ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಶತ್ರುವನ್ನ ಮಿತ್ರ ಮಾಡಿಕೊಳ್ಳಲು ಹೊರಟ ಶತ್ರುವಿನ ಶತ್ರು ಮಿತ್ರ ಡಿಕೆಶಿಗೆ ಮಿತ್ರ ಆಗ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಶತ್ರುವನ್ನ ಮಿತ್ರ ಮಾಡಿಕೊಳ್ಳಲು ಹೊರಟ ಡಿಕೆಶಿ. ಕಳೆದ ಬಾರಿ ಪರಿಷತ್ ಟಿಕೆಟ್ ತಪ್ಪಿಸಿದ್ದಕ್ಕೆ ಕೋಪಗೊಂಡಿದ್ದು, ಈ ಕೋಪವನ್ನೆ ಲಾಭ ಮಾಡಿಕೊಳ್ಳಲು ಹೊರಟ್ರಾ ಕೆಪಿಸಿಸಿ ಅಧ್ಯಕ್ಷ..? ಹಾಗೆನೇ ಎಸ್.ಆರ್ ಪಾಟೀಲ್ ಗೆ ಪರಿಷತ್ ಟಿಕೆಟ್ ಬಹುತೇಕ ಖಚಿತಗೊಂಡಿದೆ.
ಅದುವಲ್ಲದೇ, ಎಸ್.ಆರ್ ಪಾಟೀಲ್ ಪರ ಡಿಕೆಶಿ ಹಾಗೂ ಬಿಕೆ ಹರಿಪ್ರಸಾದ್ ಬ್ಯಾಟಿಂಗ್ ಮಾಡಿದ್ದು, ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿರುವ ಎಸ್.ಆರ್ ಪಾಟೀಲ್ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ಕಾರಣ ಎಂಬ ಮುನಿಸು ಎಸ್.ಆರ್ ಪಾಟೀಲ್ಗೆ ಇದೆ ಹಾಗಾಗಿ ಈ ಬಾರಿ ಎಸ್.ಆರ್ ಪಾಟೀಲ್ ಪರ ಡಿಕೆಶಿ, ಹಾಗೂ ಬಿಕೆ ಹರಿಪ್ರಸಾದ್ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು, ಕಿತ್ತೂರು ಕರ್ನಾಟಕ ಭಾಗದಲ್ಲಿ ಎಂಬಿ ಪಾಟೀಲ್ ಪ್ರಭಾವಿ ನಾಯಕ ಆ ವಿಭಾಗದಲ್ಲಿ ಸಿದ್ದರಾಮಯ್ಯ ಮಾತನ್ನು ಎಂಬಿಪಿ ಪಾಲಿಸುತ್ತಾರೆ. ಕಿತ್ತೂರು ಕರ್ನಾಟಕದ ಭಾಗದಲ್ಲಿ ಪ್ರಭಾವಿ ನಾಯಕ ನಮ್ಮ ಬೆಂಬಲಕ್ಕೆ ಯಾರು ಇಲ್ಲ. ಹೀಗಾಗಿ ಪ್ರಭಾವಿ ಲಿಂಗಾಯತ ನಾಯಕನನ್ನು ಒಲೈಸುವ ಲೆಕ್ಕಾಚಾರದಲ್ಲಿ ಎಸ್.ಆರ್.ಪಾಟೀಲ್ ಪರಿಷತ್ ಗೆ ಆಯ್ಕೆ ಆದರೆ ಮುಂದೆ ಡಿಕೆಶಿ ಪರ ನಿಲ್ತಾರೆ ಎಂಬ ಈ ಎಲ್ಲಾ ಕಾರಣದಿಂದ ಎಸ್.ಆರ್. ಪಾಟೀಲ್ ರನ್ನು ಪರಿಷತ್ ಆಯ್ಕೆ ಮಾಡುವಂತೆ ಶಿಫಾರಸ್ಸು ಮಾಡಲು ಡಿಕೆಶಿ, ಹರಿಪ್ರಸಾದ್ ಮುಂದಾಗಿದ್ದಾರೆ.