Monday, November 4, 2024

ಚೇತನಾ ರಾಜ್​ ಸಾವಿನ ಸುತ್ತ ಹತ್ತಾರು ಅನುಮಾನ..!

ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಒಂದೆಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ರೆ. ಮತ್ತೊಂದೆಡೆ ಆರೋಗ್ಯ ಇಲಾಖೆ ಸಹ ಎಂಟ್ರಿ ಕೊಟ್ಟಿದೆ. ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ CRPC 174(C) ಅಡಿ UDR ದಾಖಲಾಗಿದ್ದು, ಡಾ.ಶೆಟ್ಟಿಸ್​ ಕ್ಲಿನಿಕ್ ಮಾಲೀಕ ಸೇರಿ ಮೂವರನ್ನ ವಿಚಾರಣೆ ಮಾಡಲಾಗಿದೆ. ಈ ನಡುವೆ ಶೆಟ್ಟಿಸ್​ ಕಾಸ್ಮೆಟಿಕ್‌ಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ನೋಟಿಸ್​ ಜಾರಿ ಮಾಡಿದ್ದಾರೆ.

ಫ್ಯಾಟ್​ ಸರ್ಜರಿಗೆ ದಾಖಲಾಗಿದ್ದ ಚೇತನಾರಾಜ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂದು ಚೇತನಾ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ, ಶೆಟ್ಟಿಸ್​ ಆಸ್ಪತ್ರೆಗೆ ನೋಟಿಸ್​ ನೀಡಲಾಗಿದೆ. ನೋಟಿಸ್ ತಲುಪಿದ ಒಂದು ದಿನದ ಒಳಗೆ ಘಟನೆಗೆ ಕಾರಣವೇನೆಂದು ಸಮಜಾಯಿಷಿ ನೀಡುವಂತೆ ಸೂಚಿಸಲಾಗಿದೆ. ಇನ್ನು, ಖುದ್ದು ಡಿಎಚ್​ಓ ಶೆಟ್ಟಿಸ್​ ಆಸ್ಪತ್ರೆಗೆ ತೆರಳಿ ಬೀಗ ಜಡಿದು ಕ್ಲೋಸ್ ಮಾಡಿಸಿ ನೋಟಿಸ್ ಅಂಟಿಸಿದ್ದಾರೆ‌. ಒಂದ್ವೇಳೆ ನೋಟಿಸ್​ಗೆ ಪ್ರತಿಕ್ರಿಯೆ ಬರದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಇದೇ ತಿಂಗಳ 16 ರಂದು 9 ಗಂಟೆಗೆ ಚೇತನಾಗೆ ಸರ್ಜರಿ ಶುರು ಮಾಡಲಾಗಿತ್ತು. ಒಂದು ಗಂಟೆ ವೇಳೆಗೆ ಸರ್ಜರಿ ಕಂಪ್ಲೀಟ್ ಮಾಡಲಾಗಿತ್ತು.. ಇದಾದ ಕೆಲವೇ ಕ್ಷಣಗಳಲ್ಲಿ ತಕ್ಷಣ ಚೇತನಾ ಹೃದಯ ಸ್ಥಬ್ದವಾಗಿತ್ತು. ಇಂಜೆಕ್ಷನ್ ಕೊಟ್ಟು ನಾರ್ಮಲ್ ಮಾಡಲು ವೈದ್ಯರು ಟ್ರೈ ಮಾಡಿದ್ದಾರೆ ಎನ್ನಲಾಗಿದೆ. ನಂತರ ಬಾಯಿಯಲ್ಲಿ ರಕ್ತ ಮಿಶ್ರಿತ ನೊರೆ ಬರಲು ಪ್ರಾರಂಭವಾಗಿದ್ದು, ಸಂಜೆ 4 ಗಂಟೆವರೆಗೆ ಕ್ಲಿನಿಕ್​ನಲ್ಲಿ ಚಿಕಿತ್ಸೆ ನೀಡಿದ್ರೂ ಸ್ಪಂದಿಸದ ಹಿನ್ನೆಲೆ ಬೇರೆ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು.. ವೈದ್ಯರ ನಿರ್ಲಕ್ಷ್ಯದಿಂದಲೇ ಮಗಳ ಮೃತಪಟ್ಟಿದ್ದಾರೆಂದು ಎಂದು ಪೋಷಕರು ಆರೋಪಿಸಿದ್ದಾರೆ.

ಚೇತನಾ ರಾಜ್ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ರಾಖಿ ಸಾವಂತ್, ವಿಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.. ಚೇತನಾ ಸಾವಿಗೆ ಕಾರಣವಾದ ಆಸ್ಪತ್ರೆ ಮತ್ತು ವೈದ್ಯರ ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ.. ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜನ್ ಆಗಬಹುದು. ಸರಿಯಾದ ವೈದ್ಯರು ಬೇಕು ಅಂದ್ರೆ ಬಾಲಿವುಡ್ ಮಂದಿ ಅಥವಾ ನನ್ನನ್ನ ಕೇಳಿ. ಯಾವ ಡಾಕ್ಟರ್ ಬೆಸ್ಟ್ ಅಂತ ನಾವು ಗೈಡ್ ಮಾಡುತ್ತೇವೆ. ಯಾರ್ಯಾರೋ ಮಾತನ್ನ ನಂಬಿ ಆಪರೇಷನ್ ಥಿಯೇಟರ್‌ಗೆ ಹೋಗಬೇಡಿ. ಇದು ಖಂಡಿತ ಸರಿಯಲ್ಲ ಎಂದು ವಿಡಿಯೋದಲ್ಲಿ ರಾಖಿ ಸಾವಂತ್ ಹೇಳಿದ್ದಾರೆ.

ಈಗಾಗಲೇ ಚೇತನಾ ಶ್ವಾಸಕೋಶ ಸೇರಿ ಕೆಲ ಅಂಗಾಂಗಗಳ ಮಾದರಿ ಸಂಗ್ರಹವನ್ನ FSLಗೆ ವೈದ್ಯರು ರವಾನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಏನೆಂದು ಸ್ಪಷ್ಟವಾಗಿ ತಿಳಿಯಲಿದೆ.

RELATED ARTICLES

Related Articles

TRENDING ARTICLES