Monday, December 23, 2024

BJP ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೀನಿ : ನಟ ಸಾಯಿಕುಮಾರ್

ಬೆಂಗಳೂರು : ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ ಸ್ಪರ್ಧೆ ಮಾಡುತ್ತೇನೆ ಎಂದು ಬಹುಭಾಷಾ ನಟ ಸಾಯಿಕುಮಾರ್​​ ಹೇಳಿದ್ದಾರೆ.

ಕರ್ನಾಟಕದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಸಾಯಿಕುಮಾರ್ ಅವರು ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಚಿತ್ರರಂಗಕ್ಕೂ ರಾಜಕೀಯಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ ಅನೇಕ ಸೆಲೆಬ್ರಿಟಿಗಳು ರಾಜಕೀಯದಲ್ಲಿ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಇದೀಗ ಸಾಯಿ ಕುಮಾರ್​​ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ. ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಕೆಲಸ ಮಾಡಿಕೊಂಡು ಕ್ಯಾಂಪೇನ್ ಮಾಡುತ್ತೇನೆ ಎಂದು ನಟ ಸಾಯಿಕುಮಾರ್ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES