Sunday, December 22, 2024

ಬೈಕ್​ಗೆ ಡಿಕ್ಕಿ ಹೊಡೆದ ಕಾರು: ಫ್ಲೈ ಓವರ್ ಮೇಲಿಂದ ಬಿದ್ದು ವ್ಯಕ್ತಿ ಸಾವು

ಬೆಂಗಳೂರು: ಯಲಹಂಕ ಸಮೀಪದ ಜಕ್ಕೂರು ಏರೋಡ್ರೋಮ್ ಫ್ಲೈ ಓವರ್ ಮೇಲೆ ಅವಾಂತರವಾಗಿದೆ. ಮೇಲ್ಸೇತುವೆ ಮೇಲೆ ಬೈಕ್ ನಿಲ್ಲಿಸಿ ಸಂಬಂಧಿಕರ ಬಾಲಕನಿಗೆ ಏರೋಡ್ರೋಮ್ ತೋರಿಸುತ್ತಿದ್ದಾಗ ಕಾರು ಗುದ್ದಿದ ವ್ಯಕ್ತಿ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ಜಕ್ಕೂರಿನ 44 ವರ್ಷದ ಗೋವಿಂದಪ್ಪ ಮೃತ ದುರ್ದೈವಿ. ಈತನ ಜತೆಗಿದ್ದ 8 ವರ್ಷದ ಬಾಲಕ ಸಂಜಯ್‌ಗೆ ಗಂಭೀರ ಗಾಯಗಳಾಗಿದ್ದು,ಸಮೀಪದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆ ತರಬೇತಿ ಕೇಂದ್ರದ ಪಿಲ್ಲರ್ ನಂಬರ್ 47ರ ಬಳಿ ಈ ದುರಂತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ವರುಣ್ ಎಂಬಾತನನ್ನು ಯಲಹಂಕ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ಐವರು ಸ್ನೇಹಿತರ ಜತೆ ವರುಣ್ ಬರುತ್ತಿದ್ದ. ಜೆ.ಸಿ.ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ವರುಣ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಒಟ್ಟಾರೆ ಇದೇ ಸ್ಥಳದಲ್ಲಿ ಈ ಹಿಂದೆಯೂ ಸಹ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ಈಗಾಗಲೇ ಜಕ್ಕೂರು ಏರೋಡ್ರೋಮ್ ಸಮೀಪದ ಪ್ಲೈ ಓವರ್ ಮೇಲೆ ಮುನ್ನೆಚ್ಚರಿಕೆ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆದ್ರೂ ವಾಹನ ಸವಾರರು ಆ ಸ್ಥಳದಲ್ಲಿ ಏರೋಡ್ರೋಮ್ ವೀಕ್ಷಣೆಗೆ ಮುಂದಾಗುತ್ತಿದ್ದಾರೆ. ಇನ್ನಾದರೂ ವಾಹನ ಸವಾರರು ಏರೋಡ್ರೋಮ್ ಸಮೀಪದ ಪ್ಲೈ ಓವರ್ ಮೇಲೆ ಮುಂಜಾಗ್ರತೆ ವಹಿಸಲಿ ಎಂಬುದು ನಮ್ಮ ಆಶಯ.

RELATED ARTICLES

Related Articles

TRENDING ARTICLES