ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡಿಮೆ ಅವಧಿಯಲ್ಲಿ ತುಂಬಾ ಜಾಸ್ತಿ ಮಳೆಯಾಗಿದೆ ಇದಕ್ಕಿಂತ ಹೆಚ್ಚು ಮಳೆಯನ್ನೂ ನಾವು ನೋಡಿದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಿನ್ನೆ ವ್ಯಾಪಕವಾಗಿ, ಎಲ್ಲಾ ಕಡೆಯೂ ಭಾರೀ ಪ್ರಮಾಣದ ಮಳೆಯಾಗಿದೆ. ಹೀಗಾಗಿ ಮಳೆನೀರು ರಸ್ತೆಮೇಲೆ ಹರಿದಿದೆ ರಸ್ತೆಗಳಿಗೆ ಈ ಪ್ರಮಾಣದ ಮಳೆ ಎದುರಿಸುವ ಕೆಪಾಸಿಟಿ ಇಲ್ಲ. ಸಾಮಾನ್ಯ ಮಳೆಯ ಪ್ರಮಾಣಕ್ಕೆ ಇವುಗಳನ್ನು ನಿರ್ಮಿಸಲಾಗಿದೆ ಎಂದರು.
ಅದುವಲ್ಲದೆ, ಪೂರ್ವ, ಪಶ್ಚಿಮ ಹಾಗೂ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಮಳೆಯಾದ ಪ್ರಥಮ ವರದಿಯಾಗಿತ್ತು, ಆದರೆ ಉತ್ತರ, ಯಲಹಂಕದಲ್ಲೂ ಮಳೆಯಾಗಿದೆ, ಆದರೆ ಹೆಚ್ಚು ಪರಿಣಾಮ ಆಗಿಲ್ಲ. ಇಡೀ ರಾತ್ರಿ ಪಾಲಿಕೆ ಅಧಿಕಾರಿಗಳು, ಫೈರ್ ಫೋರ್ಸಸ್ ಇಡೀ ರಾತ್ರಿ ಕೆಲಸ ಮಾಡಿದೆ. ಮನೆಗೆ ನೀರು ನುಗ್ಗಿರುವ ಕಡೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇವತ್ತೂ ಕೂಡಾ ಮನೆಗಳಿಗೆ ನೀರು ನುಗ್ಗಿರುವ ಕಡೆ ಮನೆಯಿಂದ ನೀರು ಹೊರಗೆ ಹಾಕಲಾಗ್ತಿದೆ. 400 ಕ್ಕೂ ಹೆಚ್ಚು ದೂರುಗಳು ಬಂದಿವೆ. ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ ಮರ ಹೆಚ್ಚು ಕಡೆ ಬಿದ್ದಿಲ್ಲ ಎಂದರು.