Thursday, January 23, 2025

ದೀಪಕ್ ಚಹಾರ್ ವರಿಸಲಿರುವ ಜಯ ಭಾರದ್ವಾಜ್

ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಜೂನ್ 1 ರಂದು ತಮ್ಮ ಗೆಳತಿ ಜಯ ಭಾರದ್ವಾಜ್ ಅವರನ್ನು ವಿವಾಹವಾಗಲಿದ್ದಾರೆ.

ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ, ದೀಪಕ್ ಚಹಾರ್ ಯುಎಇ ಸ್ಟ್ಯಾಂಡ್‌ಗೆ ಹೋಗಿ ಜಯ ಭಾರದ್ವಾಜ್‌ಗೆ ಪ್ರಪೋಸ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಇದೀಗ ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂದು ಆಧಿಕೃತವಾಗಿ ಬಹಿರಂಗವಾಗಿದೆ.

ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಅವರ ಮದುವೆ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಯಾ ಭಾರದ್ವಾಜ್ ದೆಹಲಿಯ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಯಾ MTV ಸ್ಪ್ಲಿಟ್ಸ್ ವಿಲ್ಲಾ ಸೀಸನ್ 2 ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಕಿರಿಯ ಸಹೋದರಿಯಾಗಿದ್ದಾರೆ.

RELATED ARTICLES

Related Articles

TRENDING ARTICLES