ಬೆಂಗಳೂರು: ಕೆಲ ದಿನಗಳಿಂದ ರಾಜ್ಯದಲ್ಲಿ ಭಯಾನಕವಾದ ಮಳೆಯಾದ ಹಿನ್ನಲೆಯಲ್ಲಿ ಬೆಸ್ಕಾಂ ವಿರುದ್ಧ ಹೋಟೆಲ್ ಮಾಲೀಕರು ಗರಂ ಆಗಿದ್ದಾರೆ.
ಕೆಲ ದಿನಗಳಿಂದ ರಾಜ್ಯದಲ್ಲಿ ಭಯಾನಕವಾದ ಮಳೆಯಾದ ಹಿನ್ನಲೆಯಲ್ಲಿ ಇದರಿಂದ ಹೋಟೆಲ್ , ಬೇಕರಿ , ಐಸ್ ಕ್ರೀಮ್ ಪಾರ್ಲರ್, ಅವರಿಗೆ ಅಡಚಣೆ ಉಂಟಾಗಿದ್ದು, ಪವರ್ ಇಲ್ಲದೆ ಫ್ರಿಡ್ಜ್ ನಲ್ಲೇ ಹಾಳಾಗುತ್ತಿರುವ ಹಾಲು , ಐಸ್ ಕ್ರೀಮ್ , ಮೊಸರು , ದೋಸೆ ಹಿಟ್ಟು ಹಾಳಾಗುತ್ತಿರುವುದರಿಂದ ಹೋಟೆಲ್ ಮಾಲೀಕರು ಕಿಡಿಕಾಡಿದ್ದಾರೆ.
ಅದಲ್ಲದೇ, ಪದೇ ಪದೇ ಪವರ್ ಕಟ್ ನಿಂದ ವ್ಯಾಪಾರಕ್ಕೆ ಅಡಚಣೆ ಉಂಟಾಗಿದ್ದು, 2 ರಿಂದ 3 ದಿನ ನಿರಂತರ ಪವರ್ ಕಟ್ ನಿಂದ ಲಾಸ್ ಆಗಿದೆ. ಬೆಸ್ಕಾಂ ವಾಣಿಜ್ಯ ವ್ಯಾಪಾರಕ್ಕೆ ಮತ್ತಷ್ಟು ಹೊರೆಯಾಗಿದ್ದು, ಎರಡು ಬಾರಿ ವಿದ್ಯುತ್ ದರವನ್ನು ಹೆಚ್ಚಿಳ ಆದ್ರು ಕೂಡ ಸೇವೆಯಲ್ಲಿ ಕೊರತೆ ಉಂಟಾಗಿದೆ.
ಇನ್ನು ಸಾಕಷ್ಟು ಕಡೆ ಟ್ರಾನ್ಸ್ಫರ್ಮರ್ ಸರಿಯಾದ ಸ್ಥಿತಿಯಲ್ಲಿಲ್ಲ. ಇದರಿಂದಾಗಿ ಜನರಿಗೆ ಓಡಾಡಲು ಭಯ ಆಗ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ನಮ್ಮ ರಾಜ್ಯಕ್ಕೆ ಹೊಸ ಹೂಡಿಕೆದಾರರು ಮತ್ತು ಉದ್ಯಮಿಗಳು ಬರಲು ಹಿಂಜರಿಯುವ ಸಾಧ್ಯತೆ ಇದೆ. ಆದರಿಂದ ಬೆಸ್ಕಾಂನಿಂದ ಅಗ್ತೀರೋ ಅವಂತಾರಗಳಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿರಾವ್ ಇಂಧನ ಸಚಿವ ಸುನಿಲ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.