Wednesday, January 22, 2025

ಶಾಸಕ ಈಶ್ವರಪ್ಪ ಜೊತೆಗೂಡಿ ಗೃಹಸಚಿವರ ಶಿವಮೊಗ್ಗ ಸಿಟಿ ರೌಂಡ್ಸ್

ಶಿವಮೊಗ್ಗ : ಶಾಸಕ ಈಶ್ವರಪ್ಪ ಜೊತೆಗೂಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗ ಸಿಟಿ ರೌಂಡ್ಸ್ ಹಾಕಿದ್ದಾರೆ.

ಕಳೆದೆರೆಡು ದಿನಗಳಿಂದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಬಾಪೂಜಿ ನಗರ, RML ನಗರ, ಶರಾವತಿ ನಗರ ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದರು. ರಾಜಕಾಲುವೆ ಮೂಲಕ ನೀರು ಸರಾಗವಾಗಿ ಸಾಗಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕ್ರಮಕ್ಕೆ ಆರಗ ಜ್ಞಾನೇಂದ್ರ ಸೂಚಿಸಿದ್ದು, ನೀರಾವರಿ ಇಲಾಖೆ ಅನುದಾನ ಬಳಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನ ಶಾಸಕ ಈಶ್ವರಪ್ಪ ಅವರು ನೀಡಿದರು.

RELATED ARTICLES

Related Articles

TRENDING ARTICLES