Thursday, January 23, 2025

ಕೋಟಿ ಕೋಟಿ ನುಂಗಿ ಆಯಕಟ್ಟಿನಲ್ಲೇ ಇರೋ ತಿಮಿಂಗಿಲಗಳು..!

ಬೆಂಗಳೂರು: ಸಿಲಿಕಾನ್​ ಸಿಟಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಕ್ಮಲ್ ಟೋಪಿ ಹಾಕಿದ್ದ ಏಜೆಂಟ್ ಇಂದ್ರ ಕುಮಾರ್ ಕೇಸ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆದ್ರೆ, ಬರ್ತಾ ಬರ್ತಾ ಆ ಕೇಸ್ ಬಗ್ಗೆ ಅಧಿಕಾರಿಗಳು ತಲೆನೇ ಕೆಡಿಸಿಕೊಳ್ತಿಲ್ಲ. ಪ್ರಾಧಿಕಾರಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದ್ರೂ ಅವ್ರ ಬಗ್ಗೆ ಅದೇನ್ ವ್ಯಾಮೋಹವೋ ಗೊತ್ತಿಲ್ಲ. ಕೇಸ್‌ಗೂ ತಮಗೂ ಸಂಬಂಧವೇ ಇಲ್ಲದಂತೆ ಬಿಡಿಎ ಅಧಿಕಾರಿಗಳು ಹಾಗೂ ವಕೀಲರು ಇದ್ದಾರೆ. ಪ್ರಾಧಿಕಾರದ 60 ಕ್ಕೂ ಹೆಚ್ಚು ನಿವೇಶನಗಳನ್ನ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಬೃಹತ್ ಗೋಲ್‌ಮಾಲ್ ಮಾಡಿದ್ರು.. ಪ್ರಕರದಲ್ಲಿ ಏಜೆಂಟ್ ಇಂದ್ರ ಕುಮಾರ್ ಪ್ರಮುಖ ಆರೋಪಿ. ಆದ್ರೆ, ಪ್ರಕರಣ ದಾಖಲಾಗಿ ಎರಡೂವರೆ ವರ್ಷ ಕಳೆಯುತ್ತಿದ್ರೂ, ಯಾರೊಬ್ಬರ ಮೇಲೂ ಕ್ರಮ ಆಗಿಲ್ಲ.

ಇನ್ನು ಈ ಸಂಬಂಧ ಬಿಡಿಎ ಟಾಸ್ಕ್ ಫೋರ್ಸ್ ದೂರು ದಾಖಲಿಸಿಕೊಂಡು, ಬಿಡಿಎ ಇಂಜಿನಿಯರ್‌ಗಳಾದ ಕೃಷ್ಣಮೂರ್ತಿ, ರವಿಕುಮಾರ್, ಶ್ರೀನಿವಾಸ್, ಶಬ್ಬೀರ್ ಅಹ್ಮದ್, ಎಂ.ಎಂ ಫಾರೂಖ್ ಸೇರಿ ಹಲವರ ಮೇಲೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ರು. ಆದ್ರೆ, ಕಿಲಾಡಿ ಕೇಡಿಗಳು ನ್ಯಾಯಾಲಯದಿಂದ ತಡಯಾಜ್ಞೆ ತಂದು ಆಯಕಟ್ಟಿನ ಜಾಗಗಳಲ್ಲೇ ಕೂತಿದ್ದಾರೆ. ಆರೋಪಿತರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಲು ಸರ್ಕಾರವೂ ಹಿಂದೇಟು ಹಾಕ್ತಿರೋದನ್ನು ನೋಡಿದ್ರೆ ಹಲವು ಅನುಮಾನಗಳು ವ್ಯಕ್ತವಾಗ್ತಿವೆ. ಇದೇ ಅಲ್ಲದೇ ತಡೆಯಾಜ್ಞೆಯನ್ನ ತೆರವುಗೊಳಿಸಲು ಬಿಡಿಎ ಲೀಗಲ್ ಸೆಲ್ ವಕೀಲರು ಮೀನಾಮೇಷ ಎಣಿಸುತ್ತಿದ್ದಾರೆ. ಏಜೆಂಟ್ ಇಂದ್ರ ಕುಮಾರ್ ಮನೆ ಮೇಲೆ ರೇಡ್ ಆದಾಗ, ಹತ್ತಾರು ಸಿಡಿಆರ್‌ಗಳು ದೊರೆತಿದ್ವು. ಏಜೆಂಟ್ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿದ ಬಗ್ಗೆಯೂ ಸಾಕ್ಷಿ ಸಿಕ್ಕಿತ್ತು. ಹೀಗಿದ್ರೂ ತಪ್ಪಿತಸ್ಥರ ಮೇಲೆ ಬಿಡಿಎ ಸಾಫ್ಟ್ ಕಾರ್ನರ್ ತೋರ್ತಿದೆ.

ಒಟ್ನಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಕಾನೂನು ಕೋಶದ ವೈಫಲ್ಯದಿಂದ ಸುಮಾರು 50 ಸಾವಿರ ಕೋಟಿ ಮೌಲ್ಯದ ಬಿಡಿಎ ಆಸ್ತಿ ಕಂಡೋರ ಪಾಲಾಗಿದೆ. ಈ ಕೇಸನ್ನೂ ಒಳಗೊಳಗೇ ಮುಚ್ಚಿ ಹಾಕೋ ಷಡ್ಯಂತ್ರಗಳು ನಡೀತಿವೆ. ಮಾನ್ಯ ಆಯುಕ್ತರು, ಅಧ್ಯಕ್ಷರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ರೆ, ನುಂಗಣ್ಣರು ಬರ್ಬಾದ್ ಮಾಡಿ ಬಿಡುತ್ತಾರೆ‌‌.

RELATED ARTICLES

Related Articles

TRENDING ARTICLES