Monday, December 23, 2024

ಬೆಂಗಳೂರಿನ ಪ್ರತಿಷ್ಠಿತ ಶಾಲೆ ವಿದ್ಯಾರ್ಥಿನಿಯರ ಸ್ಟ್ರೀಟ್ ಫೈಟ್

ಬೆಂಗಳೂರು : ನಡು ರಸ್ತೆಯಲ್ಲಿ ನಿಂತು ವಿದ್ಯಾರ್ಥಿನಿಯರು ಕೈ-ಕೈ ಮಿಲಾಯಿಸಿರುವ ಘಟನೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿದೆ.

ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರು ಹಾಕಿ ಸ್ಟಿಕ್ ಹಿಡಿದು ಹಾಕಿ ಸ್ಟಿಕ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಸುಮಾರು 20 ವಿದ್ಯಾರ್ಥಿನಿಯರು ನಡು ರಸ್ತೆಯಲ್ಲೇ ಜುಟ್ಟಿಡಿದು ಎಳೆದಾಡಿಕೊಂಡಿದ್ದಾರೆ. ಇನ್​​​ಸ್ಟಾಗ್ರಾಮ್​​ನಲ್ಲಿ ಬಂದ ಪೋಸ್ಟ್ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಲಾಟೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು ಸಹ ಭಾಗಿಯಾಗಿದ್ದು, ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ಯಾವುದೇ ರೀತಿಯ ಕೇಸ್ ದಾಖಲಾಗಿಲ್ಲ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES