Sunday, December 22, 2024

ಹೊಂಬಾಳೆ ಸಂಸ್ಥೆಯಿಂದ ಮತ್ತೊಂದು ಮೆಗಾ ಸಿನಿಮಾದ ಮುಹೂರ್ತ

ಬೆಂಗಳೂರು: ನಿನ್ನಿಂದಲೇ, ಮಾಸ್ಟರ್ ​ಪೀಸ್​, ರಾಜಕುಮಾರ್, ಕೆಜಿಎಫ್, ಕೆಜಿಎಫ್​ ಚಾಪ್ಟರ್​ 2​ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆ ಈಗ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.

ಸದ್ಯ ಈಗ ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ಮತ್ತೊಂದು ಹೊಸ ಚಿತ್ರದ ನಿರ್ಮಾಣಕ್ಕೆ ಮುಂದಾಗಿದೆ.

ಹೊಂಬಾಳೆ ಸಿನಿಮಾ ಬ್ಯಾನರ್​ ಅಡಿಯಲ್ಲಿ ವಿಜಯ್​ ಕಿರಗಂದೂರು ಅವರು ನಿರ್ಮಾಪಕರಾಗಿ, ರೋರಿಂಗ್​ ಸ್ಟಾರ್​ ಶ್ರೀಮುರುಳಿ ಅವರ ಮುಖ್ಯಭೂಮಿ ಇರುವ ಚಿತ್ರಕ್ಕೆ ‘ಬಘೀರ’ ಎಂದು ಟೈಟಲ್​ ಇಟ್ಟು ಚಿತ್ರದ ಮುಹೂರ್ತ ನೆರವೇರಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ಯಶ್​ ಅಭಿನಯದ ಲಕ್ಕಿ ಸಿನಿಮಾಕ್ಕೆ ಆ್ಯಕ್ಷನ್​ ಕಟ್​​ ಹೇಳಿರುವ ಡಾ.ಸೂರಿ ಅವರ ನಿರ್ದೇಶನವಿರುತ್ತದೆ. ಚಿತ್ರದ ಕಥೆಯನ್ನು ಕೆಜಿಎಫ್​ ರೂವಾರಿ ಪ್ರಶಾಂತ್​ ನೀಲ್​ ಅವರು ಹೊತ್ತಿದ್ದಾರೆ.

RELATED ARTICLES

Related Articles

TRENDING ARTICLES