ದಾವಣಗೆರೆ : ಅತಿಯಾದ-ಗಾಳಿ ಮಳೆಯಿಂದ ಬೆಳೆ ನಾಶ ಆಗಿದೆ. ಅಧಿಕಾರಿಗಳು ಮನೆಯಲ್ಲಿ ಕೂರದೆ ಏನು ಹಾನಿಯಾಗಿದೆ ಸರ್ಕಾರಕ್ಕೆ ವರದಿ ಕೊಡಬೇಕು ಎಂದು ದಾವಣಗೆರೆಯಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಒಟ್ಟು 2651 ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 40 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶ ಆಗಿದೆ. ಇದು ಐ ಸೈಟ್ ಮೇಲೆ ಮಾಡಿದ ಸರ್ವೇ ಅತಿಯಾದ-ಗಾಳಿ ಮಳೆಯಿಂದ ಬೆಳೆ ನಾಶ ಆಗಿದೆ. ಅಧಿಕಾರಿಗಳು ಮನೆಯಲ್ಲಿ ಕೂರದೆ ಏನು ಹಾನಿಯಾಗಿದೆ ಸರ್ಕಾರಕ್ಕೆ ವರದಿ ಕೊಡಬೇಕು ಎಂದರು.
ಅದುವಲ್ಲದೇ, ಸರ್ಕಾರದ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಈ ಭಾರೀ ಬೀಜ-ಗೊಬ್ಬರದ ಯಾವುದೇ ರೀತಿ ಕೊರತೆ ಇಲ್ಲ. ಕೆಲವು ವ್ಯಾಪಾರಸ್ತರು ಬೀಜ-ಗೊಬ್ಬರ ಇಲ್ಲ ಅಂತ ಸುದ್ದಿ ಹರಡುತ್ತಾರೆ. ಈ ಮೂಲಕ ವ್ಯಾಪಾರಸ್ತರು ಕೃತಕ ಅಭಾವ ಸೃಷ್ಟಿಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಗಮನ ಹರಿಸಿ ಅಕ್ರಮವಾಗಿ ಬೀಜ-ಗೊಬ್ಬರ ಕೃತಕ ಸೃಷ್ಟಿ ತಪ್ಪಿಸಿ ಸಕಾಲದಲ್ಲಿ ರೈತರಿಗೆ ಬೀಜ-ಗೊಬ್ಬರ ಸಿಗುವಂತೆ ಮಾಡಲಾಗುತ್ತೆ. ಬೆಳೆ ವಿಮೆ ರೈತರಿಗೆ ಸಕಾಲದಲ್ಲಿ ಬಾರದ ಹಿನ್ನಲೆಯಲ್ಲಿ 2021-22 ನೇ ಸಾಲಿನ ಬೆಳೆ ವಿಮೆ ವಾರದಲ್ಲಿ ಬರುತ್ತೆ. ಎಂದು ದಾವಣಗೆರೆಯಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.