Tuesday, November 19, 2024

ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು : ಡಿ.ಕೆ ಶಿವಕುಮಾರ್​

ಬೆಂಗಳೂರು: ಅಭಿವೃದ್ಧಿ ಅಜೆಂಡಾ ಬಿಟ್ಟು ಕಮ್ಯನಲ್ ಅಜೆಂಡಾ ಮುಂದಿಡ್ತಾ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಇಲ್ಲಿ ಬಂಡವಾಳ ಹೂಡಿಕೆ ಮೊದಲಿನಂತೆ ಆಸಕ್ತಿ ತೋರ್ತಾ ಇಲ್ಲ. ಅಭಿವೃದ್ಧಿ ಅಜೆಂಡಾ ಬಿಟ್ಟು ಕಮ್ಯನಲ್ ಅಜೆಂಡಾ ಮುಂದಿಡ್ತಾ ಇದಾರೆ. ಅವರ ಮಾಡಿರುವ ಬಜೆಟ್ ಬಗ್ಗೆ ಅವರೇ ಮಾತನಾಡಲು ಆಗ್ತಾ ಇಲ್ಲ. ನಿರ್ಮಾಲ ಸೀತಾರಾಂ ಇಲ್ಲಿಂದ ಹೋದರು ಬೆಂಗಳೂರಿಗೆ ಏನು ಕೊಟ್ರು ಏನಾದರು ಕೊಡುಗೆ ಇದೆಯಾ ಎಂದು ವ್ಯಂಗ್ಯವಾಡಿದರು.

ಅದುವಲ್ಲದೇ, ಈಗ ಬಿಜೆಪಿಯವರು ಮಳೆ ಬಂತು ಅಂತಾ ಚತ್ರಿ ಕೆಳೆಗೆ ನಿಂತುಕೊಂಡು ನೋಡ್ತಾ ಇದಿನಿ ಅಂದರೆ ಏನು ಪ್ರಯೋಜನ ಚನ್ನಾಗಿರು ರಸ್ತೆ ಎಲ್ಲಾ ಕಿತ್ತು ಹಾಕ್ತಾ ಇದಾರೆ. ಕುಮಾರಸ್ವಾಮಿ ಕಾಂಗ್ರೆಸ್ ಏನು ಮಾಡಿಲ್ಲ ಎಂಬ ವಿಚಾರ ಕುಮಾರಸ್ವಾಮಿ ಆರೋಪ ಮಾಡ್ತಾ ಇರ್ತಾರೆ  ಮಾಡಿಕೊಂಡು ಹೋಗಲಿ ನಮ್ಮ ಕೆಲಸ ನಾವು ಮಾಡ್ತಿವಿ ಮುಂದೆ ನಾವು ಬೆಂಗಳೂರಿಗೆ ಪ್ರತ್ಯೇಕ ಮ್ಯಾನಿಫೆಸ್ಟೋ ಮಾಡ್ತಿವಿ ನಾನು ನಗರಾಭಿವೃದ್ಧಿ ಸಚಿವ ಆಗಿದ್ದವನು. ನನಗೆ ಗೊತ್ತಿದೆ . ಬೆಂಗಳೂರು ಎಷ್ಟು ಇಂಪಾರ್ಟೆಂಟ್ ಅನ್ನೋದು ಗೊತ್ತು ಎಂದರು.

ಇನ್ನು ಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಎರಡು ಸ್ಥಾನಕ್ಕೆ ಹಲವರು ಬೇಡಿಕೆ ಇಟ್ಟಿದ್ದಾರೆ. ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ನಾಳೆ ಮಾತನಾಡ್ತೇವೆ. ಈಗಾಗಲೇ ಒಂದು ಸುತ್ತು ಮಾತನಾಡಿದ್ದೇವೆ. ಎಲ್ಲವನ್ನು ಚರ್ಚಿಸಿ ಪಟ್ಟಿ ಅಂತಿಮಗೊಳಿಸುತ್ತೇವೆ. ರಾಜ್ಯಸಭೆ ವಿಚಾರಕ್ಕೆ ಪಕ್ಷದಲ್ಲಿ ಪದ್ದತಿ ಇದೆ. ಸರ್ಕಾರ ಇರಲಿ ಇಲ್ಲದೇ ಇರಲಿ ಹೈಕಮಾಂಡ್ ಹೇಳಿಂದಂತೆ ನಿರ್ಧಾರ ಮಾಡ್ತೇವೆ ಎಂದು ಹೇಳಿದರು.

ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಕರೆತರುವ ವಿಚಾರವಾಗಿ ಮಾತನಾಡಿದ ಅವರು, ದಕ್ಷಿಣದೆಲ್ಲೆಲ್ಲಾ ಚುನಾವಣೆಯಲ್ಲಿ ಕೆಲಸ ಮಾಡಿದಾರೆ. ಇಲ್ಲೂ ಬರಲಿ ಹೀಗಾಗಿ ರಾಜ್ಯಕ್ಕೆ ಬಂದರೆ ಚುನಾವಣೆ ಸಹಾಯ ಆಗುತ್ತೆ ಅಂತಾ ಡಿ ಕೆ ಶಿವಕುಮಾರ್ ಹೇಳಿಕೆ ಚೆನ್ನಾಗಿರುವ ರಸ್ತೆ ಪುಟ್ ಪಾತ್ ಕಿತ್ತು ಹಾಕಿದ್ದಾರೆ. ಮಲ್ಲೇಶ್ವರ ದಲ್ಲಿ ಮೂರು ವರ್ಷದ ಹಿಂದೆ ಮಾಡಿದ್ದ ಪುಟ್ ಪಾತ್ ಕಿತ್ತು ಹಾಕಿದ್ದಾರೆ. ಬೆಂಗಳೂರಿನ ಬಹುತೇಕ ರಸ್ತೆ ಮಾಡ್ತಾ ಇದ್ದಾರೆ. ಚೆನ್ನಾಗಿರುವ ರಸ್ತೆ ಅಗೆದಿದ್ದಾರೆ. ಏನೋ ಸ್ಮಾರ್ಟ್ ಸಿಟಿ ಅಂತೆ ಕೆಟ್ಟಿರುವ ರಸ್ತೆ ಮಾಡಬೇಕು. ಚೆನ್ನಾಗಿರುವ ರಸ್ತೆ ಯಾಕೆ ಅಗಿತಾ ಇದ್ದಾರೆ ಎಂದು ಅವೈಜ್ಞಾನಿಕ ಕಾಮಗಾರಿ ವಿರುದ್ಧ ಡಿಕೆಶಿ ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES