Wednesday, January 8, 2025

ಭೀಮನ ದುನಿಯಾದಲ್ಲಿ ಬ್ಲ್ಯಾಕ್ ಡ್ರ್ಯಾಗನ್​ನ ಕೆಣಕಿದ್ಯಾರು..?

ಸ್ಯಾಂಡಲ್​ವುಡ್​​ ಸಲಗನಾಗಿ ಅಬ್ಬರಿಸಿ ಬೊಬ್ಬಿರಿದ ಕರಿಚಿರತೆ ದುನಿಯಾ ವಿಜಯ್​​, ಭೀಮ ಚಿತ್ರದಲ್ಲಿ ಸಖತ್​​ ಬ್ಯುಸಿ ಆಗಿದ್ದಾರೆ. ಮೊದಲ ಪ್ರಯತ್ನದಲ್ಲೇ  ಸಲಗ ಸಕ್ಸಸ್​​ ಮೂಲಕ ದಿ ಬೆಸ್ಟ್​ ಡೈರೆಕ್ಟರ್​ ಪಟ್ಟ ಗಿಟ್ಟಿಸಿಕೊಂಡ ವಿಜಯ್,​​ ಭೀಮ ಶೂಟಿಂಗ್​ ಗರಡಿಯಲ್ಲಿದ್ದಾರೆ. ಸೈಲೆಂಟ್ ಆಗಿ ಫಸ್ಟ್ ಶೆಡ್ಯೂಲ್ ಮುಗಿಸಿರೋ ಟೀಂ. ಮೇಕಿಂಗ್ ರಿವೀಲ್ ಮಾಡಿದೆ.

  • ಅಜ್ಜಿಯಿಂದ ಪ್ಯಾಕಪ್ ಆಯ್ತು  ಭೀಮನ ಫಸ್ಟ್ ಶೆಡ್ಯೂಲ್..!
  • ಸಲಗ ಟೆಕ್ನಿಷಿಯನ್ಸ್ ಜೊತೆ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ವಿಜಿ
  • ಬಾಲಯ್ಯ ಸಿನಿಮಾಗೂ ಮುನ್ನ ಕಂಪ್ಲೀಟ್ ಆಗುತ್ತಾ ಭೀಮ..?

ಮಹಾಭಾರತದ ಸಮರವೀರ, ಕದನಕಲಿ, ಭೀಮನ ಮಹಾಪರಾಕ್ರಮದ ಬಗ್ಗೆ ನಿಮಗೆಲ್ಲಾ ಗೊತ್ತೆ ಇದೆ. ದುಶ್ಯಾಸನನ ಎದೆ ಸೀಳಿದ ಮಹಾ ಕೋಪಿಷ್ಟ. ಯೆಸ್​​.. ಸಲಗ ಸಿನಿಮಾ ನಂತ್ರ ದುನಿಯಾ ವಿಜಯ್ ಭೀಮ ಚಿತ್ರಕ್ಕೆ ಕಥೆ ಬರೆದು, ಆ್ಯಕ್ಷನ್​​ ಕಟ್​​ ಹೇಳ್ತಿದ್ದಾರೆ. ಭೀಮನನ್ನು ಕೆಣಕದಿದ್ರೆ ಕ್ಷೇಮ ಅನ್ನೋ ಕ್ಯಾಪ್ಷನ್​​ ಕೂಡ ಚಿತ್ರಕ್ಕಿದೆ. ಅಂದ್ಮೇಲೆ  ಚಿತ್ರದಲ್ಲಿ ಡೆಡ್ಲಿ ಆ್ಯಕ್ಷನ್​ ಸೀನ್ಸ್​​​ ಅಬ್ಬರ ಯಾವ ಲೆವೆಲ್​ಗೆ ಇರಲಿದೆ ಜಸ್ಟ್​​ ಇಮ್ಯಾಜಿನ್​ ಮಾಡ್ಕೊಳಿ.

ಭೀಮ ಚಿತ್ರದ ಟೈಟಲ್​​, ಪೋಸ್ಟರ್​ ಈಗಾಗ್ಲೇ ಎಲ್ರಿಗೂ ಕೂತೂಹಲ ಕೆರಳಿಸಿವೆ. ಚಿತ್ರದಲ್ಲಿ ವಿಜಯ್​ ರೋಲ್​ ಏನು ಅನ್ನೋ ಕ್ಯೂರಿಯಾಸಿಟಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ರಾ ಅಂಡ್​​ ರಗಡ್​​ ಪಾತ್ರಗಳಲ್ಲಿ ನಟಿಸುತ್ತಾ ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡಿರೋ ವಿಜಯ್​​ ದುನಿಯಾದಲ್ಲಿ ಮತ್ತೊಂದು ಭೂಗತ ಪಾತಕಿಗಳ ರೌಡಿಸಂ ಚಿತ್ರ ಸೇರ್ಪಡೆಯಾಗಿದೆ. ಭೀಮ ಚಿತ್ರದ ಫಸ್ಟ್​ ಶೆಡ್ಯೂಲ್ ಶೂಟಿಂಗ್​ ಕಂಪ್ಲೀಟ್​​ ಆಗಿದ್ದು, ಮಾಸ್​​ ಮಸಾಲ ದೃಶ್ಯಗಳ ಮೇಕಿಂಗ್ ಝಲಕ್​ ವೈರಲ್ ಆಗಿದೆ.​

ಸದಾ ಹೊಸ ಪ್ರತಿಭೆಗಳಿಗೆ ಅವಕಾಶ ನೀಡೋ ದುನಿಯಾ ವಿಜಯ್, ಈ ಸಿನಿಮಾದಲ್ಲಿ ಬ್ಲ್ಯಾಕ್ ಡ್ರ್ಯಾಗನ್ ಪಾತ್ರಕ್ಕೆ ಮಂಜುನಾಥ್ ಅನ್ನೋ ನ್ಯಾಷನಲ್ ಲೆವೆಲ್ ಬಾಡಿ ಬಿಲ್ಡರ್​ನ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಮುಹೂರ್ತದಲ್ಲಿ ಅವ್ರ ದೈತ್ಯಾಕಾರ ನೋಡಿ, ಭೀಮ ವಿಜಯ್ ಅವ್ರಾ ಅಥ್ವಾ ಬ್ಲ್ಯಾಕ್ ಡ್ರ್ಯಾಗನ್ನಾ ಅಂತ ಕನ್ಫ್ಯೂಸ್ ಆಗಿದ್ರು. ಇದೀಗ ಆ ವಿಲನ್​ನ ಕೆಣಕೋ ದೃಶ್ಯಗಳು ಮೇಕಿಂಗ್​​ನಲ್ಲಿ ಕಾಣಸಿಕ್ಕಿವೆ. ಸಲಗ ಸಿನಿಮಾಟೋಗ್ರಫರ್ ಶಿವಸೇನ ಕ್ಯಾಮೆರಾದಲ್ಲಿ ಒಂದೊಂದು ದೃಶ್ಯ ಕೂಡ ಸಖತ್ ಥ್ರಿಲ್ಲಿಂಗ್ ಅನಿಸಿವೆ.

ಸ್ಯಾಂಡಲ್​ವುಡ್​​​ನ ಬ್ಯುಸಿಯೆಸ್ಟ್​ ನಟರಲ್ಲಿ ದುನಿಯಾ ವಿಜಯ್ ಕೂಡ ಒಬ್ರು. ಸಲಗ ಚಿತ್ರದ ನಂತ್ರ ಬ್ಲ್ಯಾಖ್ ಕೋಬ್ರಾ ಡಿಮ್ಯಾಂಡ್​​ ಕೂಡ ಜಾಸ್ತಿ ಆಗಿದೆ. ಈ ನಡುವೆ ಟಾಲಿವುಡ್​​ಗೂ ಎಂಟ್ರಿ ಕೊಟ್ಟಿರುವ ವಿಜಯ್​​, ಬಾಲಯ್ಯನ 107ನೇ ಚಿತ್ರದಲ್ಲಿ ಖಡಕ್​ ವಿಲನ್​ ರೋಲ್​ನಲ್ಲಿ ಮಿಂಚ್ತಿದ್ದಾರೆ.

ಈ ವಿಡಿಯೋದಲ್ಲಿ ಸ್ಯಾಂಡಲ್​ವುಡ್​​ನ ವರ್ಸಟೈಲ್​ ಆ್ಯಕ್ಟರ್​ ಅಚ್ಯುತ್​​ಕುಮಾರ್​ ರಾಯಲ್​ ಎನ್​ಫೀಲ್ಡ್​​ ಮೇಲೆ ಸವಾರಿ ಮಾಡ್ತಿದ್ದಾರೆ. ದರ್ಗಾ, ಪೋಲೀಸ್​ ಸ್ಟೇಷನ್​​ ಸೇರಿದಂತೆ ಸಣ್ಣ ಸಣ್ಣ ಬೀದಿಗಳಲ್ಲಿ ಫೈಟ್ ದೃಶ್ಯಗಳನ್ನ ಚಿತ್ರಿಸಲಾಗಿದೆ. ಜೊತೆಗೆ ದೇವಸ್ಥಾನ ಒಂದರಲ್ಲಿ ದುನಿಯಾ ವಿಜಯ್,​​ ನವಜೋಡಿಗೆ ಮದ್ವೆ ಮಾಡಿಸ್ತಿರೋ ದೃಶ್ಯವಿದೆ. ಈ ಝಲಕ್​​ಗಳನ್ನು ನೋಡಿದ್ರೆ, ಭೀಮನಿಗೆ ಸಹಾಯ ಮಾಡೋ ದೊಡ್ಡ ಮನಸ್ಸಿದೆ ಅನ್ಸುತ್ತೆ. ಜೊತೆಗೆ ಶೂಟ್​ ಆಗಿರೋ ರಾ ಫೂಟೇಜ್​ ನೋಡಿ ಟೆಕ್ನಿಕಲ್​ ಟೀಮ್​ ಜೊತೆ ಸೇರಿ ವಿಜಯ್​​ ಮಸ್ತ್​ ಮಜಾ ಮಾಡಿದ್ದಾರೆ

ಭೀಮನ ದುನಿಯಾದಲ್ಲಿ ಅಚ್ಯುತ್​​ ಕುಮಾರ್​​ ಸೇರಿ ವಿಜಯ್​ಗೆ ತಾಯಿಯಾಗಿ ಹಿರಿಯ ನಟಿ ಕಲ್ಯಾಣಿ ನಟಿಸ್ತಿದ್ದಾರೆ. ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್​​ ಬಂಡವಾಳ ಹೂಡಿದ್ದು, ಯಥಾವತ್​​​​ ವಿಜಿ ಬಳಗದ ಮಾಸ್ತಿಯ ಮಾಸ್​​ ಸಂಭಾಷಣೆ ಇರಲಿದೆ. ಚರಣ್​ ರಾಜ್​​ ಮ್ಯೂಸಿಕ್​ ಕಂಪೋಸ್​​ ಮಾಡಲಿದ್ದಾರೆ. ಪಕ್ಕಾ ರೌಡಿಸಂ ಬ್ಯಾಕ್​​ ಡ್ರಾಪ್​​ ಇರೋ ಭೀಮನ ಆರ್ಭಟ ನೋಡೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES