Monday, December 23, 2024

ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ

ಉಡುಪಿ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿದ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ನಡೆದಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿರುವ ಈ ಘಟನೆಯಲ್ಲಿ ಬೆಂಗಳೂರಿನ ಆರ್.ಟಿ.ನಗರದ ಯಶವಂತ ಯಾದವ್, ಜ್ಯೋತಿ ಮೃತರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ‌ ಮಿಸ್ಸಿಂಗ್ ಕೇಸು ದಾಖಲಾಗಿತ್ತು. ನಿನ್ನೆ ಮಂಗಳೂರಲ್ಲಿ ಹುಸೇನ್ ಎಂಬುವರಿಂದ ಕಾರು ಬಾಡಿಗೆ ಪಡೆದಿದ್ದು, ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿಗಾಹುತಿಯಾಗಿದ್ದ ಕಾರನ್ನು ನೋಡಿ ಸ್ಧಳೀಯರು ನೆರವಿಗೆ ಧಾವಿಸಿದ್ದಾರೆ. ಬೆಂಕಿ ನಂದಿಸಿದಾಗ ಸುಟ್ಟು ಕರಗಲಾದ ಇಬ್ಬರ ಶವಗಳು ಪತ್ತೆಯಾಗಿವೆ.

ಘಟನೆಯಲ್ಲಿ ಸ್ವಿಫ್ಟ್​ ಕಾರು ಸಂಪೂರ್ಣ ಸುಟ್ಟು ಕರಗಲಾಗಿದ್ದು, ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ಸ್ಧಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES