Monday, December 23, 2024

ನೀಲ್ ಕಥೆ.. ಡಾ. ಸೂರಿ ಡೈರೆಕ್ಷನ್.. ಬಘೀರ ರೋರಿಂಗ್

ಕೆಜಿಎಫ್ ಅನ್ನೋ  ರಕ್ತ ಚರಿತ್ರೆಯ ದಂತಕಥೆಯನ್ನ  ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್,​ ಬ್ಯಾಕ್​ ಟು ಬ್ಯಾಕ್​​ ಗುಡ್​​ ನ್ಯೂಸ್​ ಕೊಡ್ತಿದೆ. ಉಗ್ರಂ ಸ್ಟಾರ್ ಶ್ರೀಮುರಳಿ ಜೊತೆ ಹೊಚ್ಚ ಹೊಸ ಸಿನಿಮಾನ ಕಿಕ್​ಸ್ಟಾರ್ಟ್​ ಮಾಡಿದೆ ಹೊಂಬಾಳೆ. ಪ್ಯಾನ್​ ಇಂಡಿಯಾ ಘರ್ಜಿಸೋಕೆ ಮತ್ತೊಮ್ಮೆ ಒಂದಾಗಿದೆ ಉಗ್ರಂ ಜೋಡಿ. ಅರೇ ನೀಲ್ ಏನಾದ್ರು ರೋರಿಂಗ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರಾ ಅಂತ ಹುಬ್ಬೇರಿಸೋಕೂ ಮುನ್ನ ಈ ಸ್ಟೋರಿ ನೋಡಿ.

  • ಪವರ್​ಫುಲ್​ ಪೊಲೀಸ್​ ರೋಲ್​​ನಲ್ಲಿ ಶ್ರೀಮುರಳಿ ಖದರ್​

ಕೆಜಿಎಫ್​​ ತೂಫಾನ್​ ನಂತ್ರ ಹೊಂಬಾಳೆ ಟೀಂ ಸಲಾರ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದೆ. ಬಿಗ್​ ಸ್ಟಾರ್​​, ಬಿಗ್​ ಬಜೆಟ್​​ ಚಿತ್ರಗಳ ನಿರ್ಮಾಣದಲ್ಲಿ ಸಖತ್​ ಬ್ಯುಸಿ ಇರೋ ಹೊಂಬಾಳೆ ಫಿಲಂಸ್ ಅಡ್ಡಾದಲ್ಲಿ ಹೊಸ ಚಿತ್ರದ  ಘರ್ಜನೆ ಶುರುವಾಗಿದೆ. ನೀಲ್​ ಬರೆದಿರೋ  ಹೊಸ ಚಿತ್ರಕಥೆಗೆ ರೋರಿಂಗ್​ ಸ್ಟಾರ್​ ಶ್ರೀಮುರಳಿ ನಾಯಕನಾಗಿ ನಟಿಸ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​​ ಈಗಾಗ್ಲೇ ಹೈಪ್​ ಕ್ರಿಯೇಟ್​ ಮಾಡಿದ್ದು, ಚಂದನವನದಲ್ಲಿ ಧೂಳೆಬ್ಬಿಸ್ತಿದೆ.

ಉಗ್ರಂ ಚಿತ್ರದಲ್ಲಿ ರೋರಿಂಗ್​ ಸ್ಟಾರ್​ಗೆ ಆ್ಯಕ್ಷನ್​ ಕಟ್​​ ಹೇಳಿದ್ದು ಮಾಸ್ಟರ್​ ಮೈಂಡ್​​ ಪ್ರಶಾಂತ್​ ನೀಲ್​​. ಈ ಚಿತ್ರದ ಮೂಲಕ ನಟ ಶ್ರೀಮುರಳಿ ಸಿನಿಕರಿಯರ್​ಗೆ ಬಿಗ್ ಬ್ರೇಕ್ ಸಿಕ್ಕಿತ್ತು. ದೊಡ್ಡ ಸಕ್ಸಸ್​ ಮೂಲಕ ಸ್ಯಾಂಡಲ್​​ವುಡ್​​ಗೆ ಮತ್ತೆ ಮುರಳಿ ಕಂ​ಬ್ಯಾಕ್​​ ಆಗಿದ್ರು. ಇದೀಗ ನೀಲ್​​ ಮದಗಜನಿಗೆ ಹೊಸ ಕಥೆ ಬರೆದಿದ್ದು, ಈ ಚಿತ್ರವನ್ನು ಲಕ್ಕಿ ಚಿತ್ರದ ಡೈರೆಕ್ಟರ್​ ಡಾ. ಸೂರಿ ನಿರ್ದೇಶನ ಮಾಡ್ತಿದ್ದಾರೆ. ಅದೇ ಬಘೀರ. ಟೈಟಲ್​ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸ್ತಿದ್ದ್ದು, ಖಡಕ್​ ಪೊಲೀಸ್ ಆಫೀಸರ್​ ಆಗಿ ರೋರ್ ಮಾಡಲಿದ್ದಾರೆ ಉಗ್ರಂ ಸ್ಟಾರ್.

  • ವಿಘ್ನ ವಿನಾಯಕನ ಸಮ್ಮುಖದಲ್ಲಿ ಬಘೀರನ ಮುಹೂರ್ತ
  • ಹೊಂಬಾಳೆ ಫಿಲಂಸ್​ ನ್ಯೂ ಪ್ಯಾನ್​ ಇಂಡಿಯಾ ವೆಂಚರ್

ಶ್ರೀಮುರಳಿ… ತೂಕ ಇರೋ ಚಿತ್ರಕಥೆ, ಕಂಟೆಂಟ್​ ಸಬ್ಜೆಕ್ಟ್​ಗೆ  ಹೆಚ್ಚು ಒತ್ತು ಕೊಡ್ತಾರೆ. ಸಕ್ಸಸ್​ ಟ್ರ್ಯಾಕ್​ಗೆ ಮತ್ತೆ ಮರಳಿರುವ ರೋರಿಂಗ್​ ಸ್ಟಾರ್,  ಸಿನಿಪ್ರಿಯರಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ ಒಂದೊಳ್ಳೆ ಕಥೆಗೆ ಕಾಯ್ತಾ ಇದ್ರು. ಸಿನಿಮಾಂತ್ರಿಕ ನೀಲ್​ ಬರೆದಿರೋ ಕಥೆ ಕೇಳಿ ಥ್ರಿಲ್ ಆಗಿದ್ದ ಮುರಳಿ, ಸಿನಿಮಾ ಓಕೆ ಮಾಡಿದ್ರು. ನೆಕ್ಸ್ಟ್ ಪ್ರಾಜೆಕ್ಟ್ ಯಾವುದಾಗಲಿದೆ ಅನ್ನೋ ಸಿನಿರಸಿಕರ ಕ್ಯೂರಿಯಾಸಿಟಿಗೆ ಬಘೀರ ಫಸ್ಟ್ ಲುಕ್​ನಿಂದ ಉತ್ತರ ಕೊಟ್ಟಿದ್ರು.

ಬಘೀರ ಚಿತ್ರಕ್ಕಾಗಿ ಹೊಂಬಾಳೆ ಟೀಮ್​ 2 ವರ್ಷಗಳ ಕಾಲ ನಿರಂತರ ಶ್ರಮ ಹಾಕಿದೆ. ಅದ್ಧೂರಿಯಾಗಿ ತೆರೆ ಮೇಲೆ ತರೋಕೆ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಸ್ಪೆಷಲ್​ ಗೆಟಪ್​​ನಲ್ಲಿ ರಾರಾಜಿಸಲಿದ್ದಾರೆ ಮುರಳಿ. ಈ ಸಿನಿಮಾದಲ್ಲಿ ಅವ್ರನ್ನ ಜನ ಸಿಕ್ಕಾಪಟ್ಟೆ ಇಷ್ಟ ಪಡ್ತಾರಂತೆ. ಆಲ್​ ರೆಕಾರ್ಡ್​​ ಬ್ರೇಕ್​ ಮಾಡೋಕೆ ಸದ್ಯದಲ್ಲೇ ಬಘೀರ ಎಂಟ್ರಿ ಕೊಡಲಿದ್ದಾನೆ. ಇತ್ತೀಚೆಗೆ ನಗರದ ಮಹಾಲಕ್ಷ್ಮಿ ಲೇಔಟ್​​ನ ಪಂಚಮುಖಿ ದೇವಾಲಯದಲ್ಲಿ ಬಘೀರ ಚಿತ್ರದ ಮಹೂರ್ತ ನಡೆದಿದ್ದು, ಕಿರಗಂದೂರು ಅವರ ಸಹೋದರ ಮಂಜುನಾಥ್​ ಕ್ಲಾಪ್​ ಮಾಡಿ ಪ್ಯಾನ್​ ಇಂಡಿಯಾ ಚಿತ್ರಕ್ಕೆ ಭರ್ಜರಿ ಚಾಲನೆ ನೀಡಿದ್ರು. ಡೈರೆಕ್ಟರ್ ಸೂರಿ ಅವ್ರ ತಾಯಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರು.

ಬಘೀರಗೆ ಕೆಜಿಎಫ್ ನಿರ್ಮಾಪಕ ವಿಜಯ್​​ ಕಿರಗಂದೂರು ಬಂಡವಾಳ ಹೂಡಿದ್ದು, ಅಜನೀಶ್​ ಲೋಕನಾಥ್​​ ಸಂಗೀತವಿ ಇರಲಿದೆ. ಎ, ಜೆ ಶೆಟ್ಟಿ ಕ್ಯಾಮೆರಾ ಕೈಚಳಕ, ಕೆಜಿಎಫ್​​ ಆರ್ಟ್​​ ಡೈರೆಕ್ಟರ್​​ ಶಿವಕುಮಾರ್​ ಬಘೀರನ ಟೀಂ ಸೇರಿಕೊಂಡಿದ್ದಾರೆ. ರಂಗಾಯಣ ರಘು, ಅಚ್ಯುತ್​ ಕುಮಾರ್​ ತಾರಾಗಣವಿದೆ. ನೀಲ್​ ಕಥೆ ಅಂದ್ರೆ ಅಲ್ಲಿ ಮದರ್ ಸೆಂಟಿಮೆಂಟ್​​, ಮಾಸ್​​ ಸ್ಟೋರಿ, ಪವರ್​ಫುಲ್​ ಡೈಲಾಗ್​​ಗಳ ಅಬ್ಬರ​ ಇದ್ದೇ ಇರಲಿದೆ. ಉಗ್ರಂ ಕಾಂಬಿನೇಷನ್​ ಮತ್ತೆ ಸಿಲ್ವರ್​ ಸ್ಕ್ರೀನ್​ ಮೇಲೆ ಆದಷ್ಟು ಬೇಗ ಕಮಾಲ್​ ಮಾಡಲಿ ಅನ್ನೋದು ನಮ್ಮ ಆಶಯ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES