ಬೆಂಗಳೂರು: ಇಂದು ರಾಜ್ಯದಲ್ಲಿನ 2021-22ರ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಒಟ್ಟು ಶೇ.85.63ರಷ್ಟು ಫಲಿತಾಂಶ ಪ್ರಕಟವಾಗಿದೆ.
ಕಳೆದ 10 ವರ್ಷದಲ್ಲಿ ಈ ಬಾರಿ ದಾಖಲೆ ಫಲಿತಾಂಶ ಬಂದಿದೆ. ಈ ಸಲ 8,53,436 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಬಾಲಕೀಯರು 3,72,279 (ಶೇ.90) ಮಂದಿ ಪಾಸ್ ಆಗಿದ್ದರೆ, 7,30,881 (ಶೇ.81) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ಬಾರಿಯೂ ಸಹ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಇನ್ನು ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದ್ದು, ತುಮಕೂರು ಎರಡನೇ ಸ್ಥಾನದಲ್ಲಿದೆ, ಹಾವೇರಿ ಮೂರನೇ ಸ್ಥಾನ ದೊರೆತಿದ್ದು, ಬೆಳಗಾವಿ ನಾಲ್ಕನೇ ಸ್ಥಾನದಲ್ಲಿದೆ.
ಈ ಸಲ 145 ವಿದ್ಯಾರ್ಥಿಗಳಿಗೆ 625 ಅಂಕಗಳಿಗೆ 625 ಅಂಕ ಪಡೆದು ದಾಖಲೆ ಬರೆದಿದ್ದಾರೆ. ರಾಜ್ಯ 3,920 ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದೆ.
ಫಲಿತಾಂಶಕ್ಕಾಗಿ ಈ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ http://karresults.nic.in/ ಆಲ್ ದಿ ಬೆಸ್ಟ್