ಬೆಂಗಳೂರು: ಇಸ್ಪೀಟ್ ಆಟದಲ್ಲಿ ಗೆಲ್ಲೋದಕ್ಕಿಂತ ಸೋಲೋದೆ ಜಾಸ್ತಿ. ಲಕ್ ಚೆನ್ನಾಗಿದ್ರೆ ಕೈ ತುಂಬಾ ದುಡ್ಡು ಮಾಡಬಹುದು.ಅದೇ ಲಕ್ ಕೈಕೊಟ್ರೆ ಮನೆ ಮಠ ಎಲ್ಲಾ ಮಾರಿಕೊಂಡು, ಮೈತುಂಬಾ ಸಾಲ ಮಾಡಿಕೊಂಡು ಬೀದಿಗೆ ಬರಬೇಕಾಗುತ್ತೆ. ಅದೇ ತರ ಇಲ್ಲೊಬ್ಬ ವ್ಯಕ್ತಿ ಈ ಇಸ್ಪೀಟ್ ಆಟ ನಂಬಿಕೊಂಡು ಬೀದಿಗೆ ಬಂದಿದ್ದಲ್ಲದೆ ಸಂಬಂಧದಲ್ಲೂ ಮಾನ ಕಳೆದುಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಬ್ಯಾಟರಾಯನಪುರ ನಿವಾಸಿ ಅಜಿತ್ ಬಂಧಿತ ಆರೋಪಿ.
ಅಂದ ಹಾಗೆ ಈ ಅಜಿತ್ ಇಸ್ಟೀಟ್ ಆಡಲು 32 ಲಕ್ಷ ಹಣ ಸಾಲ ಮಾಡಿದ್ದ. ಆ ಸಾಲ ತೀರಿಸಲು ಸ್ವಂತ ಚಿಕ್ಕಮ್ಮನ ಮನೆಯಲ್ಲಿ ಅಕ್ಷಯ ತೃತೀಯ ದಿನವೇ 613 ಗ್ರಾಂ ಚಿನ್ನಾಭರಣ ಕದ್ದು ಮಾರಾಟ ಮಾಡಿದ್ದ. ಇನ್ನು ಇದೇ ಬ್ಯಾಟರಾಯನಪುರ ಪೊಲೀಸರು ಮತ್ತೆರಡು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ . ನಗರದಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡ್ತಿದ್ದ ಆನಂದ್ ಹಾಗೂ ಮತ್ತೊಬ್ಬ ಮನೆಗಳ್ಳತನ ಪ್ರಕರಣದ ಆರೋಪಿ ಅನ್ಸರ್ ಎಂಬುವನನ್ನು ಬಂಧಿಸಿದ್ದಾರೆ.
ಒಟ್ಟಾರೆ ಬ್ಯಾಟರಾಯನಪುರ ಪೊಲೀಸರು ಮೂರು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಒಟ್ಟು 61 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 20ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.