Thursday, January 23, 2025

ರಾಜ್ಯಸಭೆಗೆ ಹೊರ ರಾಜ್ಯದವರನ್ನ ಆಯ್ಕೆ ಮಾಡ್ಬೇಡಿ : ವಾಟಾಳ್ ನಾಗರಾಜ್

ಬೆಂಗಳೂರು : ಸಿಎಂ ಬೊಮ್ಮಾಯಿ ಅವರು ಒಳ್ಳೆಯವರು, ಅವರು ಸಿಎಂ ಆಗಿ ಮುಂದುವರಿಯಲಿ ಎಂದು ಬೊಮ್ಮಾಯಿ ಪರ ವಾಟಾಳ್ ನಾಗರಾಜ್ ಬ್ಯಾಟಿಂಗ್ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ನಾಲ್ವರನ್ನು ಕಳಿಸುವ ಅವಕಾಶ‌ ನಮಗಿದೆ. ಈವರೆಗೆ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ನಡೆದುಕೊ‌ಂಡಿಲ್ಲ. ಬೇರೆ ರಾಜ್ಯದವರನ್ನ ಆಯ್ಕೆ ಮಾಡೋದೇ ಒಂದು ನೀತಿಯಾಗಿದೆ. ಈಗ ಮತ್ತೆ‌ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಆಯ್ಕೆಗೆ ಬಯಸುತ್ತಿದ್ದಾರೆ ಎಂದರು.

ಇನ್ನು ಯಾವುದೇ ಕಾರಣಕ್ಕೂ ಹೊರ ರಾಜ್ಯದವರನ್ನ ಆಯ್ಕೆ ಮಾಡಬಾರದು. ನಮ್ಮ ರಾಜ್ಯದಲ್ಲೇ ಮೇಧಾವಿ, ಹೋರಾಟಗಾರರು ಇದ್ದಾರೆ. ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವಪ್ಪ ಅವರನ್ನ ಕಳಿಸಲಿ, ಅಥವಾ ಹಂಪ ನಾಗರಾಜ್ ಅವರನ್ನ ಕಳುಹಿಸಲಿ ಇವರೆಲ್ಲಾ‌ ನಾಡಿನ ಅಗ್ರಗಣ್ಯರು ಇಂಥಹವರನ್ನ‌ಆಯ್ಕೆ‌ಮಾಡಿ ನಾವು ರಾಜ್ಯಸಭೆಗೆ ಕಳುಹಿಸಬೇಕು ಎಂದ ರಾಜಕೀಯ ಪಕ್ಷಗಳಿಗೆ‌ ಮನವಿ ಮಾಡಿಕೊಂಡರು.

ಅಲ್ಲದೇ ನಮ್ಮ ರಾಜ್ಯದಲ್ಲಿರುವ ಎಲ್ಲಾ ಉನ್ನತ ಅಧಿಕಾರಿಗಳು ‌ಹೊರ ರಾಜ್ಯದವರಾಗಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES