ಶಿವಮೊಗ್ಗ: ಕಾಂಗ್ರೆಸ್ನವರು ಸುಮ್ಮನೆ ಗೊಂದಲ ಸೃಷ್ಟಿ ಮಾಡುವವರು ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೊನ್ಬೆ ನಾಲ್ಕು ಪಟ್ಟು ಹೆಚ್ಚು ಮಳೆ ಬಂದಿದೆ. ಹೀಗಾಗಿ ನಗರದಲ್ಲಿ ಅನೇಕ ಸಮಸ್ಯೆಯಾಗಿದೆ. ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇರುವ ಎಲ್ಲಾ ಪೈಪ್ ಗಳಲ್ಲಿರುವ ಡೆಬ್ರಿಸ್ ತೆಗೆಯಲು ಈಗಾಗಲೇ ಸೂಚನೆ ನೀಡಲಾಗಿದೆ. ಜೂ. 1 ರಂದು ಈ ಸಂಬಂಧ ಸಭೆ ನಡೆಸಲಾಗುವುದು. ಅಷ್ಟರೊಳಗೆ ಶಿವಮೊಗ್ಗದ ಎಲ್ಲಾ ವಾರ್ಡ್ ಗಳಲ್ಲಿರುವ ಕಸ ತೆಗೆಯಲು ಸೂಚಿಸಲಾಗಿದೆ. ಆಯುಕ್ತರು ಸೇರಿದಂತೆ, ಅಧಿಕಾರಿಗಳು ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಬೇಕು ಎಂದರು.
ಇನ್ನು, ಭಗತ್ ಸಿಂಗ್, ನಾರಾಯಣ ಗುರು ಹೆಸರುಗಳನ್ನು ಪಠ್ಯಕ್ರಮದಲ್ಲಿ ತೆಗೆಯುವುದಿಲ್ಲ. ಆದರೆ, ಹೆಡಗೆವಾರ್ ಅವರ ಬಗ್ಗೆ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ಹೆಡಗೆವಾರ್ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿದರೆ, ಕಾಂಗ್ರೆಸ್ನವರಿಗೆ ಏಕೆ ಹೊಟ್ಟೆ ಉರಿ ನಾವೇನು ವ್ಯಕ್ತಿ ಪೂಜೆ ಮಾಡುತ್ತಿದ್ದೇವಾ ವ್ಯಕ್ತಿತ್ವದ ಬಗ್ಗೆ ನಾವು ಪಠ್ಯಕ್ರಮದಲ್ಲಿ ಸೇರಿಸುತ್ತಿದ್ದೇವೆ ಎಂದು ಹೇಳಿದರು.
ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯರೇ ರಾಷ್ಟ್ರದ್ರೋಹಿಗಳು ಈ ಸರ್ಕಾರ ಧರ್ಮ ರಕ್ಷಣೆ, ರಾಷ್ಟ್ರ ರಕ್ಷಣೆ ಮಾಡುತ್ತಿದೆ. ಹೀಗಾಗಿ ಬೊಮ್ಮಾಯಿ ಬದಲಾವಣೆ ಇಲ್ಲ. ಹಿಜಾಬ್, ಹಲಾಲ್ ಮತ್ತು ಆಜಾನ್ ಎಲ್ಲವೂ ಬಿಜೆಪಿ ಸೃಷ್ಟಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, 6 ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಸೃಷ್ಟಿ ಮಾಡಿ ಎಂದು ನಾವು ಹೇಳಿದ್ದೆವಾ….!? ಮೆಕ್ಕಾ ಕಡೆಗೆ ಮುಖ ಮಾಡಿ ಹಲಾಲ್ ಮಾಡಿ ಎಂದು ನಾವು ಹೇಳಿದ್ದೆವಾ….!?ಅವರು ಬೇಕಾದರೆ ಮಾಡಲಿ, ನಾವ್ಯಾಕೆ ಮೆಕ್ಕಾ ಕಡೆ ಮುಖ ಮಾಡಬೇಕು…..!? ನಮಗೇನು ಗ್ರಾಹಚಾರನಾ……? ಎಂದು ಕಿಡಿಕಾಡಿದ್ದಾರೆ.
ಅದಲ್ಲದೇ, ಪ್ರಿಯಾಂಕ ಗಾಂಧಿ ಹೇಳಿದ್ದರು, ಬಿಕಿನಿ ಬೇಕಾದರೂ ಹಾಕಿಕೊಳ್ಳಲಿ ಎಂದು ಶಾಲೆಗೆ – ಕಾಲೇಜಿಗೆ ಹಾಗೆ ಹೋಗ್ತಾರಾ…..? ನಾವೇನು ಮಾತನಾಡುತ್ತೆವೆ ಎಂಬ ಪರಿಜ್ಞಾನ ಇರಬೇಕು ಎಂದರು. ನಂತರ ದತ್ತಪೀಠದಲ್ಲಿ ನಮಾಜ್, ಮಾಂಸಹಾರ ಸೇವನೆ ವಿಚಾರವಾಗಿ ಮಾತನಾಡಿದ ಅವರು, ಇವರಿಗೆ ಕಾಂಗ್ರೆಸ್ ನವರೇ ಕುಮ್ಮಕ್ಕು ಕೊಡುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ನಾವು ಬೆಲೆ ಕೊಡುತ್ತೆವೆ. ಗೋರಿ ನಿರ್ಮಾಣ ಮಾಡಿ, ಬಾಬಬುಡನಗಿರಿ ಎಂದು ಹೆಸರು ಹೇಳಿದರೆ ಆಗುತ್ತಾ…? ಅದು ದತ್ತಪೀಠ ಹೆಸರಿನಿಂದಲೇ ಇದೆ. ನ್ಯಾಯಾಲಯದ ಆದೇಶದಂತೆ, ಅದು ದತ್ತಪೀಠವೇ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಕಿಡಿಕಾಡಿದ್ದಾರೆ.