Wednesday, January 22, 2025

ವಿಜಯ್ ವಿರುದ್ಧ ಪವನ್ ಫ್ಯಾನ್ಸ್ ಗರಂ

ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ‘ಖುಷಿ’ ಚಿತ್ರದ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈಗ ವಿಜಯ್ ನಟನೆಯ ಖುಷಿ ಚಿತ್ರದ ವಿಚಾರವಾಗಿ ಪವನ್ ಕಲ್ಯಾಣ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.

ವಿಜಯ್ ಅಭಿನಯದ ‘ಖುಷಿ’ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ. ಈ ಹಿಂದೆ ತೆರೆಕಂಡಿದ್ದ ‘ಖುಷಿ’ ಚಿತ್ರದಲ್ಲಿ ಪವನ್ ಮತ್ತು ಭೂಮಿಕಾ ಜೋಡಿ ಸಖತ್ ಮೋಡಿ ಮಾಡಿತ್ತು. ಪವನ್ ಕಲ್ಯಾಣ್ ಅಂದ್ರೆ ಖುಷಿ, ಖುಷಿ ಅಂದ್ರೆ ಪವನ್ ಕಲ್ಯಾಣ್ ಹೀಗಿರುವಾಗ ಈ ಚಿತ್ರದ ಟೈಟಲ್ ಅನ್ನು ವಿಜಯ್ ದೇವರಕೊಂಡ ಚಿತ್ರದಲ್ಲಿ ಮರುಬಳಕೆ ಮಾಡಿಕೊಂಡಿರುವುದರ ಬಗ್ಗೆ ಪವನ್ ಕಲ್ಯಾಣ್‌ ಫ್ಯಾನ್ಸ್‌ ಫುಲ್ ಗರಂ ಆಗಿದ್ದಾರೆ..ಇನ್ನು ಪವನ್ ಕಲ್ಯಾಣ್ ನಟನೆಯ ‘ಖುಷಿ’ ಚಿತ್ರದ ಮುಂದೆ ವಿಜಯ್ ನಟನೆಯ ಖುಷಿ ಸಿನಿಮಾ ಹೇಗೆ ಮೋಡಿ ಮಾಡಬಹುದು ಅಂತ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES