Wednesday, January 22, 2025

ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಬರೆದ ಹಾರ್ದಿಕ್​​​ ಪಟೇಲ್​​​​

ಗುಜರಾತ್​ : ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಹಾರ್ದಿಕ್ ಪಟೇಲ್, ಈಗ ಸಂಪೂರ್ಣವಾಗಿ ಕಾಂಗ್ರೆಸ್ ಹೊಸ್ತಿಲು ದಾಟಿದ್ದಾರೆ.

ನಾನು ಕಾಂಗ್ರೆಸ್ ಪಕ್ಷ ಮತ್ತು ಹುದ್ದೆಗೆ ರಾಜೀನಾಮೆ ಸಲ್ಲಿಸುವ ಧೈರ್ಯವನ್ನು ಒಗ್ಗೂಡಿಸಿಕೊಳ್ಳುತ್ತಿದ್ದೇನೆ. ನನ್ನ ನಿರ್ಧಾರವನ್ನು ನನ್ನ ಸಹೋದ್ಯೋಗಿಗಳು ಮತ್ತು ಗುಜರಾತ್‌ನ ಜನರು ಸ್ವಾಗತಿಸಲಿದ್ದಾರೆ ಎಂದು ನನಗೆ ಖಾತರಿ ಇದೆ. ಈ ಹೆಜ್ಜೆಯೊಂದಿಗೆ ನಾನು ಭವಿಷ್ಯದಲ್ಲಿ ಗುಜರಾತ್‌ಗಾಗಿ ನಿಜಕ್ಕೂ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ನಂಬಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಾರ್ದಿಕ್ ಪಟೇಲ್ ಹಂಚಿಕೊಂಡಿದ್ದಾರೆ.

ಇನ್ನು. ಸೋನಿಯಾ ಗಾಂಧಿ ಅವರಿಗೆ ಸುದೀರ್ಘ ರಾಜೀನಾಮೆ ಪತ್ರ ಬರೆದಿರುವ ಹಾರ್ದಿಕ್ ಪಟೇಲ್, ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಭೀರ ಸನ್ನಿವೇಶಗಳಲ್ಲಿ ಭಾರತದಲ್ಲಿ ಇರುವುದು ಅಗತ್ಯವಾಗಿರುವಾಗ ನಮ್ಮ ನಾಯಕ ವಿದೇಶದಲ್ಲಿ ಇರುತ್ತಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಗುಜರಾತ್ ಭೇಟಿಯ ಬಳಿಕ ಇಬ್ಬರ ಸಭೆ ಫಲಪ್ರದವಾಗಿಲ್ಲ. “ನಾನು ಹಿರಿಯ ನಾಯಕರನ್ನು ಭೇಟಿ ಮಾಡಿದಾಗ, ಅವರು ತಮ್ಮ ಮೊಬೈಲ್ ಫೋನ್‌ಗಳಿಂದ ಮತ್ತು ಇತರೆ ಸಮಸ್ಯೆಗಳಿಂದ ಅಡಚಣೆಗೆ ಒಳಗಾದವರಂತೆ ಕಂಡುಬರುತ್ತಾರೆ. ಗುಜರಾತ್‌ಗೆ ಸಂಬಂಧಿಸಿದ ವಿಷಯಗಳನ್ನು ಆಲಿಸಲು ಅವರು ವಿರೋಧಿಸುತ್ತಾರೆ” ಎಂದು ಯಾರನ್ನೂ ಹೆಸರಿಸದೆ ಅವರು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES