Wednesday, January 22, 2025

ಐಪಿಎಲ್ ಫೈನಲ್ಸ್ v/s ಆಮೀರ್ ಲಾಲ್ ಸಿಂಗ್ ಚಡ್ಡಾ

ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ‌ಗೆ ಇಡೀ ವಿಶ್ವವೇ ಎದುರು ನೋಡ್ತಿರೋ ಸುದ್ದಿ ನಿಮಗೆಲ್ಲಾ ಗೊತ್ತೆ ಇದೆ. ಸರ್​ಪ್ರೈಸಿಂಗ್ ವಿಷ್ಯ ಅಂದ್ರೆ ಲಗಾನ್ ರೀತಿ ಕ್ರಿಕೆಟ್ ಜೊತೆ ತಮ್ಮ ಸಿನಿಮಾನ ಪ್ರಮೋಷನ್ ಮಾಡೋಕೆ ಯುನಿಕ್ ಪ್ಲಾನ್ ಮಾಡಿದ್ದಾರೆ. ಇತಿಹಾಸದಲ್ಲೆ ಮೊದಲ ಬಾರಿಗೆ ಕ್ರಿಕೆಟ್ ಪ್ರೇಮಿಗಳು ಹಾಗೂ ಚಿತ್ರಪ್ರೇಮಿಗಳು ಏಕಕಾಲಕ್ಕೆ ಥ್ರಿಲ್ ಆಗಲಿದ್ದಾರೆ. ಏನಿದ್ರ ಇನ್​ಸೈಡ್ ಸ್ಟೋರಿ ಅಂತೀರಾ. ಜಸ್ಟ್ ವಾಚ್.

  • ಮೊದಲ ಬಾರಿ ಕ್ರಿಕೆಟ್ ಅಂಗಳಕ್ಕೆ ಮಿ.​ ಪರ್ಫೆಕ್ಟ್​​ ಎಂಟ್ರಿ..!

ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ ಹಾಗೂ ಬಾಲಿವುಡ್​ನ ಲಾಲ್​​ಸಿಂಗ್ ಚಡ್ಡಾ ಚಿತ್ರಕ್ಕೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗ್ಬೇಕಿತ್ತು. ಆದ್ರೆ ಆಟ ಶುರುವಾಗೋ ಮುಂಚೆ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಎಚ್ಚೆತ್ತುಕೊಂಡು ಸೇಫ್ ಆಗಿಬಿಟ್ರು. ಇದೆಲ್ಲಾ ಹಳೆ ಕಥೆ ಬಿಡಿ. ಆದ್ರೆ ಬಿಸಿಬಿಸಿ ಸುದ್ದಿ ಬೇರೇನೆ ಇದೆ. ಲಾಲ್​​ಸಿಂಗ್ ಚಡ್ಡಾ ಐಪಿಲ್ ಫೈನಲ್ ಮ್ಯಾಚ್​ ದಿನದಂದು ಹಿಸ್ಟರಿ ಕ್ರಿಯೇಟ್ ಮಾಡಲಿದೆ. ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳನ್ನು ಫೈನಲ್ ಮ್ಯಾಚ್ ದಿನವೇ ಒಂದು ಮಾಡೋಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಆಮೀರ್ ಖಾನ್​ಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಹಾಗಂತ ಐಪಿಎಲ್ ಫೈನಲ್ ಮ್ಯಾಚ್​ಗೆ ಆಮೀರ್ ಜರ್ಸಿ ತೊಟ್ಟು ಫೀಲ್ಡ್​ಗೆ ಎಂಟ್ರಿ ಕೊಡ್ತಿಲ್ಲ. ಇಲ್ಲಾ, ನೀವಂದ್ಕೊಂಡ ಹಾಗೆ ಅಂದು ಲಾಲ್ ಸಿಂಗ್ ಚಡ್ಡಾ ಚಿತ್ರ ರಿಲೀಸ್ ಮಾಡ್ತಿಲ್ಲ. ಸಿನಿಮಾ ಪ್ರಮೋಟ್ ಮಾಡೋಕೆ ಚಡ್ಡಾ ಟೀಮ್ ತಲೆಗೆ ಕೆಲಸ ಕೊಟ್ಟು ಕ್ರಿಯೇಟಿವ್ ಆಗಿ ಹೊಸ ಪ್ಲ್ಯಾನ್ ಮಾಡ್ಕೊಂಡಿದೆ. ಯೆಸ್, ಚಿತ್ರದ ಟ್ರೈಲರ್​ನ ಫೈನಲ್ ಮ್ಯಾಚ್ ನಡೆಯೋ ದಿನವೇ ಲೈವ್ ರಿಲೀಸ್ ಮಾಡಲಿದೆ. ಈ ಮೂಲಕ ಟೆಲಿವಿಷನ್ ಹಾಗೂ‌ ಕ್ರೀಡಾ ಇತಿಹಾಸದಲ್ಲಿ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ದಾಖಲೆಯ ಪುಟ ಸೇರಲಿದೆ.

  • ಸ್ಟೇಡಿಯಂನಲ್ಲಿ ಕ್ರಿಕೆಟ್ ರಂಗು ಜೊತೆ ಲಾಲ್ ಸಿಂಗ್ ಗುಂಗು
  • ಟೆಲಿವಿಷನ್ ಇತಿಹಾಸದಲ್ಲಿ ಆಮೀರ್ ನೂತನ ದಾಖಲೆ..! 

ತ್ರೀ ಈಡಿಯಟ್ಸ್​​​ನಲ್ಲಿ ಜೋಡಿಯಾಗಿ ಮಿಂಚಿದ್ದ ಆಮೀರ್ ಖಾನ್, ಕರೀನಾ ಕಪೂರ್ ಅಭಿ‌ಯನಯದ ಮೋಸ್ಟ್ ಎಕ್ಸ್​​​ಪೆಕ್ಟೆಡ್ ಚಿತ್ರ ಲಾಲ್​​ಸಿಂಗ್ ಚಡ್ಡಾ. ನಾಗಾರ್ಜುನ್ ಪುತ್ರ ಅಕ್ಕಿನೇನಿ, ಸಂಜಯ್ ದತ್ ಹೀಗೆ ಘಟಾನುಘಟಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಆಗಸ್ಟ್ 11ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಅನೌನ್ಸ್ ಕೂಡ ಮಾಡಿದೆ. ಟ್ರೈಲರ್ ರಿಲೀಸ್​​ಗೆ ಕಾಯ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ಹೊಸ ಸುದ್ದಿ ಕೇಳಿ ಥ್ರಿಲ್ ಆಗಿದೆ. ಮೇ 29ಕ್ಕೆ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಈ ಮ್ಯಾಚ್ ಪ್ರಸಾರದ ಹೊಣೆ ಹೊತ್ತಿರೋ ವಾಹಿನಿ ಜೊತೆ ಚಿತ್ರತಂಡ ವಿಶೇಷ ಒಪ್ಪಂದ ಮಾಡಿಕೊಂಡಿದೆ.

ಈ ವರ್ಷದ ಐಪಿಎಲ್ ಟಿಟ್ವೆಂಟಿ ಮ್ಯಾಚ್ ಪ್ರತಿದಿನವೂ ನಡೀತಿದ್ದು, ಪೈನಲ್​ಗೆ ಯಾರು ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸ್ಟೇಡಿಯಂ ಹೊರತು ಪಡಿಸಿದ್ರೆ, ಮನೇಲಿ, ಮೊಬೈಲ್​ನಲ್ಲಿ ಕೋಟ್ಯಂತರ ಅಭಿಮಾನಿಗಳು ಫೈನಲ್ ಮ್ಯಾಚ್ ನೋಡ್ತಾರೆ. ಮ್ಯಾಚ್ ಶುರುವಾಗಿ ಎರಡನೇ ಸ್ಟ್ರ್ಯಾಟಜಿಕ್ ಟೈಂ ಔಟ್ ಸಮಯಕ್ಕೆ ಲಾಲ್ ಸಿಂಗ್ ಚಡ್ಡಾ ಮೂವಿಯ ಟ್ರೈಲರ್​ನ ಕ್ರಿಕೆಟ್ ನೇರ ಪ್ರಸಾರವಾಗೋ​​ ಚಾನೆಲ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಿದೆ ಟೀಂ. ಮನೆಯಲ್ಲೇ ಕೂತು ಮಿಸ್ ಮಾಡದೇ ಎಲ್ಲರಿಗೂ ಟ್ರೈಲರ್ ರೀಚ್ ಮಾಡಿಸೋ ನಯಾ ಟೆಕ್ನಿಕ್​​ ಇದಾಗಿದೆ. ಈ ಪ್ರಯತ್ನದಿಂದ ಸಿನಿ ಇತಿಹಾಸದಲ್ಲೇ ಲಾಲ್ ಸಿಂಗ್ ಚಡ್ಡಾ ಹೊಸ ಅನುಭವ ಕೊಡಲಿದೆ.

ಹಾಲಿವುಡ್​​ನ ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್ ಚಿತ್ರದ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ. ಹತ್ತು ಹಲವು ಐತಿಹಾಸಿಕ ಗೆಟಪ್​​​ನಲ್ಲಿ ಆಮೀರ್ ಅದ್ಭುತವಾಗಿ ನಟಿಸಿದ್ದಾರಂತೆ. ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾ ಡೈರೆಕ್ಟ್ ಮಾಡಿದ್ದ ಅದ್ವೈತ್ ಚಂದನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರೋ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದಂಗಲ್, ಪಿಕೆ ರೆಕಾರ್ಡ್ಸ್​ನ ಬ್ರೇಕ್ ಮಾಡುತ್ತಾ ಅನ್ನೋದು ನಿರೀಕ್ಷಿಸಬೇಕಿದೆ.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES