Monday, December 23, 2024

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ : ಪೆಟ್ರೋಲ್​ ಡಿಸೇಲ್​ ದರ ಇಳಿಕೆ

ನವದೆಹಲಿ : ಪಂಚರಾಜ್ಯ ಚುನಾವಣೆ ಬಳಿಕ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದರಿಂದ ವಾಹನ ಸವಾರರು ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದರು. ಅದರೆ ಇದೀಗ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಿಗ್​ ರಿಲೀಫ್​ ನೀಡಿದ್ದು, ಪೆಟ್ರೋಲ್​-ಡಿಸೇಲ್​ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ.

ಪೆಟ್ರೋಲ್​ ಮೇಲೆ ಪ್ರತಿ ಲೀಟರ್​ಗೆ 8 ರೂಪಾಯಿ ಹಾಗು ಡಿಸೇಲ್​ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಹತ್ವದ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಶನಿವಾರ ರಾತ್ರಿಯಿಂದ ಪರಿಷ್ಕೃತ ಪೆಟ್ರೋಲ್​, ಡೀಸೆಲ್​ ಹಾಗೂ ಎಲ್ಪಿಜಿ ದರಗಳು ಜಾರಿಗೆ ಬರಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ. ದೀರ್ಘ ಕಾಲದಿಂದ ಜನಸಾಮಾನ್ಯರು ಇಂಧನ ಪೆಟ್ರೋಲ್​-ಡಿಸೇಲ್ ಹಾಗೂ ಗ್ಯಾಸ್​ ಬೆಲೆ ಏರಿಕೆಯ ಹಿನ್ನಲೆ ಸರ್ಕಾರವನ್ನು ದೂರುತ್ತಿದ್ದರು. ಆದರೆ ಇದೀಗ ಸರ್ಕಾರ ಈ ವಿಷಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

RELATED ARTICLES

Related Articles

TRENDING ARTICLES