Monday, December 23, 2024

ಲಂಡನ್‌ನಲ್ಲಿ RSS, BJP ವಿರುದ್ಧ ರಾಹುಲ್‌ ಗಾಂಧಿ ಕಿಡಿ

ದೇಶದ ಮಾನ ಕಳೆದ್ರಾ ರಾಹುಲ್‌ ಗಾಂಧಿ..? ಲಂಡನ್‌ನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ನಿಂದನೆ ಮಾಡಿದ್ರಾ..? ಭಾರತ ಮಾತೆಗೆ ನಿಂದನೆ ಮಾಡಿದ್ರಾ..? ಇದು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿರುವ ವಿಷ್ಯ. ಹೌದು, ಭಾರತದಲ್ಲಿ ಮಾತನಾಡಲು ಅವಕಾಶವಿಲ್ಲದಂತೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಎಂದಿದ್ದಾರೆ ರಾಹುಲ್‌ ಗಾಂಧಿ. ಮೋದಿ ನಮ್ಮ ಮಾತು ಕೇಳ್ತಿಲ್ಲ. ಪ್ರಧಾನಿಯೂ ಮುಕ್ತವಾಗಿ ಮಾತಾಡ್ತಿಲ್ಲ.. ಆರ್‌ಎಸ್‌ಎಸ್‌, ಬಿಜೆಪಿಯಿಂದ ದೇಶದಲ್ಲಿ ಧ್ರುವೀಕರಣವಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಲಂಡನ್‌ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ’ ಸಮ್ಮೇಳನದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚರ್ಚೆಯ ವೇಳೆ ಬಿಜೆಪಿ ಮತ್ತು ಆರ್‌ಎಎಸ್‌ಎಸ್‌ ಟೀಕೆ ಮಾಡುವ ಅವಕಾಶವನ್ನೂ ಕೊಡುತ್ತಿಲ್ಲ. ಭಾರತವು ಜನರಿಗೆ ಸೇರಿದ ರಾಷ್ಟ್ರ ಎಂದುಕೊಂಡಿದ್ದೇವೆ. ಆದ್ರೆ, ಬಿಜೆಪಿ ಹಾಗು ಆರ್‌ಎಸ್‌ಎಸ್‌ ದೇಶವನ್ನು ಕೇವಲ ಭೂಭಾಗ ಎಂದಷ್ಟೇ ಪರಿಗಣಿಸಿವೆ ಎಂದು ವಾಗ್ದಾಳಿ ಮಾಡಿದ್ರು.

ದೇಶವು ಅವರ ಪಾಲಿಗೆ ಕೆಲವೇ ಕೆಲವು ವ್ಯಕ್ತಿಗಳಿಗೆ ಹಂಚಿಕೆ ಮಾಡುವ ವಸ್ತುವಾಗಿಬಿಟ್ಟಿದೆ. ನಾವು ಎಲ್ಲರನ್ನೂ ಸಮಾನವಾಗಿ ಕಾಣುವುದರಲ್ಲಿ ನಂಬಿಕೆ ಇರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿಯೇ ಭಾರತದಲ್ಲಿ ಪ್ರಜಾಪ್ರಭುತ್ವ ಚೆನ್ನಾಗಿದೆ. ನಾವು ಅದನ್ನು ಉಳಿಸಿಕೊಂಡುಬಂದಿದ್ದೇವೆ. ಒಂದು ವೇಳೆ ಅದು ಅಸ್ತಿತ್ವ ಕಳೆದುಕೊಳ್ಳಲು ಆರಂಭವಾದರೆ ಇಡೀ ಜಗತ್ತಿಗೇ ತೊಂದರೆಯಾಗಲಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನವು ದಾಳಿ ಎದುರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, ವಿದೇಶಾಂಗ ಸೇವೆಯನ್ನು ಟೀಕಿಸಿದ್ದಾರೆ.

ಭಾರತೀಯ ವಿದೇಶಾಂಗ ಸೇವೆಯನ್ನು ಅಹಂಕಾರಿ ಎಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಕ್ಕಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹೇಳಿದಂತೆ ಭಾರತದ ವಿದೇಶಾಂಗ ನೀತಿಗಳ ಬದಲಾಗಿವೆ. ಆದರೆ, ಭಾರತೀಯ ವಿದೇಶಾಂಗ ಸೇವೆಯನ್ನು ಅಹಂಕಾರಿ ಎಂದು ಹೇಳಲು ಸಾಧ್ಯವಿಲ್ಲ , ಅದು ವಿಶ್ವಾ ಸ ಮತ್ತು ರಾಷ್ಟ್ರೀ ಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಾಯ್ತು ಈಗ ಲಂಡನ್‌ನಲ್ಲೂ ಮೋದಿ ಹಾಗು ಆರ್‌ಎಸ್‌ಎಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಈ ವಿಚಾರ ದೇಶ ದೇಶಗಳ ನಡುವೆ ತಂದಿಡುವ ಕೆಲಸವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.

RELATED ARTICLES

Related Articles

TRENDING ARTICLES