ನದಾತರ ಸಂಕಷ್ಟ ಆಲಿಸದೆ ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿ ಪಟ್ಟು ಹಿಡಿದಿದ್ದು, ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ ಆದ್ರೆ ಬಡ್ಡಿ ವಿನಾಯ್ತಿಗೆ ರೈತರು ಮನವಿಯನ್ನು ಮಾಡಿದ್ದಾರೆ. 300 ಕ್ಕೂ ಹೆಚ್ಚು ರೈತರಿಗೆ ಅಂತಿಮ ಹಂತದ ನೋಟಿಸ್ ಜಾರಿ ಮಾಡಿದ್ದು, ಅನ್ನದಾತರು ವಿಜಯನಗರ ಡಿಸಿ ಮೊರೆ ಹೋಗಿದ್ದಾರೆ.

RELATED ARTICLES

Related Articles

TRENDING ARTICLES