Friday, November 22, 2024

ನಾನು ಯಾರಿಗೂ ಬಯೋಡೇಟಾ ಕೊಟ್ಟಿಲ್ಲ : ಸಚಿವ ಆರ್ ಅಶೋಕ್

ಬೆಂಗಳೂರು : ನಾನು ಎಂದೂ ಕೂಡ ಯಾರಿಗೂ ಬಯೋಡೇಟಾ ಕೊಡಲಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹೊಸ್ತಿಲಲ್ಲಿದ್ದೇವೆ. ಎಂಎಲ್‌ಎ, ಎಂಪಿ ಚುನಾವಣೆ ಎದುರಾಗಲಿದೆ. ಅಲ್ಲದೇ ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಕೂಡ ಬರಲಿದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಮೋದಿ ಸರ್ಕಾರ ಎದುರಿಸುತ್ತಿದೆ ಎಂದರು.

ಇನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಬದಲಾವಣೆ ಬಂದಿದ್ದು. ರಸ್ತೆಗಳು ಅಂದ್ರೆ ಹೆದರುವ ದಿನಗಳು ಇದ್ದವು. ಆಗ ಸುವರ್ಣ ಚತುಷ್ಪತ ರಸ್ತೆಗಳನ್ನು ಅವರು ಮಾಡಿದ್ದರು. ಆದರೆ, ನಾವು ಎಲ್ಲೂ ಹೇಳಲಿಲ್ಲ ಅದನ್ನು ವಾಜಪೇಯಿ ಅವರು ಮಾಡಿದ್ದು ಎಂದು. ಹೀಗಾಗಿ ಜನರ ಮನಸ್ಸಿಗೆ ನಾವು ಮಾಡಿದ ಕೆಲಸ ಅಂತ ತಿಳಿಯಲೇ ಇಲ್ಲ. ನಂತರ ಬಂದ ಚುನಾವಣೆಯಲ್ಲಿ ನಾವು ಸೋತೆವು ಎಂದು ತಿಳಿಸಿದರು.

ಆದ್ದರಿಂದ ಈಗ ನಾವು ರಾಮ ಮಂದಿರ ಕಟ್ಟುತ್ತಿದ್ದೇವೆ. ಕಾಶಿ ನಮ್ಮದಲ್ಲ ಎನ್ನುತ್ತಿದ್ದೇವು, ಆದರೆ, ಇದೀಗ ಕಾಶಿ ಮತ್ತು ಮತ್ತೆರಡು ಸ್ಥಳಗಳು ನಮ್ಮದೇ ಆಗೋ ರೀತಿ ಇದೆ. ಕಾಶ್ಮೀರ ನಮ್ಮದು ಅಲ್ಲ ಅಂತ ಹೇಳ್ತಿದ್ದೆವು. ಆದ್ರೆ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಯಾರೂ ತುಟಿಕ್ ಪಿಟಿಕ್ ಅಂತಿಲ್ಲ. ನಮ್ಮ ‌60-70ಕನಸು ನನಸಾಗಿದೆ ಎಂದು ತಿಳಿಸಿದರು.

ಇನ್ನು ಬಿಬಿಎಂಪಿ ಚುನಾವಣೆ ಎದುರಾಗುತ್ತಿದೆ. ಇದುವರೆಗೂ ಯಾರೂ ಅರ್ಜಿಯನ್ನ ಸಲ್ಲಿಸುತ್ತಿಲ್ಲ. ಒಂದು ಕಾಲದಲ್ಲಿ ಮೂವತ್ತು ಪುಟಗಳ ನೂರಾರು ಅರ್ಜಿಗಳು ಬರುತ್ತಿದ್ದವು. ಅದರಲ್ಲಿ ಕೆಲವರು ಕೊಡುವ ಬಯೋಡೇಟಾದಲ್ಲಿ ಅಕ್ಕಿ ಕೊಟ್ಟೆ, ಸೀರೆ ಕೊಟ್ಟೆ, ನಾನು ಅದನ್ನ ಮಾಡಿದ್ದೇನೆ ಹಾಗೂ ಜನರಿಗೆ ಸಹಾಯ ಮಾಡ್ದೆ ಎಂದೆಲ್ಲಾ ಬರೆದಿರುತ್ತಿತ್ತು. ಆದರೆ, ಇದುವರೆಗೂ ನಾನು ಎಂದೂ ಕೂಡ ಯಾರಿಗೂ ಬಯೋಡೇಟಾ ಕೊಡಲಿಲ್ಲ. ಮತ್ತು ಯಾರೂ ಕೂಡ ನಾನು ಮುಂದೆ ಏನು ಮಾಡ್ತೀನಿ ಅನ್ನೋದನ್ನ ಯಾರು ಹೇಳಲ್ಲ ಎಂದರು.

RELATED ARTICLES

Related Articles

TRENDING ARTICLES