Monday, December 23, 2024

ಸುರಂಗ ಕುಸಿತ 10 ಮೃತದೇಹಗಳು ಪತ್ತೆ

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಗುರುವಾರ ಸುರಂಗ ಕುಸಿತವಾಗಿದ್ದು, ಸುದೀರ್ಘ ರಕ್ಷಣಾ ಕಾರ್ಯಚರಣೆ ಬಳಿಕ ಇಲ್ಲಿಯವರೆಗೆ ಅವಶೇಷಗಳಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ-ಜಮ್ಮು ಹೆದ್ದಾರಿಯ ಖೋನಿನಲ್ಲ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಸುರಂಗ ನಿರ್ಮಿಸುತ್ತಿದ್ದ ಕಂಪನಿ ರಕ್ಷಣಾ ಮಾನದಂಡಗಳನ್ನು ಅನುಸರಿಸದಿರುವುದೇ ದುರಂತಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಂಪನಿ ನಿರ್ಲಕ್ಷ್ಯಕ್ಕೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಗುರುವಾರ ತಡರಾತ್ರಿ ಸುರಂಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಬೃಹತ್ ಬಂಡೆಗಳು ಕುಸಿದಿದ್ದವು. ಅವಶೇಷಗಳಿಂದ ಪಶ್ಚಿಮ ಬಂಗಾಳದ ಐವರು, ನೇಪಾಳದ ಇಬ್ಬರು, ಅಸ್ಸಾಂನ ಒಬ್ಬ ಹಾಗೂ ಜಮ್ಮು ಮತ್ತು ಕಾಶ್ಮೀರದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES